ಅನಾರೋಗ್ಯದಿಂದ ಲಕ್ಷ್ಮೀಬಾಯಿ ಕಾಮಜಿ ನಿಧನ

ಅನಾರೋಗ್ಯದಿಂದ ಲಕ್ಷ್ಮೀಬಾಯಿ ಕಾಮಜಿ ನಿಧನ

ಅನಾರೋಗ್ಯದಿಂದ ಲಕ್ಷ್ಮೀಬಾಯಿ ಕಾಮಜಿ ನಿಧನ

ಅಫಜಲಪೂರ: ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ನೀಲೂರು ಗ್ರಾಮದ ಶ್ರೀಮತಿ ಲಕ್ಷ್ಮೀಬಾಯಿ ಭಗವಂತರಾಯ ಕಾಮಜಿ (60) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ಪತಿ ಭಗವಂತರಾಯ ಕಾಮಜಿ, ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನೀಲೂರು ಗ್ರಾಮದಲ್ಲಿ  ಇಂದು ಮಧ್ಯಾಹ್ನ 3 ಗಂಟೆಗೆ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು.

ಮೃತರ ಅಗಲಿಕೆಗೆ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.