ಜು. 25 ರಿಂದ ರಾಷ್ಟ್ರೀಯ ಮಟ್ಟದ ಬೃಹತ್ ರೈತ ಸಮಾವೇಶ ಗಣ್ಯರ ದಂಡು ಕಲಬುರಗಿಗೆ: ಮಾಲೀಕಯ್ಯ ಗುತ್ತೇದಾರ್

ಜು. 25 ರಿಂದ ರಾಷ್ಟ್ರೀಯ ಮಟ್ಟದ ಬೃಹತ್ ರೈತ ಸಮಾವೇಶ ಗಣ್ಯರ ದಂಡು ಕಲಬುರಗಿಗೆ: ಮಾಲೀಕಯ್ಯ ಗುತ್ತೇದಾರ್

ಜು. 25 ರಿಂದ ರಾಷ್ಟ್ರೀಯ ಮಟ್ಟದ ಬೃಹತ್ ರೈತ ಸಮಾವೇಶ ಗಣ್ಯರ ದಂಡು ಕಲಬುರಗಿಗೆ: ಮಾಲೀಕಯ್ಯ ಗುತ್ತೇದಾರ್

ಕಲಬುರಗಿ : ರಾಷ್ಟ್ರೀಯ ಮಟ್ಟದ ಬೃಹತ್ ರೈತ ಸಮಾವೇಶವನ್ನು ಜುಲೈ 25 ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಬೃಹತ್ ರೈತ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು. 

    ಕಲಬುರಗಿಯ ಹೋಟೆಲ್ ಬೃಂದಾವನ ಗ್ರ್ಯಾಂಡ್ ನಲ್ಲಿ ಜೂನ್ 20 ರಂದು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಜೊತೆ ಸ್ವಾಗತ ಸಮಿತಿ ಹಾಗು ನವ ಕರ್ನಾಟಕ ರೈತ ಸಮಿತಿ ನೇತೃತ್ವದಲ್ಲಿ ನಡೆಸಿದ ಪೂರ್ವಸಿದ್ಧತಾ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ 

ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜುಲೈ 25, 26 ಮತ್ತು 27ರಂದು ಮೂರು ದಿನ ರಾಷ್ಟ್ರೀಯ ಮಟ್ಟದ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಉಕ್ಕು ಮತ್ತು ಗಣಿ ಖಾತೆ ಸಚಿವರಾದ ಎಚ್. ಡಿ ಕುಮಾರಸ್ವಾಮಿ, ಸಾರಿಗೆ ಸಚಿವರಾದ ನಿತಿನ್ ಗಡ್ಕರಿ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರ ಸಚಿವರಾದ ಪ್ರಲ್ಹಾದ ಜೋಶಿ, ಜಲಸಂಪನ್ಮೂಲ ಸಚಿವರಾದ ಸಿ.ಆರ್ ಪಾಟೀಲ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ಜಲ ಸಂಪನ್ಮೂಲ ಸಚಿವರಾದ ರಾಮಲಿಂಗಾ ರೆಡ್ಡಿ, ಗೃಹ ಸಚಿವರಾದ ಪ್ರಿಯಾಂಕ ಖರ್ಗೆ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ನೀರಾವರಿತಜ್ಞ ರಾಜಸ್ಥಾನದ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದರು.

*ಸಮ್ಮೇಳನದ ಆಶಯ*

   ರಾಷ್ಟ್ರೀಯ ಮಟ್ಟದ ಮೂರು ದಿನಗಳ ಬೃಹತ್ ರೈತ ಸಮಾವೇಶದಲ್ಲಿ ಸಾವಯವ ಕೃಷಿಗೆ ಉತ್ತೇಜನ, ಡಾ. ಸ್ವಾಮಿನಾಥನ್ ವರದಿಯ ಆಧಾರದ ಮೇಲೆ ಬೆಂಬಲ ಬೆಲೆ ಘೋಷಣೆ ಮತ್ತು ಸರಕಾರವೇ ಕೃಷಿ ಉತ್ಪನ್ನ ಖರೀದಿ, ಗ್ರಾಮ ಸ್ವರಾಜ್ ಜಾರಿ, ದೇಸಿ ಆಹಾರ ಪದ್ಧತಿಯ ಶೈಲಿ ಮುಂತಾದ ಆಶಯಗಳನ್ನು ಇಟ್ಟುಕೊಂಡು ವಿಚಾರಗೋಷ್ಠಿ ಮತ್ತು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ನಿರ್ಣಯ ಮಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು. ಇದಕ್ಕಾಗಿ ರಾಷ್ಟ್ರದ ಉದ್ದಗಲಕ್ಕೂ ಪ್ರವಾಸ ಮಾಡಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಜೂನ್ 24ರಂದು ಕೃಷಿ ತಜ್ಞರನ್ನು ಭೇಟಿಯಾಗಲು ಗುಜರಾತ್ ಪ್ರವಾಸ ಕೈಗೊಳ್ಳಲಾಗುವುದು ಎಂದು ಗುತ್ತೇದಾರ್ ಹೇಳಿದರು. 

