ನಿವೃತ್ತ ಶಿಕ್ಷಕ ಶ್ರೀಶೈಲ ಹದಗಲರಿಗೆ ವಕೀಲರ ಗೆಳೆಯರ ಬಳಗದಿಂದ ಸನ್ಮಾನ
ನಿವೃತ್ತ ಶಿಕ್ಷಕ ಶ್ರೀಶೈಲ ಹದಗಲರಿಗೆ ವಕೀಲರ ಗೆಳೆಯರ ಬಳಗದಿಂದ ಸನ್ಮಾನ
ಕಲಬುರಗಿ: ಸಿಂದಗಿ ತಾಲೂಕಿನ ಮುರಡಿ ಗ್ರಾಮದ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಶ್ರೀ ಶ್ರೀಶೈಲ ಬಿ. ಹದಗಲ ಅವರನ್ನು ವಕೀಲರ ಗೆಳೆಯರ ಬಳಗದ ವತಿಯಿಂದ ಜುಲೈ 31ರಂದು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಸಿ.ವಿ. ಮಾಲಿಪಾಟೀಲ ಹಾಗೂ ಮೇಘನಾಥ ಹಿರೇಮಠ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಹದಗಲ ಅವರು, ತಮ್ಮ ಜೀವನದಲ್ಲಿ ಬುದ್ಧಿಜೀವಿಗಳು ತಮ್ಮ ಕಾರ್ಯಸ್ಥಳಕ್ಕೆ ಕರೆದು ಗೌರವಿಸಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ಗೌರವ ಹಾಗೂ ಪ್ರೀತಿ ತಮ್ಮಲ್ಲಿ ಸಂತಸ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಮಲ್ಲಿಕಾರ್ಜುನ ಕೋಟೆ, ಕಲ್ಯಾಣಿ ಆನಂದನ, ರಾಜಕುಮಾರ ಶ್ರೀಗೇರಿ, ಕೆ.ಎಸ್. ಕುಲಕರ್ಣಿ, ಬಸವರಾಜ ಅಗ್ಗಿಮಠ, ಗುರುಸ್ವಾಮಿ ಸಂಕಿನಮಠ, ಶಿವಲಿಂಗಯ್ಯ ಮಠಪತಿ, ಬಸವರಾಜ ಶಿರವಾಳ, ಶರಣಪ್ಪ ಕಟ್ಟಿಕರ, ಶಾಂತಕುಮಾರ ಬಿರಾದಾರ, ದತ್ತರಾಜ ದಂಗಾಪುರ, ಪಾಟೀಲ ವಿಜಯಕುಮಾರ ಭಾಲ್ಕಿ, ರಾಣಪ್ಪ ಜಾನೆ, ಬಿ. ವಿಠ್ಠಲಕುಮಾರ, ನ್ಯಾಯವಾದಿ ಜೇನವೆರಿ ವಿನೋದಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

