ತೆಲ್ಕರನಗರ ಅಭಿವೃದ್ಧಿಗೆ ಬದ್ಧ: ಶಾಸಕ ಅಲ್ಲಮಪ್ರಭು ಪಾಟೀಲ
ತೆಲ್ಕರನಗರ ಅಭಿವೃದ್ಧಿಗೆ ಬದ್ಧ: ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ, ಮೇ 23: ನಗರದ ಹೊರವಲಯದಲ್ಲಿರುವ ನಂದಿಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಲ್ಕರನಗರ ಹಾಗೂ ನಂದಿಕೂರು ತಾಂಡಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹20 ಲಕ್ಷ ಅನುದಾನದಲ್ಲಿ ತೆಲ್ಕರನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಮ್ಮ ಅನುದಾನದಲ್ಲಿ ಖಣದಾಳ ಪ್ರೌಢಶಾಲೆಯಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವುದರ ಜೊತೆಗೆ ಕೇಂದ್ರ ಕಾರಾಗೃಹ ಸಮೀಪ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ನಂದಿಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ಮಾತನಾಡಿ, ಕೇಂದ್ರ ಕಾರಾಗೃಹದ ಪಕ್ಕದಲ್ಲಿ ನಿರ್ಮಿಸಿರುವ ರುದ್ರಭೂಮಿಗೆ ತಕ್ಷಣ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ನಂದಿಕೂರಿನ ವಿಜಯಕುಮಾರ ಶರಣರು ಸಾನಿಧ್ಯ ವಹಿಸಿದ್ದರು ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ, ಚಂದ್ರಕಾಂತ ಸೀತನೂರ, ಶಾಮರಾವ್ ಪಾಟೀಲ, ಶರಣಗೌಡ ಪಾಟೀಲ, ಶಂಕರ ಕಾರಬಾರಿ, ರಮೇಶ್ ನೈಕೋಡಿ, ವಿಜಯಕುಮಾರ ರಾಠೋಡ, ಸುರೇಶ ಬಡಗೇರ, ಗಣಪತಿ ಬಬಲಾದ, ಶ್ರೀಕಾಂತ್ ಉಳ್ಳಿ, ಶ್ರೀಮಂತ ರಾಠೋಡ, ನಾಗೇಶ ಮುಚಖೆಡ, ಬಸವರಾಜ ಜೇಮಶೆಟ್ಟಿ, ಪವನಕುಮಾರ ಬಿ. ವಳಕೇರಿ, ಸಂಗಣ್ಣಗೌಡ ಸೀತನೂರು, ಮಾಳಪ್ಪ ನೈಕೋಡಿ, ಮಂಜುಶ್ರೀ ಜಾಗಿರದಾರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಠ್ಠಬಾಯಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
