ಅಭಿಮಾನಿಗಳು, ಹಿತೈಷಿಗಳು, ಸಮಾಜ ಬಾಂಧವರಿಂದ ಪ್ರಭು ಬಿ.ಚವ್ಹಾಣರಿಗೆ ಅದ್ದೂರಿ ಸ್ವಾಗತ

ಅಭಿಮಾನಿಗಳು, ಹಿತೈಷಿಗಳು, ಸಮಾಜ ಬಾಂಧವರಿಂದ ಪ್ರಭು ಬಿ.ಚವ್ಹಾಣರಿಗೆ ಅದ್ದೂರಿ ಸ್ವಾಗತ

ಅಭಿಮಾನಿಗಳು, ಹಿತೈಷಿಗಳು, ಸಮಾಜ ಬಾಂಧವರಿಂದ ಪ್ರಭು ಬಿ.ಚವ್ಹಾಣರಿಗೆ ಅದ್ದೂರಿ ಸ್ವಾಗತ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಭಾಯಾಗಡ್‌ನಲ್ಲಿರುವ ಬಂಜಾರ ಸಮುದಾಯದ ಆರಾಧ್ಯ ದೈವ, ಧರ್ಮಗುರು ಸಂತ ಸೇವಾಲಾಲ್ ಮಹಾರಾಜರ ಪವಿತ್ರ ಜನ್ಮಸ್ಥಾನ ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೀದರ ಜಿಲ್ಲೆಗೆ ಆಗಮಿಸಿದ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರನ್ನು ಅಭಿಮಾನಿಗಳು, ಹಿತೈಷಿಗಳು ಹಾಗೂ ಬಂಜಾರ ಸಮಾಜದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದರು.

ಜಿಲ್ಲೆಗೆ ಆಗಮಿಸುತ್ತಿದ್ದಂತೆ ಬೀದರ್ ನ ನೌಬಾದ್ ಬಸವೇಶ್ವರ ವೃತ್ತದಲ್ಲಿ ರತಿಕಾಂತ ಮೇತ್ರೆ ಹಾಗೂ ಮತ್ತಿತರ ಅಭಿಮಾನಿಗಳು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. ಪಟಾಕಿ ಸಿಡಿಸಿ, ಹೂಹಾರ ಹಾಗೂ ಶಾಲು ಹೊದಿಸಿ ಸಂಭ್ರಮದಿಂದ ಸ್ವಾಗತಿಸಿದರು.

ಬಳಿಕ ಔರಾದ ಪಟ್ಟಣದ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಮಾರ್ಗಮಧ್ಯೆ ಚಿಕಪೇಟ್, ಕೌಠಾ(ಬಿ), ಸಂತಪೂರ, ಎಕಲಾರ ತಾಂಡಾ ಸೇರಿದಂತೆ ವಿವಿಧೆಡೆ ಅಭಿಮಾನಿಗಳು ಹಾಗೂ ಹಿತೈಷಿಗಳು ಹೂಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಔರಾದ(ಬಿ) ಪಟ್ಟಣದ ಎಪಿಎಂಸಿ ವೃತ್ತದಲ್ಲಿ ಹಾಗೂ ಅಮರೇಶ್ವರ ದೇವಸ್ಥಾನ ಸಮಿತಿಯ ವತಿಯಿಂದಲೂ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು. ವಿವಿಧ ಗ್ರಾಮಗಳು, ತಾಂಡಾಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶುಭ ಹಾರೈಸಿದರು.

 *ಬಂಜಾರಾ ಸಮಾಜದಿಂದ ಸನ್ಮಾನ:* 

ನಂತರ ಜಿಲ್ಲಾ ಬಂಜಾರಾ ಭವನದ ಸಮೀಪವಿರುವ ಮಾತಾ ಜಗದಂಬಾ ಹಾಗೂ ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ಪ್ರಮುಖರು ಪ್ರಭು ಚವ್ಹಾಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಬಸವರಾಜ ಪವಾರ, ಗೋಪಾಲಸಿಂಗ್ ರಾಠೋಡ್, ಶಾಂತಕುಮಾರ ರಾಠೋಡ, ವೀರಶೆಟ್ಟಿ ರಾಠೋಡ, ಮಾಣಿಕ ಪವಾರ, ಬಾಬುಸಿಂಗ್ ಜಾಧವ, ರಘುನಾಥ ರಾಠೋಡ, ಬಳವಂತ ರಾಠೋಡ, ಶಿವರಾಮ ರಾಠೋಡ ಹಾಗೂ ಇತರರು ಇದ್ದರು.

