ದುರ್ಘಟನೆಗೆ ಒಳಗಾದ ಕುಟುಂಬಕ್ಕೆ ಶಾಸಕ ಪ್ರಭು ಚವ್ಹಾಣ ಸಾಂತ್ವನ ಉಳಿದ ಮಕ್ಕಳ ಶಿಕ್ಷಣ, ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ

ದುರ್ಘಟನೆಗೆ ಒಳಗಾದ ಕುಟುಂಬಕ್ಕೆ ಶಾಸಕ ಪ್ರಭು ಚವ್ಹಾಣ ಸಾಂತ್ವನ ಉಳಿದ ಮಕ್ಕಳ ಶಿಕ್ಷಣ, ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ

ದುರ್ಘಟನೆಗೆ ಒಳಗಾದ ಕುಟುಂಬಕ್ಕೆ ಶಾಸಕ ಪ್ರಭು ಚವ್ಹಾಣ ಸಾಂತ್ವನ

ಉಳಿದ ಮಕ್ಕಳ ಶಿಕ್ಷಣ, ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ

ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ವೈಜಿನಾಥ ಮೆತ್ರೆ ಅವರ ಕುಟುಂಬದಲ್ಲಿ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜೂನ್ 16ರಂದು ಕುಟುಂಬದ ಸದಸ್ಯರಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಕುಟುಂಬವು ಜೀವನೋಪಾಯಕ್ಕಾಗಿ ಕಳೆದ 8-10 ವರ್ಷಗಳಿಂದ ಹೈದರಾಬಾದ್‌ನಲ್ಲಿ ನೆಲೆಸಿದೆ. ವೈಜಿನಾಥ ಮೆತ್ರೆ ಅವರ ಪತ್ನಿ ಹಾಗೂ ಐವರು ಮಕ್ಕಳು ಮಾವಿನ ಹಣ್ಣು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಪುತ್ರಿಯರಾದ ಭವನೇಶ್ವರಿ ಮತ್ತು ಸುಧಾರಾಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಉಳಿದ ಮೂವರು ಬಾಲಕಿಯರು ಚೇತರಿಸಿಕೊಂಡಿದ್ದಾರೆ.

ದುಃಖಿತ ಕುಟುಂಬದ ಮನೆಗೆ ಭೇಟಿ ನೀಡಿದ ಶಾಸಕ ಪ್ರಭು ಚವ್ಹಾಣ ಅವರು ಕುಟುಂಬದ ಎಲ್ಲ ಸದಸ್ಯರೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ವಿವರಣೆ ಪಡೆದರು. ಮನೆಯವರು ಮುಕ್ತವಾಗಿ ಮಾಹಿತಿಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಾಸಕರು ಕುಟುಂಬಸ್ಥರಿಗೆ ಆಸ್ಪತ್ರೆಯ ಖರ್ಚು ವೆಚ್ಚ ಮತ್ತು ಕುಟುಂಬ ನಿರ್ವಹಣೆಗೆ ವೈಯಕ್ತಿಕ ಧನಸಹಾಯ ನೀಡಿದರು. ಉಳಿದ ಮೂವರು ಬಾಲಕಿಯರ ಶಿಕ್ಷಣ, ಮದುವೆ ಹಾಗೂ ಇತರೆ ಅಗತ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು, “ಈ ಘಟನೆ ತಿಳಿದು ನನಗೆ ತುಂಬಾ ನೋವಾಗಿದೆ. ಬಾಲಕಿಯರ ತಾಯಿಯ ಆರೋಗ್ಯವು ಚನ್ನಾಗಿರುತ್ತಿಲ್ಲವೆಂದು ಗೊತ್ತಾಗಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಈ ಕುಟುಂಬ ತೀವ್ರ ದುಃಖದಲ್ಲಿದೆ. ಭಗವಂತನು ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಸದಾ ನಿಮ್ಮ ಕುಟುಂಬದೊಂದಿಗೆ ಇರುತ್ತೇನೆ. ಯಾವುದೇ ಕಾರಣಕ್ಕೂ ಹೆದರಬೇಡಿ,” ಎಂದು ಧೈರ್ಯ ತುಂಬಿದರು.

ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಅಗತ್ಯ ಚಿಕಿತ್ಸೆಯನ್ನು ಸಮರ್ಪಕವಾಗಿ ನೀಡುವಂತೆ ಸೂಚಿಸಿದ್ದೇನೆ. ಕುಟುಂಬದ ಸದಸ್ಯರೊಂದಿಗೆ ದೂರವಾಣಿ ಮೂಲಕವೂ ಮಾತನಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಮುಂದೆಯೂ ಉಳಿದ ಮಕ್ಕಳನ್ನು ವೈಯಕ್ತಿಕವಾಗಿ ದತ್ತು ಸ್ವರೂಪದಲ್ಲಿ ನೋಡಿಕೊಳ್ಳುತ್ತೇನೆ. ಅವರ ಶಿಕ್ಷಣ, ಮದುವೆ ಸೇರಿದಂತೆ ಎಲ್ಲ ಅಗತ್ಯ ಕಾರ್ಯಗಳಿಗೆ ನೆರವಾಗುತ್ತೇನೆ. ಹೈದರಾಬಾದ್‌ನಲ್ಲಿ ವಾಸವಾಗಿದ್ದ ಕಾರಣ ಕುಟುಂಬಕ್ಕೆ ಸ್ವಂತ ಮನೆ ಇಲ್ಲ ಎಂಬ ಮಾಹಿತಿ ದೊರೆತಿದ್ದು, ಅವರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಲು ಕ್ರಮ ವಹಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಜೀರ್ಗೆ, ಸಚಿನ ರಾಠೋಡ, ಉದಯ ಸೋಲಾಪುರೆ, ಮಂಜು ಸ್ವಾಮಿ, ನಾಗಶೆಟ್ಟಿ ಗಾದಗೆ, ಬೀರಪ್ಪ ರಕ್ಷಾö್ಯಳ, ಅಶೋಕ ಶೆಂಬೆಳ್ಳಿ, ಸಂಗಗೊಂಡ ಮೇತ್ರೆ, ಕಿರಣ ಪಾಟೀಲ, ಹಾವಗಿರಾವ ಶರಣ, ಸಚಿನ ಕಾಂಬಳೆ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.