ಕಾ.ನಿ.ಪ. ಧ್ವನಿ ಗದಗ ಜಿಲ್ಲಾ ಗೌರವಾಧ್ಯಕ್ಷರಾಗಿ ರಾಷ್ಟ್ರ ಕ್ರಾಂತಿ ನ್ಯೂಸ್ ಸಂಪಾದಕ ಅಂದಪ್ಪ ಮಾದರ ಅವಿರೋಧ ಆಯ್ಕೆ.

ಕಾ.ನಿ.ಪ. ಧ್ವನಿ ಗದಗ ಜಿಲ್ಲಾ ಗೌರವಾಧ್ಯಕ್ಷರಾಗಿ ರಾಷ್ಟ್ರ ಕ್ರಾಂತಿ ನ್ಯೂಸ್ ಸಂಪಾದಕ ಅಂದಪ್ಪ ಮಾದರ ಅವಿರೋಧ ಆಯ್ಕೆ.

ಕಾ.ನಿ.ಪ. ಧ್ವನಿ ಗದಗ ಜಿಲ್ಲಾ ಗೌರವಾಧ್ಯಕ್ಷರಾಗಿ ರಾಷ್ಟ್ರ ಕ್ರಾಂತಿ ನ್ಯೂಸ್ ಸಂಪಾದಕ ಅಂದಪ್ಪ ಮಾದರ ಅವಿರೋಧ ಆಯ್ಕೆ.

 ಜಿಲ್ಲಾ ಅಧ್ಯಕ್ಷರಾಗಿ ಸೂಡಿಯ ಡಿ.ಎಂ. ಯಲಬುರ್ಗಿ ನೇಮಕ.

ಗದಗ ಜೂನ್ 9: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾ.ನಿ.ಪ. ಧ್ವನಿ) ಸಂಘಟನೆಯ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ರೋಣ ನಗರದ ಲೋಕೋಪಯೋಗಿ ಇಲಾಖೆಯ (PWD) ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು.

ಸಂಘಟನೆಯ ಗದಗ ಜಿಲ್ಲಾ ನೂತನ ಗೌರವಾಧ್ಯಕ್ಷರಾಗಿ ಪ್ರಖ್ಯಾತ ರಾಷ್ಟ್ರ ಕ್ರಾಂತಿ ನ್ಯೂಸ್ ಸಂಪಾದಕರೂ ಹಾಗೂ ವಿಶ್ವ ದರ್ಶನ ದಿನಪತ್ರಿಕೆ ಜಿಲ್ಲಾ ಪತ್ರಕರ್ತರೂ ಆದ ಶ್ರೀ ಅಂದಪ್ಪ ಮಾದರ ಅವರನ್ನು ಸರ್ವ ಸದಸ್ಯರ ಒಮ್ಮತದ ಮೇರೆಗೆ ಅತ್ಯಂತ ಗೌರವಪೂರ್ವಕವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಸೂಡಿ ಗ್ರಾಮದ ಸೂಪರ್ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ ಡಿ.ಎಂ. ಯಲಬುರ್ಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಉಪಾಧ್ಯಕ್ಷರಾಗಿ ಕುಮಾರ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ವಿ. ಸಂಕನಗೌಡರ, ಸಂಘಟನಾ ಕಾರ್ಯದರ್ಶಿಯಾಗಿ ಅಭಿಷೇಕ ಕೊಪ್ಪದ, ಸಹ ಕಾರ್ಯದರ್ಶಿಯಾಗಿ ಎಚ್.ವಿ. ಈಟಿ, ಖಜಾಂಚಿಯಾಗಿ ಮಂಜುನಾಥ ಹೂವಿನಾಳ ಹಾಗೂ ನಿರ್ದೇಶಕರಾಗಿ ಎಂ.ಎಸ್. ಮಲ್ಲನಗೌಡರ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕನಕಪ್ಪ ಕೊತಬಾಳ, ಮಂಜುನಾಥ ಬಂಡಿವಡ್ಡರ, ಶರಣಪ್ಪಗೌಡ ಸಣ್ಣಸಕ್ಕರಗೌಡರ, ಪ್ರಶಾಂತ ಜಕ್ಕಲಿ ಹಾಗೂ ಮುರ್ತುಜಾ ಹುಬ್ಬಳ್ಳಿ ಅವರನ್ನು ನೇಮಕ ಮಾಡಲಾಗಿದೆ.

ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡುವುದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯ ಯಾವುದೇ ಪತ್ರಕರ್ತರಿಗೆ ಕಷ್ಟ-ಸುಖಗಳು ಬಂದರೂ ನಾವೆಲ್ಲರೂ ಒಂದಾಗಿ ಹೆಗಲು ಕೊಡಲಿದ್ದೇವೆ. ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ, ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅವರ ಹಿತರಕ್ಷಣೆ ಮತ್ತು ಸುರಕ್ಷತೆಗೆ ಸದಾ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ.

 ಅಂದಪ್ಪ ಮಾದರ ನೂತನ ಗೌರವಾಧ್ಯಕ್ಷರು, ಕಾ.ನಿ.ಪ. ಧ್ವನಿ ಸಂಘಟನೆ, ಗದಗ ಜಿಲ್ಲೆ.

ಈ ಸಂಘಟನೆಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಕಾರ್ಯಪ್ರವೃತ್ತರಾಗಬೇಕಿದೆ. ನಮಗೆ ಸಿಕ್ಕಿರುವ ಸ್ಥಾನಗಳನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿಭಾಯಿಸಬೇಕು. ಕಷ್ಟದಲ್ಲಿರುವ ಪತ್ರಕರ್ತರಿಗೆ ತಕ್ಷಣ ಸ್ಪಂದಿಸುವುದು ಸಂಘದ ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ.

ಡಿ.ಎಂ. ಯಲಬುರ್ಗಿ ನೂತನ ಜಿಲ್ಲಾ ಅಧ್ಯಕ್ಷರು, ಕಾ.ನಿ.ಪ. ಧ್ವನಿ ಸಂಘಟನೆ, ಗದಗ ಜಿಲ್ಲೆ. ಹೇಳಿದರು. 

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