25 ಕ್ಕೆ ಚಿನ್ಮಯಜ್ನ್ಯಾನಿ ಪ್ರಶಸ್ತಿ ಹಾಗೂ ಪುಸ್ತಕ ಲೋಕಾರ್ಪಣೆ
25 ಕ್ಕೆ ಚಿನ್ಮಯಜ್ನ್ಯಾನಿ ಪ್ರಶಸ್ತಿ ಹಾಗೂ ಪುಸ್ತಕ ಲೋಕಾರ್ಪಣೆ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕ ಹಾಗೂ ಹಂಶಿಕಾ ಶಿಕ್ಷಣ ಸಂಸ್ಥೆ ಕಲಬುರಗಿ ಸಹಯೋಗದಲ್ಲಿ ಹಮ್ಮಿಕೊಂಡ ಚಿನ್ಮಯಜ್ಞಾನಿ ಪ್ರಶಸ್ತಿ ಪ್ರಧಾನ ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿಯವರು ರಚಿಸಿದ ಎಂಟು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ನವದಗಿಯ ದೇಶಿಕೇಂದ್ರ ಸಾಂಸ್ಕೃತಿಕ ಲೋಕದಲ್ಲಿ ದಿನಾಂಕ 25.04.2026ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಅಮರನಾಥ ಪಾಟೀಲ ಅವರು ಪ್ರಶಸ್ತಿ ಪ್ರಧಾನ ಮಾಡಲಿರುವ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶ್ರೀಮತಿ ಜಯಶ್ರೀ ಬಸವರಾಜ ಮತ್ತಿಮಡು ಅವರು ಡಾ. ಶರಣಬಸಪ್ಪ ವಡ್ಡನಕೇರಿ ಅವರು ರಚಿಸಿದ ಎಂಟು ಪುಸ್ತಕಗಳ ಲೋಕಾರ್ಪಣೆ ಗೊಳಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಂಶಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಶರಣು ಹೊನ್ನಗೆಜ್ಜೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ತೀರ್ಥಕುಮಾರ ಬೆಳಕೋಟಾ ಆಗಮೀಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಶಿ ಕೇಂದ್ರ ವಸತಿ ಶಾಲೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಯರನಾಳೆ ಅವರು ವಹಿಸಿಕೊಳ್ಳಲಿದ್ದಾರೆ. ಕಮಲಾಪುರ ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ಸಿದ್ದಲಿಂಗ ಕೋನೆಕ, ಡಾ. ಕರುಣಾ ಜಮದರಖಾನಿ,ಡಾ. ಪ್ರೇಮಾ ಅಪಚಂದ, ಶ್ರೀ ಗoಗಾಧರ ದೇಸಾಯಿ,ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ,ಶ್ರೀ ರಮೇಶ ಕೆ. ಮುರುಡ,ಶ್ರೀಮತಿ ಗುರುಬಾಯಿ ಎಸ್. ಬಿರಾದಾರ, ಶ್ರೀಮತಿ ಭುವನೇಶ್ವರಿ ಶಿವರಾಜ ಧಟ್ಟಿ, ಶ್ರೀಮತಿ ಮಂಜುಳಾ ಎಮ್. ಪಾಟೀಲ,ಶ್ರೀಮತಿ ಸಾವಿತ್ರಿ ಚಿಟ್ಟೆ ಅವರಿಗೆ ಚಿನ್ಮಯಜ್ನ್ಯಾನಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಧ್ಯಕರಾದ ಡಾ. ಶರಣಬಸಪ್ಪ ವಡ್ಡನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
