ಮೌಡ್ಯ ಕಂದಾಚಾರಗಳ ವಿರುದ್ಧ ಕನಕದಾಸರು ಬಂಡಾಯದ ಧ್ವನಿಯಾಗಿದ್ದರು.

ಮೌಡ್ಯ ಕಂದಾಚಾರಗಳ ವಿರುದ್ಧ ಕನಕದಾಸರು ಬಂಡಾಯದ ಧ್ವನಿಯಾಗಿದ್ದರು.

ಮೌಡ್ಯ ಕಂದಾಚಾರಗಳ ವಿರುದ್ಧ ಕನಕದಾಸರು ಬಂಡಾಯದ ಧ್ವನಿಯಾಗಿದ್ದರು.

ಸೈದಾಪುರ : ಕನಕದಾಸರ ನಿಲುವುಗಳು ಕೇವಲ ಭಕ್ತಿಯ ಆಚರಣೆಗೆ ಸೀಮಿತವಾಗಿರದೆ ಸಾಮಾಜಿಕ ಅಸಮಾನತೆ ಮೌಡ್ಯ ಮತ್ತು ಕಂದಾಚಾರಗಳ ವಿರುದ್ಧ ತಾರ್ಕಿಕ ಬಂಡಾಯದ ಧನಿಯಾಗಿದ್ದವು ಎಂದು ಕರಬಸಯ್ಯ ದಂಡಗಿಮಠ ಹೇಳಿದರು.

ಸೈದಾಪುರದ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಕಲಾ ವಿಭಾಗದಲ್ಲಿ,ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿ ಕೇತನ ಟ್ರಸ್ಟ್ ಸಗರ ಸಹಯೋಗದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಕನಕದಾಸರು ಕುರುಡ ನಂಬಿಕೆಯನ್ನು ಒಪ್ಪದೇ ತರ್ಕಕ್ಕೆ ಇಳಿದು ಸತ್ಯಾ ಸತ್ಯತೆ ತಿಳಿಯುವುದರ ಜೊತೆಗೆ ಅವರ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜವನ್ನು ಸುಧಾರಣೆ ಮಾಡಿದರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲರ ಮನಮುಟ್ಟುವ ಹಾಗೆ ಮಾತನಾಡಿದರು.

ಕನಕದಾಸರ ಮೌಲ್ಯಯುತ ಕೃತಿಗಳು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ವಿದ್ಯಾ ವರ್ಧಕ ಸಂಘ ಸೈದಾಪುರದ ಅಧ್ಯಕ್ಷರಾದ ಶ್ರೀ ಸಣ್ಣ ಸಿದ್ದರಾಮಪ್ಪಗೌಡ ಬೆಳಗುಂದಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಕಲಾವಿದ ಪ್ರಾಂಶುಪಾಲರಾದ ಜಿ.ಎಮ್. ಗುರುಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾದ ಲಿಂಗಾರೆಡ್ಡಿ ನಾಯಕ,ಹಂಪಣ್ಣ ಸಜ್ಜನಶೆಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಗರದ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕನ್ನಡ ಉಪನ್ಯಾಸಕ ಚಂದ್ರಶೇಖರ ಡೊಣ್ಣೆಗೌಡರ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಉಪನ್ಯಾಸಕ ರಾಜಶೇಖರ ಪಾಟೀಲ್ ಸ್ವಾಗತಿಸಿ ವಂದಿಸಿದರು.