ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕುಂಬಾರ ಸಮಾಜಕ್ಕೆ ಬಿ ಕೆ ಬನ್ನಪ್ಪ ಮನವಿ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕುಂಬಾರ ಸಮಾಜಕ್ಕೆ ಬಿ ಕೆ ಬನ್ನಪ್ಪ ಮನವಿ
ದಾವಣಗೆರೆ: ದಾವಣಗೆರೆ ದಕ್ಷಿಣ ಮತಕ್ಷೇತ್ರದ ಚುನಾವಣೆಯ ಅಂಗವಾಗಿ ದಿನಾಂಕ 6-04-2026 ರಂದು ಬಿಜೆಪಿ ಪ್ರಭುದ್ಧರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರಾದ ಬನ್ನಪ್ಪ ಬಿ. ಕುಂಬಾರ ಸೇಡಂ ಅವರು ದಾವಣಗೆರೆ ನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಕುಂಬಾರ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ದಾವಣಗೆರೆ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಮತ ನೀಡಿ ಗೆಲುವು ಸಾಧಿಸಲು ಸಹಕರಿಸುವಂತೆ ಕುಂಬಾರ ಸಮಾಜದವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಕುಂಬಾರ ಸಮಾಜದ ಮುಖಂಡರಾದ ಕೆ. ಮುತ್ತಪ್ಪ, ಟಿ. ಅಜ್ಜಪ್ಪ, ಕೆ.ಎಂ. ಚಂದ್ರಶೇಖರ, ಅಜಯ್, ನಾಗರಾಜ್ ನೆಲಕುದರೆ, ಎನ್. ಶಿವಕುಮಾರ್, ಮುರುಗಪ್ಪ, ಹನುಮಂತಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಮುಖಂಡರಾದ ಲೋಕೇಶ್ ನಲ್ಲೂರ (ಪ್ರಭುದ್ಧರ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು), ಕೃಷ್ಣಕುಮಾರ್ ತ್ಯಾವಣಿಗಿ (ಎಸ್.ಟಿ. ಮೋರ್ಚಾ ಅಧ್ಯಕ್ಷರು), ಗಂಗಾಧರ್ ನಾಯಕ್ (ಚನ್ನಗಿರಿ ಜೆ.ಪಿ. ಮಾಜಿ ಉಪಾಧ್ಯಕ್ಷರು), ಅನಿಲ್ ಕುಮಾರ್ ನಾಯಕ್ (ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು) ಸೇರಿದಂತೆ ಹಲವರು ಉಪಸ್ಥಿತರಿದ್ದು, ಬಿಜೆಪಿ ಅಭ್ಯರ್ಥಿ ಶ್ರೀ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಮತ ನೀಡುವಂತೆ ಕುಂಬಾರ ಸಮಾಜದವರಲ್ಲಿ ಮನವಿ ಮಾಡಿದರು.