ಬಳಿಕ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಬಂಜಾರ ಸಮುದಾಯದ ಆರಾಧ್ಯ ದೈವ, ಧರ್ಮಗುರು ಸಂತ ಸೇವಾಲಾಲ್ ಮಹಾರಾಜರು ಜನ್ಮತಾಳಿದ ಪವಿತ್ರ ಭೂಮಿ ಭಾಯಾಗಡ್ ನಮ್ಮೆಲ್ಲರ ಶ್ರದ್ಧೆ, ಭಕ್ತಿ ಮತ್ತು ಗೌರವದ ಕೇಂದ್ರವಾಗಿದೆ. ಇದು ಕೇವಲ ಜನ್ಮಸ್ಥಳವಲ್ಲ, ಇಡೀ ಬಂಜಾರ ಸಮುದಾಯದ ಅಸ್ಮಿತೆಯ ಪ್ರತೀಕವಾಗಿರುವ ಬಂಜಾರಾ ಕಾಶಿ ಹಾಗೂ ದೇಶದ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಇಂತಹ ಪವಿತ್ರ ಮಹಾಮಠದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಜೀವನದ ಸೌಭಾಗ್ಯ ಮತ್ತು ಹೆಮ್ಮೆಯ ವಿಷಯವಾಗಿದೆ.

ನಾನು ಸಂತ ಸೇವಾಲಾಲ್ ಮಹಾರಾಜರ ಪರಮ ಭಕ್ತನಾಗಿದ್ದು, ಅವರು ಸಮಾಜಕ್ಕೆ ಹಾಕಿಕೊಟ್ಟ ಸತ್ಯ, ಧರ್ಮ, ಸೇವೆ, ಸಮಾನತೆ ಹಾಗೂ ಮಾನವೀಯತೆಯ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇನೆ. ಅವರ ಆದರ್ಶಗಳು ಮತ್ತು ತತ್ವಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಮಹಾಮಠವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು ನನ್ನ ಆಶಯವಾಗಿದೆ. ಮಹಾಮಠದ ಸಮಗ್ರ ಅಭಿವೃದ್ಧಿ, ಬಂಜಾರ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ಶಕ್ತಿಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಈ ಜವಾಬ್ದಾರಿಯನ್ನು ವೈಯಕ್ತಿಕ ಗೌರವವೆಂದು ಭಾವಿಸದೆ, ಸಮಾಜದ ಸೇವೆ ಮಾಡುವ ಪವಿತ್ರ ಅವಕಾಶವೆಂದು ಪರಿಗಣಿಸಿದ್ದೇನೆ. ಎಲ್ಲರ ಸಹಕಾರ, ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಮುಖಂಡರಾದ ಗುರುನಾಥ ಜ್ಯಾಂತಿಕರ್, ಪೀರಪ್ಪ ಔರಾದೆ, ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ದಯಾನಂದ ಘೂಳೆ, ಗುರುನಾಥ ರಾಜಗೀರಾ, ಅಬ್ಜಲ್ ಪಠಾನ್, ಸಂಜು ವಡೆಯಾರ್, ಶಿವಕುಮಾರ ಪಾಂಚಾಳ, ಮಂಜು ಸ್ವಾಮಿ, ಪ್ರಕಾಶ ಮೇತ್ರೆ, ಗುಂಡಪ್ಪ ಬಿರಾದಾರ, ಬಸವರಾಜ ಶಳ್ಕೆ, ಪ್ರವೀಣ ಬುಟ್ಟೆ, ಗೌತಮ ಕಾಂಬಳೆ, ಶಸಿ ಬುಟ್ಟೆ, ಲಕ್ಷ್ಮಣ, ತುಕಾರಾಮ ಸೇರಿದಂತೆ ಇತರರು ಸನ್ಮಾನಿಸಿದರು.