ವಿಭಾಗೀಯ ಉಪಾಧ್ಯಕ್ಷರಾಗಿ ಆರ್.ಎಂ.ನಾಟೇಕರ್ ಆಯ್ಕೆ

ವಿಭಾಗೀಯ ಉಪಾಧ್ಯಕ್ಷರಾಗಿ ಆರ್.ಎಂ.ನಾಟೇಕರ್ ಆಯ್ಕೆ

ವಿಭಾಗೀಯ ಉಪಾಧ್ಯಕ್ಷರಾಗಿ ಆರ್.ಎಂ.ನಾಟೇಕರ್ ಆಯ್ಕೆ

ಯಾದಗಿರಿ : ನಗರದ ಆರ್‌.ಎಂ. ನಾಟೇಕರ್ ಅವರ ಸಂಘಟನಾ ಸಾಮರ್ಥ್ಯವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ವಿಭಾಗಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಡಿ.ಶಿವಶಂಕರ್ ತಿಳಿಸಿದ್ದಾರೆ.

ಆರ್‌.ಎಂ.ನಾಟೇಕರ್ ರವರು ಇಲ್ಲಿಯವರೆಗೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ,ಉತ್ತಮ ಸೇವೆ ಮಾಡುತ್ತಾ ಬಂದಿದ್ದಾರೆ. ಸಂಘಟನಾ ಸಾಮರ್ಥ್ಯ ಹಾಗೂ ಸಂಘಟನಾ ಶಕ್ತಿಯನ್ನು ಪರಿಗಣಿಸಿ ಅವರಿಗೆ ಯಾದಗಿರಿ, ಕಲಬುರಗಿ,ಬೀದರ್ ಜಿಲ್ಲೆಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಚುರುಕುಗೊಳಿಸುವಂತೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ದಲಿತ ಹಾಗೂ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರ ಸ್ಮಾರಕದ ಮುಂದೆ ಆದೇಶ ಪತ್ರ ಸ್ವೀಕರಿಸಿ ಮಾತನಾಡಿದ ಆರ್.ಎಂ. ನಾಟೇಕಾರವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಎಸ್ ಸಿ ಎಸ್ ಟಿ ಸಮನ್ವಯ ಸಮಿತಿ ವಿಭಾಗ ಮಟ್ಟದಲ್ಲಿ ಚುರುಕುಗೊಳಿಸಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಸಮನ್ವಯ ಸಮಿತಿಗೆ ಗೌರವಕ್ಕೆ ಧಕ್ಕೆ ಬಾರದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ:ಎಸ್. ವಿಜಯ ಕುಮಾರ,ಆರ್.ಮೋಹನ್ ಕುಮಾರ,ಉಪಾಧ್ಯಕ್ಷರಾದ ಕೆಂಪಸಿದ್ದಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಬಾಲು, ರಾಜ್ಯ ಕಾರ್ಯದರ್ಶಿ ಅಶ್ವಿನಿ, ಲಕ್ಷ್ಮಯ್ಯ,ಚಂದ್ರಕಾಂತ್ ಸಂಗೋಳಗಿ ಶರಣಬಸಪ್ಪ ಶ್ರೀಕಾಂತ್ ಜೊತೆಗೆ ಇನ್ನಿತರರು ಉಪಸ್ಥಿತರಿದ್ದರು.