ಜಾನಪದ ಗ್ರಾಮೀಣ ಜನರ ಜೀವಾಳ - ದೇವಕ್ಕೆಮ್ಮ ಪೊ: ಬಿರಾದರ

ಜಾನಪದ ಗ್ರಾಮೀಣ ಜನರ ಜೀವಾಳ - ದೇವಕ್ಕೆಮ್ಮ ಪೊ: ಬಿರಾದರ

ಜಾನಪದ ಗ್ರಾಮೀಣ ಜನರ ಜೀವಾಳ - ದೇವಕ್ಕೆಮ್ಮ ಪೊ: ಬಿರಾದರ

ಶಹಪುರ: ಗ್ರಾಮೀಣ ಭಾಗದ ಜನರ ಬದುಕಿನ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ಪ್ರತಿಬಿಂಬಿಸುವದೇ ಜಾನಪದ, ಆದ್ದರಿಂದ ಜಾನಪದ ಗ್ರಾಮೀಣ ಜನರ ಜೀವಾಳ ಎಂದು ಹಿರಿಯ ಜಾನಪದ ಕಲಾವಿದೆ ದೇವಕ್ಕೆಮ್ಮ ಪೊಲೀಸ್ ಬಿರಾದರ ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲಾ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಶಹಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ವಾದ್ಯ ಪರಿಕರಗಳನ್ನು ನುಡಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಮ್ಮ ಕಾಲದಲ್ಲಿ ಹೊಲ ಗದ್ದೆಗಳಲ್ಲಿ  ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೊಂಡ ಸಮಯದಲ್ಲಿ ಲಾವಣಿ ಪದ,ಜನಪದ ಗೀತೆ,ಹಂತಿ ಪದ,ಒಗಟು,ಗಾದೆ,ಸಂಪ್ರದಾಯ ಪದಗಳು,ಸೋಬಾನೆ ಪದಗಳು, ಹಾಡುತ್ತಾ ಧಣಿವನ್ನ ಮರೆಯುತ್ತಿದ್ದೆವು,ಇವೆಲ್ಲವುಗಳು ಅಂದು ಬಹು ಪ್ರಾಮುಖ್ಯತೆಯನ್ನು ಪಡೆದಿದ್ದವು ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ಇನ್ನೊರ್ವರು ಮುಖ್ಯ ಅತಿಥಿಗಳು ಹಾಗೂ ಪ್ರಗತಿಪರ ಚಿಂತಕರಾದ ಮಲ್ಲಣ್ಣ ಹೊಸಮನಿ ಶಿರವಾಳ ಮಾತನಾಡಿ ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಇತ್ತೀಚಿಗೆ ಗ್ರಾಮೀಣ ಸೊಗಡಿನ ಜಾನಪದ ಕಲೆಗಳು ಇಂದು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು,ಇಂತಹ ಕಾಲಘಟ್ಟದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಜಾನಪದ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡು ಜಾನಪದ ಉಳಿವಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಇವರ ಕಾರ್ಯ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು .

ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶರಣಬಸವ ಪೋಲಿಸ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆ ಮೇಲೆ ರವಿಕುಮಾರ ಸದಬ,ಪ್ರತಿಷ್ಠಾನದ ಅಧ್ಯಕ್ಷರಾದ ಆನಂದ ಎಂ.ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಂತರ ಬೂದಯ್ಯ ಹಿರೇಮಠ ಮತ್ತು ತಂಡ ಸುಗಮ ಸಂಗೀತ, ಭೀಮರಾಯ ಗುಳೇದ ಮತ್ತು ತಂಡ ತತ್ವಪದ,ಮುಖರಂಜಾ ಇನಮದಾರ ಮತ್ತು ತಂಡ ವಚನ ಗಾಯನ,ಪ್ರದೀಪ್ ಪಾಟೀಲ್ ಮತ್ತು ತಂಡ ಜಾನಪದ ಸಂಗೀತ, ಮುದ್ದಮ್ಮ ಮತ್ತು ತಂಡ ಜನಪದ ಇವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು, ಕಾಶಿನಾಥ ನಿರೂಪಿಸಿ ವಂದಿಸಿದರು.