ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ಇಬ್ಬರು ಮಹಿಳೆಯರು ಸೇರಿ 43 ಜನರಿಂದ ರಕ್ತದಾನ
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ಇಬ್ಬರು ಮಹಿಳೆಯರು ಸೇರಿ 43 ಜನರಿಂದ ರಕ್ತದಾನ
ಚಿಂಚೋಳಿ:ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದ ಆರಾಧ್ಯದೇವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್) ಬ್ಲಡ್ ಬ್ಯಾಂಕಿಗೆ ರಕ್ತದಾನ ಮಾಡಲಾಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಜತೆಗೆ ನೇತ್ರ ತಪಾಸಣೆ ಶಿಬಿರ ಭಾನುವಾರ ಯಶಸ್ವಿಯಾಯಿತು.
ಶಾಸಕ ಡಾ. ಅವಿನಾಶ ಉಮೇಶ ಜಾಧವ ಅವರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ರಕ್ತದಾನ ಅತ್ಯಂತ ಪವಿತ್ರ ಹಾಗೂ ಮಹಾದಾನ. ಆಪತ್ತಿನಲ್ಲಿರುವರ ಜೀವ ಉಳಿಸುವ ರಕ್ತದಾನ ಕಾರ್ಯ ಪವಿತ್ರವಾದ ವೀರಭದ್ರೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಅಪ್ಪ ಮಗಳು ಸೇರಿದಂತೆ ಇಬ್ಬರು ಯುವತಿಯರು ಮತ್ತು ಯುವಕರು ಸೇರಿ 43 ಜನ ರಕ್ತದಾನ ಮಾಡಿದರು.
ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹಮದ್ ಗಫಾರ್, ಮೋಘಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಲತೀಫ್ ಮಿರಾನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಗನ್ನಾಥ ಶೇರಿಕಾರ ಮತ್ತು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಚಿಂಚೋಳಿಕರ್, ಗುಂಡಪ್ಪ ಅವರಾದಿ, ನಂದಕುಮಾರ ಪೋಲಕಪಳ್ಳಿ, ಸಂತೋಷ ಸೂರಪನೋರ್. ವೀರೇಶ, ಉಮೇಶ ಧೂಳಪ್ಪನೋರ್ ನೇತೃತ್ವದಲ್ಲಿ ಶಿಬಿರ ನಡೆಯಿತು.
ಜಿಮ್ಸ್ ಬ್ಲಡ್ ಬ್ಯಾಂಕಿನ ಡಾ ಅರೋಸಾ ನಿಶಾತ್, ಶಬ್ಬೀರ್ ಅಹಮದ್, ಯಲ್ಲಪ್ಪ ವಾರಿ, ಜ್ಯೋತಿ, ಮಲ್ಲಿಕಾರ್ಜುನ ಪರೀಟ್, ಬಾಬುರಾವ್ ಮತ್ತು ಖಂಡಪ್ಪ ಅವರು ರಕ್ತವನ್ನು ಪಡೆದುಕೊಂಡರು. ಕಮಲ ಸೋಲಾರ ಮಾಲೀಕರಾದ ಉದ್ಯಮಿ ಚಂದ್ರಶೇಖರ ಧೂಳಪ್ಪನೋರ್, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ ಬೆಳಕೇರಿ ಮೊದಲಾದವರು ಆರೋಗ್ಯವನ್ನು ಶಾಸಕ ಡಾ ಅವಿನಾಶ ಜಾಧವ್ ಪರೀಕ್ಷಿಸಿ ನೇತ್ರ ತಪಾಸಣೆ ಮಾಡಿಸಿಕೊಂಡವರಿಗೆ ಉಚಿತವಾಗಿ ಔಷಧಿ ವಿತರಿಸಿದರು. ಕೊನೆಗೆ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಮನೂರು ಆಸ್ಪತ್ರೆ ಮುಖ್ಯಸ್ಥರಾದ ಡಾ ಫಾರುಕ್ ಅವರ ನಿರ್ದೆಶನದ ಮೇರೆಗೆ ತಜ್ಞ ವೈದ್ಯರಾದ ಡಾ. ಹಝೈಫ್, ಡಾ. ಐಮನ್, ಡಾ ಖಾಜಾ ಹಾಗೂ ಸಿಬ್ಬಂದಿಗಳು, ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ನಡೆಸಿದರು. 9 ಜನರನ್ನು ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಮಾಡಲಾಯಿತು.
ಶಿಬಿರದಲ್ಲಿ ಮುಖಂಡರಾದ ಕೆ.ಎಂ. ಬಾರಿ, ಭೀಮಶೆಟ್ಟಿ ಮುರುಡಾ, ಶಿವಯೋಗಿ ರುಸ್ತಂಪುರ, ಲಕ್ಷ್ಮೀ ಅಮೃತ ಮೋತಕಪಳ್ಳಿ, ಮೊಗಲಪ್ಪ ದಾಸ, ಶಿವಕುಮಾರ ರಾಮಗೊಂಡ, ಚಂದ್ರಶೇಖರ ರಾಮಗೊಂಡ, ಮಲ್ಲು ಬಂಗಾರಿ, ಶಿವಶರಣಪ್ಪ(ಬಾಬು) ಡೆಂಗಿ, ಚಂದ್ರಕಲಾ ರಾಜೇಂದ್ರಪ್ಪ ಚಟ್ನಳ್ಳಿ, ಆಶಾ ಶ್ರೀನಿವಾಸ, ವೀರೇಶ ಪೂಜಾರಿ, ಶ್ರೀನಿವಾಸ ಪೂಜಾರಿ, ಸಲಾವುದ್ದಿನ್ ಟೇಲರ್, ಸಂಗಮೇಶ ಲೈನಮೆನ್, ಗುಲಾಮ ಹಾಫೀಜ್, ಅಖಿಲಸಾಬ್, ಫಾರುಕ್, ಜಗದೇವಿ ಸುಲೇಪೇಟ, ಸುನೀತಾ ಮೋಘಾ, ಮಹೇಶ ರಾಣಾಪುರ, ಸತೀಶ ಕಿತ್ತೂರು ಮೊದಲಾದವರು ಇದ್ದರು.
