ರಂಗಭೂಮಿ ಕಲಾವಿದರ ಪ್ರತಿಭೆಯಿಂದ ಕಲಾರಸಿಕರಿಗೆ ಮನರಂಜನೆ : ರೇವಣಸಿದ್ದ ಶಿವಾಚಾರ್ಯರು⁸

ರಂಗಭೂಮಿ ಕಲಾವಿದರ ಪ್ರತಿಭೆಯಿಂದ ಕಲಾರಸಿಕರಿಗೆ ಮನರಂಜನೆ : ರೇವಣಸಿದ್ದ ಶಿವಾಚಾರ್ಯರು⁸

ರಂಗಭೂಮಿ ಕಲಾವಿದರ ಪ್ರತಿಭೆಯಿಂದ ಕಲಾರಸಿಕರಿಗೆ ಮನರಂಜನೆ : ರೇವಣಸಿದ್ದ ಶಿವಾಚಾರ್ಯರು

ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ , ಕರ್ನಾಟಕ ನಾಟಕ ಅಕಾಡೆಮಿ, ನೇತೃತ್ವದಲ್ಲಿ ಸಂಭ್ರಮದ ವಿಶ್ವ ರಂಗಭೂಮಿ ದಿನಾಚರಣೆ

ಕಲಬುರಗಿ : ರಂಗಭೂಮಿಯ ಮೇಲೆ ಅಭಿನಯಿಸುವುದು ಅತ್ಯಂತ ಕಷ್ಟದ ಕೆಲಸವಾಗಿದ್ದು, ನವರಸಗಳನ್ನು ತುಂಬಿ ಪಾತ್ರಕ್ಕೆ ಜೀವತುಂಬಿ ಪರಕಾಯ ಪ್ರವೇಶ ಮಾಡುವ ಕಲಾವಿದನು ಜನರ ಮನ ಗೆಲ್ಲುವ ನಿಜಾರ್ಥದ ರಂಗಕರ್ಮಿ ಮತ್ತು ಆ ಮೂಲಕ ಮನೋರಂಜನೆ ಸಾಧ್ಯ ಎಂದು ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

      ಕಲಬುರಗಿಯ ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ ಮಾ.27ರಂದು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ , ಕಲಾವಿದನು ತನ್ನ ಅಭಿನಯದ ಮೂಲಕ ಸಂತೋಷ, ದುಃಖ, ಕೋಪ, ಭಯ ಸೇರಿದಂತೆ ನವರಸಗಳನ್ನು ಜೀವಂತವಾಗಿ ಮೂಡಿಸಿದಾಗ ಮಾತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ. ರಂಗಭೂಮಿಯ ಸೇವೆ ಮಾಡುವವರು ತಾಳ್ಮೆ, ಶ್ರಮ ಮತ್ತು ಸಮರ್ಪಣೆಯ ಮನೋಭಾವ ಹೊಂದಿರಬೇಕು ಎಂದು ಹೇಳಿದರು.

ಕಲಬುರಗಿ,ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಸೋಮಶೇಖರ್ ಗೋನಾಯಕ ಮಾತನಾಡಿ ರಂಗಭೂಮಿ ಜಾತಿ ಮತ ಪಂಥ ಮೀರಿ ಜನರ ಬಳಿಗೆ ಮುಟ್ಟುವ ಅತ್ಯಂತ ವಿಶಿಷ್ಟ ವೇದಿಕೆಯಾಗಿದ್ದು ಜನರಿಗೆ ಸಂಸ್ಕಾರ ಸಂಸ್ಕೃತಿಯನ್ನು ನೀಡುತ್ತದೆ ಎಂದರು. ಸಾಹಿತಿ ನಾಗೇಂದ್ರ ಮಸೂತಿ ಮಾತನಾಡಿ ರಂಗಭೂಮಿ ಜೀವನಕ್ಕೆ ಕೈಗನ್ನಡಿಯಾಗಿ ಅತ್ಯಂತ ಅದ್ಭುತವಾಗಿ ಪ್ರಸ್ತುತಗೊಳ್ಳುವುದರಿಂದ ಅನಾಧಿಕಾಲದಿಂದಲೂ ರಂಗಭೂಮಿ ಜನಮನಕ್ಕೆ ವಿವಿಧ ರೂಪಗಳಲ್ಲಿ ತಲುಪುತ್ತಿದೆ ಇಂತಹ ಕಲೆಯನ್ನು ಮೂಲ ಸ್ವರೂಪದಲ್ಲಿ ಕಾಪಿಟ್ಟು ಮನೋಜ್ಞವಾಗಿ ಪ್ರಸ್ತುತಪಡಿಸಿದರೆ ಕಲಾ ರಸಿಕರ ಮನದಲ್ಲಿ ಉಳಿಯುತ್ತದೆ ಆ ಮೂಲಕ ಬೆಳೆಯುತ್ತದೆ ಎಂದರು

ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 

ಪ್ರಾಧ್ಯಾಪಕ , ಬಸವರಾಜ ಭಾಗಾ, ಕಲ್ಯಾಣ ಕರ್ನಾಟಕ ರಂಗಭೂಮಿ ಕುರಿತು ಉಪನ್ಯಾಸ ನೀಡಿ ರಂಗಭೂಮಿ ನಡೆದು ಬಂದ ಬಗೆಯನ್ನು ವಿವರಿಸಿದರು. ಸಾಹಿತಿ ಡಾ.ಕೆ ಗಿರಿಮಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವ ರಂಗಭೂಮಿ ದಿನಾಚರಣೆ ಸೇರಿದಂತೆ ಸಮಾಜಮುಖಿಯಾಗಿ ಕೆಲಸ ಮಾಡುವ ಸುಭಾಶ್ಚಂದ್ರ ಪಾಟೀಲ ಪಾಳಾ ಟ್ರಸ್ಟ್ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಉದ್ಯಮಿ ವಿನೋದ ಕುಮಾರ ಪಾಟೀಲ ಸರಡಗಿ, ಶಿವಕುಮಾರ್ ಹಿರೇಗೌಡ, ಉಮೇಶ ಸಿದ್ದಣಗೋಳ ಕಡಣಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ ಪಾಳಾ ಅಧ್ಯಕ್ಷತೆ ವಹಿಸಿದ್ದರು.

ರಂಗ ಕಲಾವಿದರಾದ ವೀರಣ್ಣಗೌಡ ಪಾಟೀಲ ಶರಣಗೌಡ ನಂದೂರ, ನಾಗಣ್ಣ ಕುರಕೋಟಿ, ಜಗದೇವಪ್ಪ ಹತ್ತರಕಿ, ಷಣ್ಮುಖ ಹುಗ್ಗಿ,ಶಂಕರ ವೇಷೆಗಾರ,ಶ್ಯಾಮರಾವ ಕೊರವಿ, ಸುನೀಲ ನಿಣಿ೯, ಮಲ್ಲಿಕಾರ್ಜುನ ಭಜಂತ್ರಿ,ಸಿದ್ದಪ್ಪ ಹೂಗಾರ, ನಾನಾ ಸಾಹೇಬ್ ಶಹಾಬಾದ್, ಗಣಪತ್ತರಾವ್ ಕಾಳಗಿ, ಭಾಗ್ಯಶ್ರೀ ಪಾಳಾ, ರಾಜಕುಮಾರ ಉದನೂರ,ರವಿ ಹಡಲಗಿ ಮಾಶ್ಯಾಳ,ಹರಿಶ್ಚಂದ್ರ ರಾಠೋಡ, ರಾಜಕುಮಾರ ಸೇರಿದಂತೆ 18 ಜನ ರಂಗಕರ್ಮಿಗಳಿಗೆ “ವಿಶ್ವ ರಂಗ ಗೌರವ ಪುರಸ್ಕಾರ” ನೀಡಿ ಸನ್ಮಾನಿಸ ಲಾಯಿತು.

 ಜೊತೆಗೆ ನಂದೂರ, ಜಾಪೂರ, ಸಣ್ಣೂರ,ಇಟಗಾ, ಗಣಜಲಖೇಡ, ಅಫಜಲಪುರ, ಕಲಬುರ್ಗಿಯ ವಿವಿಧ ಸಂಘಗಳಿಗೆ ಗೌರವಿಸಿದರು. ಚಾಮರಾಜ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು

ಕು ಗೌತಮಿ, ಏಕಪಾತ್ರ ಅಭಿನಯ, ಅವ್ಯಕ್ತ ನಾಟಕ ಪ್ರದರ್ಶನಗೊಂಡಿತು.

ಸನಾದಿ ಅಪ್ಪಣ್ಣ ಕಲಾವಿದರ ಸಂಘದಿಂದ ರಂಗಗೀತೆಗಳು ಹಾಡಿದರು, ‌

ನಾಗರಾಜ್ ಕಲ್ಲಾ ಸ್ವಾಗತಿಸಿದರು,ಸಿದ್ದಣಗೌಡ ಕಡಣಿ ವಂದಿಸಿದರು. 

ಸಾಹಿತಿ ಸ್ವಾಮಿರಾವ ಕುಲಕರ್ಣಿ, ಪತ್ರಕರ್ತ ಪ್ರಭಾಕರ್ ಜೋಶಿ, ಸದಾನಂದ ಪೆರ್ಲ, ಸಿ ಎಸ್.ಮಾಲಿ ಪಾಟೀಲ, ವೀರಶೆಟ್ಟಿ ಗಾರಂಪಳ್ಳಿ, ಡಾ.ಆನಂದ ಪಾಟೀಲ ಸಿದ್ದಾಮಣಿ, ಸಿದ್ದಪ್ಪ ತಳ್ಳೂಳ್ಳಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಉಮಾಪತಿ ಪಾಟೀಲ, ಅಂಬಾರಾಯ ಕೋಣೆ, ಸಿದ್ದಾರಾಮ ರಾಜಮಾನೆ, ಶ್ರೀಶೈಲ ಬಿರಾದಾರ, ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು