ಡಾ. ರಾಮರಾವ ಮಹಾರಾಜರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂಜಾರ ಸಮಾಜದ ಸಂಸ್ಕೃತಿ ಉಳಿಸಿ : ಬಾಬುಸಿಂಗ್ ಮಹಾರಾಜ
ಬಂಜಾರ ಸಮಾಜದ ಸಂಸ್ಕೃತಿ ಉಳಿವಿಗೆ, ಧರ್ಮದ ಜಾಗೃತಿ ಬೆಳವಣಿಗೆಗೆ : ಜೂಡೋ ಬಂಜಾರ ಯಾತ್ರೆಗೆ ಸಿದ್ಧತೆ
ಡಾ. ರಾಮರಾವ ಮಹಾರಾಜರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂಜಾರ ಸಮಾಜದ ಸಂಸ್ಕೃತಿ ಉಳಿಸಿ : ಬಾಬುಸಿಂಗ್ ಮಹಾರಾಜ
ಚಿಂಚೋಳಿ : ಬಂಜಾರ ಸಮಾಜದ ಪೂಜಾರಿಗಳು ಧರ್ಮದ ಜಾಗೃತಿಗೆ ಕೆಲಸ ಮಾಡಬೇಕು. ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯಗಳು ಸಮಾಜದ ಭಕ್ತಿ ಆರಾಧಕರಾಗಿದ್ದು, ಪೂಜಾರಿಗಳು ಮಡಿವಂತಿಕೆಯಿಂದ ಪೂಜೆ ಪಾಠಗಳು ಕೈಗೊಳಬೇಕೆಂದು ಪೌರಾದೇವಿ ಪೀಠದ ಉತ್ತರಾಧಿಕಾರಿ ಧರ್ಮ ಗುರು ಸಂತ ಬಾಬು ಸಿಂಗ್ ಮಹಾರಾಜರು ಹೇಳಿದರು.
ಅವರು ಇಲ್ಲಿನ ಚಂದಾಪೂರದ ಬಂಜಾರ ಭವನ ಪಕ್ಕದಲ್ಲಿ ನಡೆದ ಡಾ. ರಾಮರಾವ ಮಹಾರಾಜರ ಪೂಜಾರಿಗಳ ಸೇವಾ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಆರಾಧಕ ಸಂತ ಸೇವಾಲಾಲ್ ಮಹಾರಾಜರ ಮತ್ತು ಜಗದ್ಗುರು ಡಾ. ರಾಮರಾವ ಮಹಾರಾಜರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂಜಾರ ಸಮಾಜದ ಸಂಸ್ಕೃತಿ ಉಳಿಸಿ, ಬೆಳೆಸುವುದು ಮತ್ತು ಜಾಗೃತಿಗೊಳಿಸುವುದು, ದುಶ್ಚಟಗಳಿಂದ ಸಮಾಜ ಮುಕ್ತಗೊಳಿಸುವುದಕ್ಕೆ ಪೂಜಾರಿಗಳು ಶ್ರಮ ವಹಿಸಬೇಕು. ಪೂಜಾರಿಗಳ ಬೇಡಿಕೆಗಳು ಸರಕಾರದ ಗಮನಕ್ಕೆ ತರಲು ಸಂಘ ರಚನೆ ಮಾಡಲಾಗುತ್ತಿದೆ ಎಂದರು.
ನಿವೃತ್ತ ನ್ಯಾಯ ಮೂರ್ತಿ ಡಾ. ಸುಭಾಶ್ಚಂದ್ರ ರಾಠೋಡ್ ಅವರು ಮಾತನಾಡಿ, ಬಂಜಾರ ಸಮಾಜದಲ್ಲಿ ಅನೇಕ ಸಾಮಾಜಿಕ ತೊದಡಕುಗಳಿವೆ. ಅದನ್ನು ಹೋಗಲಾಡಿಸುವುದಕ್ಕಾಗಿ, ಜೂಡೋ ಬಂಜಾರ ಕಾರ್ಯಕ್ರಮದೊಂದಿಗೆ ಸಮಾಜವನ್ನು ಜಾಗೃತಿಗೊಳಿಸಲಾಗುತ್ತಿದೆ. ಸಧ್ಯದಲ್ಲಿಯೇ ಜಿಲ್ಲೆಯ ಎಲ್ಲಾ ತಾಂಡಾಗಳಿಗೆ ಸಮಿತಿ ಭೇಟಿ ನೀಡಲಿದೆ ಎಂದರು.
ಸಮಾಜದ ಹಿರಿಯ ಮುಖಂಡ ರಾಮಶೆಟ್ಟಿ ಪವಾರ ಮಾತನಾಡಿ,
ಪೂಜಾರಿಗಳಿಗೆ ಯಾವುದೇ ಸಂಬಳ ಇರುವುದಿಲ್ಲ. ದೇವರ ಆರಾಧನೆ ಮಾಡುತ್ತಿರುವ ಪೂಜಾರಿಗಳಿಗೆ ಸರಕಾರದಿಂದ ಆರ್ಥಿಕ ಭದ್ರತೆ ನೀಡಲು ಸಚಿನ್ ಚವ್ಹಾಣ ಅವರ ನೇತೃತ್ವದಲ್ಲಿ ಸಂಘಟನೆ ಗಟ್ಟಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರ್ವತಲಿಂಗ ಪರಮೇಶ್ವರ ಮಹಾರಾಜ, ವಿಠಲ್ ಮಹಾರಾಜ, ರಾಜು ಮಹಾರಾಜ, ಕಾಂಗ್ರೆಸ್ ಮುಖಂಡ ಮೇಘರಾಜ ರಾಠೋಡ್, ಬಿಜೆಪಿ ಮುಖಂಡ ರಾಜು ಪವಾರ, ಸಂಘಟಕ ಸಚಿನ್ ಚವ್ಹಾಣ, ಮೋತಿರಾಮ, ಶ್ರೀನಿವಾಸ್ ಚಿಂಚೋಳಕರ್, ಕೆ. ಎಂ. ಬಾರಿ, ವಿನೋದ ಚವ್ಹಾಣ ಅವರು ಉಪಸ್ಥಿತರಿದ್ದರು.
