ವಧು-ವರರ ಸಮಾವೇಶಕ್ಕೆ ಉತ್ತಮ ಸ್ಪಂದನೆ: ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ವಧು-ವರರ ಸಮಾವೇಶಕ್ಕೆ ಉತ್ತಮ ಸ್ಪಂದನೆ: ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ಕಲಬುರಗಿ: ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಮದುವೆ ಸಂಬಂಧಗಳನ್ನು ನಿಶ್ಚಯಿಸುವುದು ಕಷ್ಟಕರವಾಗಿದ್ದು, ಯುವಕರು ಇಂತಹ ವಧು-ವರರ ಸಮಾವೇಶಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ ನೀಡಿದರು.
ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಧು-ವರರ ಸಮಾವೇಶ-2026 ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲಘಟಗಿಯ ಪೂಜ್ಯ ಗುರುಮಾತಾ ನಂದಾತಾಯಿ ಹಾಗೂ ಕಲಬುರಗಿ ಮಾತಾ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಮಾತೋಶ್ರೀ ಪ್ರಭುಶ್ರೀ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸಾಯಿಬಣ್ಣ ಮಸಾಜಿ ಹೋಳಕರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಉಮರ್ಗಾ ಮಾಜಿ ಶಾಸಕ ಜ್ಞಾನದೆವ್ ಚೌಗಲೇ, ಲಾತೂರ ಮಾಜಿ ಶಾಸಕ ಧರ್ಮಾಜಿ ಗಿರಿಜಪ್ಪ ಸೋನಕವಡೆ, ಸೋಲಾಪುರ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯದರ್ಶಿ ಸುಧೀರ್ ಖರಟಮಲ್, ಭೀಮಣ್ಣ ಬೋನಾಳ, ಮೋತಿಲಾಲ ಎಂ. ಕಟಕೆ, ಲಿಂಗೋಜಿ ಪಿ. ಗಾಜರೆ, ಅನೀಲಕುಮಾರ ಎ. ಸಾವಳಕರ್, ಡಾ. ಸಂತೋಷ ಎಂ. ಕಟಕೆ, ಚಿದಾನಂದ ಬಿ. ಪೋಲ್, ನಾಗರಾಜ ಶೇರಖಾನೆ, ವಿನಾಯಕ ಗಡ್ಡಿ, ಅಮೃತ ಮಹಾವರ್ಕರ್, ತ್ಯಾಗರಾಜ ಕದಮ್, ಸದಾಶಿವ ಹೋಟಕರ್, ಮೋನಹರ ಕದಮ್, ಮಹಾದೇವರಾವ್ ಸಿ. ಪೋಲ್, ಅಶ್ವಿನಿ ಪಿ. ಶ್ರೇಯಕರ್, ದಿಲೀಪ ಗೋಡಕೆ, ಬಸವರಾಜ ನಾರಾಯಣಕರ್, ಗಣೇಶ ಗಜಕೋಶ, ರಾಜಕುಮಾರ ಹುಟಕಿ, ಮಂಜುನಾಥ ಹುಟಗಿ, ಪ್ರಹ್ಲಾದ ಖರಾಟೆ, ಯುವರಾಜ ಡಿ. ಪೋಲ್, ಪ್ರಭು ನಾರಾಯಣಕರ್, ಲಕ್ಷ್ಮೀಕಾಂತ ಘೋಡಕೆ, ಕೆರಬಾ ಎಲ್. ಹೋಳಕರ್, ಗಣಪತಿ ಟಿ. ಕಾವಳೆ, ಗಣಪತಿ ಜೂಗಧನಕರ್, ಸಂಜೀವಕುಮಾರ ದರ್ವೆಶ, ತುಳಜಿರಾಮ ಗಾಯಧನಕರ್, ಯುವರಾಜ ಪೊಲ್, ಲೋಕಪ್ಪ ನಾರಾಯಣಕರ್, ವಿಜಯಕುಮಾರ ಗಾಜರೆ, ಮನೋಹರರಾವ್ ಗಾಜರೆ, ಜಗದೀಶ ಘೋಡಕೆ, ಸತೀಶ ಇಂಗಳೆ, ಯಲ್ಲಪ್ಪಾ ಸಾವನೂರ, ಯಲ್ಲಪ್ಪ ಶಿಂಧೆ, ಪುಂಡಲೀಕ ಪೋಲ್, ಜಿತೇಂದ್ರ ಘೋಡಕೆ, ಗುಲಾಬ ತ್ರಿಮುಖೆ, ಯಲ್ಲಾಲಿಂಗ ಟಿ. ಗಾಯಧನಕರ್, ಶಂಕರ ಖರಟಮಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ನೂರಾರು ವಧು-ವರರು ಭಾಗವಹಿಸಿ, ಪರಸ್ಪರ ಪರಿಚಯ ಮಾಡಿಕೊಂಡರು. ಸಮುದಾಯದ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಈ ಸಮಾವೇಶ ಉತ್ತಮ ವೇದಿಕೆಯಾಯಿತು.

