ವಿದ್ಯುತ್ ಬಿಲ್ ಕಲೆಕ್ಟರ್ ವಿರುದ್ಧ ಸೂಕ್ತ ಕ್ರಮಕ್ಕೆ - ಪ್ರದೀಪ್ ಅಣಬಿ ಆಗ್ರಹ.

ವಿದ್ಯುತ್ ಬಿಲ್ ಕಲೆಕ್ಟರ್ ವಿರುದ್ಧ ಸೂಕ್ತ ಕ್ರಮಕ್ಕೆ - ಪ್ರದೀಪ್ ಅಣಬಿ ಆಗ್ರಹ.

ವಿದ್ಯುತ್ ಬಿಲ್ ಕಲೆಕ್ಟರ್ ವಿರುದ್ಧ ಸೂಕ್ತ ಕ್ರಮಕ್ಕೆ - ಪ್ರದೀಪ್ ಅಣಬಿ ಆಗ್ರಹ. 

ಶಹಪುರ : ಸರಿಯಾದ ಮೀಟರ್ ರೀಡಿಂಗ್ ದಾಖಲಿಸದೆ, ಬೇಕಾಬಿಟ್ಟಿಯಾಗಿ ವಿದ್ಯುತ್ ಬಿಲ್ ವಿಧಿಸುತ್ತಿರುವ ಬೇವಿನಹಳ್ಳಿ (ಜೆ) ಗ್ರಾಮದ ಬಿಲ್ ಕಲೆಕ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಶಹಾಪೂರ ನಗರದ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಯಾಗಿ ಕರ್ತವ್ಯ ನಿರ್ವಹಿಸದೆ ನಿರ್ಲಕ್ಷಿಸುತ್ತಿದ್ದಾರೆ ಇದರಿಂದ ಬಡವರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಇವರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನುಡಿದರು.

ತಪ್ಪಾದ ಮೀಟರ್ ರೀಡಿಂಗ್ ನಮೂದಿಸಿ,ಗ್ರಾಹಕರಿಗೆ ಹೆಚ್ಚುವರಿ ಬಿಲ್ ವಿಧಿಸಿ, ಇದರಿಂದ ರೈತರಿಗೆ,ಬಡವರಿಗೆ, ಕೂಲಿ ಕಾರ್ಮಿಕರಿಗೆ,ತುಂಬಾ ತೊಂದರೆಯಾಗುತ್ತಿದೆ ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಶಿವು ದೊರಿ,ದೇವರಾಜ,ನಿಂಗು,ಸಂಗು, ದೇವು ದೊರೆ,ರಮೇಶ ಬೂತನೂರ,ಮಹಾಂತೇಶ್ ನಾಯ್ಕೋಡಿ,ಬಸು ವಡಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.