ಮೌಲ್ಯಮಾಪನದಲ್ಲಿ ಮಕ್ಕಳ ಭವಿಷ್ಯ ಅಡಗಿದೆ: ಶಿವಾನಂದ ಖಜುರಗಿ೯ ಅಭಿಮತ.

ಮೌಲ್ಯಮಾಪನದಲ್ಲಿ ಮಕ್ಕಳ ಭವಿಷ್ಯ ಅಡಗಿದೆ: ಶಿವಾನಂದ ಖಜುರಗಿ೯ ಅಭಿಮತ.

ಮೌಲ್ಯಮಾಪನದಲ್ಲಿ ಮಕ್ಕಳ ಭವಿಷ್ಯ ಅಡಗಿದೆ: ಶಿವಾನಂದ ಖಜುರಗಿ೯ ಅಭಿಮತ.

ದ್ವಿತೀಯ ಪಿಯುಸಿ ಕನ್ನಡ ಮೌಲ್ಯಮಾಪನ ಸುಗಮವಾಗಿ ಜರುಗಿತು. ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ, ಕಲಬುರಗಿ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜು ಕಲಬುರಗಿ. ಕನ್ನಡ ಮತ್ತು ಅರೇಬಿಕ್ ಮೌಲ್ಯಮಾಪನ ಕಾರ್ಯಕ್ರಮ ಮುಕ್ತಾಯ ಸಮಾರಂಭ ನಡೆಯಿತು. ಮೌಲ್ಯಮಾಪನ ಕೇಂದ್ರದ ಪರಿವೀಕ್ಷಕ ಶ್ರೀಶೈಲ ಬೋನಾಳ ಅವರು ಮಾತನಾಡುತ್ತಾ ಮೌಲ್ಯಮಾಪನ ಯಾವುದೇ ಅಡೆತಡೆ ಇಲ್ಲದೆ ಮೌಲ್ಯಮಾಪನ ನಡೆಯಿತು. ಈ ಮೌಲ್ಯಮಾಪನಕ್ಕೆ ಸಹಕಾರ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಖಜುರಗಿ ಸೇವೆ ಅಪಾರವಾಗಿದೆ. ಮೌಲ್ಯಮಾಪನ ಆರಂಭದಿಂದ ಪ್ರತಿದಿನ ಉಟದ ವ್ಯವಸ್ಥೆ, ಅಂಕಪಟ್ಟಿ ನಮೂದು ಕಾರ್ಯಕ್ಕೆ ಗಣಕಯಂತ್ರಗಳ ಅಳವಡಿಕೆಯ ಕಾರ್ಯ ಇವೇಲ್ಲವುಗಳು ನನ್ನ ಮೌಲ್ಯಮಾಪನ ಅನುಭವದಲ್ಲಿ ಹೊಸದು. ಮೌಲ್ಯಮಾಪನ ಬಹಳ ಸೂಕ್ಷ್ಮವಾದ ಕಾರ್ಯವಾಗಿದೆ. ಇದು ಶ್ರದ್ಧೆ ಮತ್ತು ಪ್ರಾಮಾಣಿಕತೆ ಬಯಸುತ್ತದೆ. ಇಂತಹ ಜವಾಬ್ದಾರಿಯುತ ಕಾರ್ಯವನ್ನು ನಿಭಾಯಿಸಿರುವುದಕ್ಕೆ ನೀವು ಧನ್ಯರು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ದಿಶಾ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಶಿವಾನಂದ ಖಜುರಗಿ ಮಾತನಾಡಿ ಮನುಷ್ಯ ತನ್ನ ಬದುಕಿನ ಉದ್ದಕ್ಕೂ ಮನುಷ್ಯತ್ವವನ್ನು ಅಳವಡಿಸಿಕೊಂಡುಸಾಗಬೇಕು ಆಗ ಮಾತ್ರ ನಾವೆಲ್ಲರು ಉತ್ತಮವಾಗಿ ಬದುಕಲು ಸಾಧ್ಯ. ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಬೆಳೆಸುವುದು ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕ. ಉತ್ತಮ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡುವುದು ಉಪನ್ಯಾಸಕರ ಆದ್ಯ ಕರ್ತವ್ಯವಾಗಿದೆ. ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿ ತುಂಬಾ ಶ್ರೀಮಂತವಾಗಿದೆ. ಕನ್ನಡ ಭಾಷೆಯ ಮೌಲ್ಯಮಾಪನ ಕಾರ್ಯ ನಮ್ಮ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದಿರುವುದು ಸಂತೋಷ ತಂದಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಕನ್ನಡ ಮೌಲ್ಯಮಾಪನ ಶಿಬಿರದ ಮುಖ್ಯಸ್ಥರಾದ ಶಿವರಾಜ ಬಿರಾದಾರ ಮಾತನಾಡಿ ಮೌಲ್ಯಮಾಪನ ಕಾರ್ಯ ತುಂಬಾ ಉತ್ತಮ ರೀತಿಯಲ್ಲಿ ನಡೆಯಿತು ರಾಜ್ಯದಲ್ಲಿ ಇದೊಂದು ಮಾದರಿ ಮೌಲ್ಯಮಾಪನ ಕೇಂದ್ರವೆಂದು ಹೇಳಿದರು. ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹಂಗರಗಿ ಇದ್ದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಾದ ಮಹಾಂತೇಶ ಕಲಾಲ್, ಶ್ರೀಮತಿ ರಂಜನಾ ಯಜುರ್ವೇದಿ, ಮಯೂರ ಬಸವರಾಜ. ಶ್ರೀಶೈಲ ಬೋನಾಳ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡ ಉಪನ್ಯಾಸಕರಾದ ಡಾ‌ ಶಿವಪ್ಪ ಎಚ್ ಹುಣಚಿಹಾಳ, ಡಾ. ಸವಿತಾ ದಂಡೆ, ಚಂದ್ರಶೇಖರ ರೆಡ್ಡಿ., ಡಾ ಮಲ್ಲಪ್ಪ ಸುರಪುರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸಾಹಿತಿ ಬಿ. ಎಚ್ ನಿರಗುಡಿ, ಚಿ ಸಿ. ನಿಂಗಣ್ಣ ,ಹಾಗೂ ಮೋನಪ್ಪ ಸುತಾರ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಾಯಕ ಮೌಲ್ಯಮಾಪಕರು ಹಾಗೂ ಉಪ ಮೌಲ್ಯಮಾಪಕರು ಭಾಗವಹಿಸಿದರು ವಿಜಯಕುಮಾರ ರೋಣದ ನಿರೂಪಿಸಿದರು, ದೇವದಾಸ ಜೋಶಿ ವಂದಿಸಿದರು.