 *20 ಉಪ ಸಮಿತಿಗಳ ರಚನೆ*

ಮೂರು ದಿನಗಳ ಸಮಾವೇಶದ ಯಶಸ್ವಿಗಾಗಿ ಸ್ವಾಗತ ಸಮಿತಿಯ ಜೊತೆಗೆ 20 ಉಪಸಮಿತಿಗಳನ್ನು ರಚಿಸಲಾಗಿದೆ. ವಸತಿ, ಸಾರಿಗೆ,ಆಹಾರಕ್ಕಾಗಿ ವಿಶೇಷ ಒತ್ತು ನೀಡಲಾಗಿದೆ.ಆರ್ಥಿಕ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಸಮ್ಮೇಳನಕ್ಕೆ ಪಕ್ಷಾತೀತವಾಗಿ ಎಲ್ಲರನ್ನು ಆಹ್ವಾನಿಸಲಾಗಿದೆ. ಜೊತೆಗೆ ಡಾ. ಬಸವರಾಜ ಪಾಟೀಲ್ ಸೇಡಂ (ಗೌರವಾಧ್ಯಕ್ಷರು) ದಯಾನಂದ ಪಾಟೀಲ್ (ಕಾರ್ಯಾಧ್ಯಕ್ಷರು) ಮಾಲಿಕಯ್ಯ ಗುತ್ತೇದಾರ್ (ಅಧ್ಯಕ್ಷರು) ಬಸವರಾಜ್ ದೇಶಮುಖ್ ಮತ್ತು ಶಿವಕಾಂತ್ ಮಹಾಜನ್ (ಉಪಾಧ್ಯಕ್ಷರು) ಜಿ.ಕೆ ಪಾಟೀಲ್ , ತೇಲಕೂರ್ (ಕಾರ್ಯದರ್ಶಿ) ಸಂತೋಷ್ ಗುತ್ತೇದಾರ್ ಅಳಂದ (ಕೋಶಾಧಿಕಾರಿ) ದಿವ್ಯಾ ಹಾಗರಗಿ (ಸಮಿತಿ ಸದಸ್ಯರು ಇವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಗುತ್ತೇದಾರ್ ಹೇಳಿದರು.

   ಪೂರ್ವ ಸಿದ್ಧತಾ ಸಭೆಯಲ್ಲಿ ಹೋಟೆಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್, ಬಾಲರಾಜ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ್, ಜಿಕೆ ಪಾಟೀಲ್ ತೆಲ್ಕೂರ್, ರಾಜೇಶ್ ಡಿ. ಗುತ್ತೇದಾರ್ ಡಾ. ಸದಾನಂದ ಪೆರ್ಲ, ರಾಜೇಶ್ ಹಾಗರಗಿ, ಭಗವಂತ ಪಾಟೀಲ್ ,ದಿವ್ಯಾ ಹಾ, ಚೆನ್ನಬಸವ ಪಾಟೀಲ್ ಮತ್ತಿತರರು ಇದ್ದರು. ಕಲಬುರಗಿಯಲ್ಲಿ ಬೃಹತ್ ರೈತ

 ಸಮಾವೇಶ ಆಯೋಜನೆಯ ನೇತೃತ್ವ ವಹಿಸಿದ ಮಾಲಿಕಯ್ಯ ಗುತ್ತೇದಾರ್ ಅವರಿಗೆ ವಿಶೇಷ ಸನ್ಮಾನ ನೆರೆವೇರಿಸಲಾಯಿತು