ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ.

ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ.

ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹ.

ಶಹಪುರ : ಕರ್ನಾಟಕದಲ್ಲಿ ಶೈಕ್ಷಣಿಕ,ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ರಜಪೂತ ಸಮಾಜದ ಏಳಿಗೆಗಾಗಿ ಕರ್ನಾಟಕ ಸರಕಾರ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕೆಂದು ಸಮಾಜದ ಮುಖಂಡರು ಆಗ್ರಹಿಸಿ ತಹಸಿಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ದೋರನಹಳ್ಳಿ ನಾಡಕಚೇರಿಯ ಉಪ ತಹ ಸಿಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು ಲಕ್ಷಾಂತರ ಮತದಾರ ಹೊಂದಿರುವ ಈ ನಮ್ಮ ರಜಪೂತ ಸಮಾಜಕ್ಕೆ ಸರಿಯಾದ ಸ್ಥಾನ ಮಾನ ಸಿಗದೇ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಜಪೂತ ಸಮಾಜದ ಅಭಿವೃದ್ಧಿಗಾಗಿ ಹಾಗೂ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಆಗಲೇಬೇಕು,ಅಂದಾಗ ಮಾತ್ರ ಉತ್ತಮ ಸ್ಥಾನಮಾನಗಳು ಸಿಗುವುದರ ಜೊತೆಗೆ ಪ್ರೋತ್ಸಾಹವು ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಡೀ ರಜಪೂತ ಸಮಾಜದ ಬಾಂಧವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ವಿಜಯ ಸಿಂಗ್ ಠಾಕೂರ್,ಸಂತೋಷ್ ಸಿಂಗ್,ಹನುಮಾನ ಸಿಂಗ್,ಚಂದು ಸಿಂಗ್,ನಾಗೇಂದ್ರ ಸಿಂಗ್,ರಾಜೇಂದ್ರ ಸಿಂಗ್, ನರಸಿಂಗ್,ರಣಧೀರ ಸಿಂಗ್, ಸೇರಿದಂತೆ ನೂರಾರು ಜನರು ಹಾಜರಿದ್ದರು.