ನವರಾತ್ರಿ
ನವರಾತ್ರಿ
ವಿಜಯೋತ್ಸವದ ನವರಾತ್ರಿ
ನವದುರ್ಗೆಯರ ಆಗಮನದ ಸಂಭ್ರಮ,
ಮನೆಯೊಳಗೆ ಮೂಡಿತು ದಿವ್ಯ ಹರುಷದ ಗಮಗಮ!
ಶುಭ ತಂದಿತು ಬಂಗಾರದ ಶರತ್ಕಾಲ,
ಮೈಸೂರ ನಾಡಲ್ಲಿ ಮೊಳಗಿತು ಜಯಮಾಲೆ ಧ್ವನಿಗೆ ತಾಳ!!
ಮನೆಯ ಮೂಲೆ ಮೂಲೆಗಳಲಿ ಅರಿಶಿನ ಕುಂಕುಮದ ಅಲಂಕಾರ,
ಭಕ್ತಿಯಿಂದ ಬೆಳಗಿತು ನಂದಾದೀಪ ತೇಜ ಪ್ರಭೆಯ ಸಾಗರ.
ಕೈ ಮುಗಿದು ಬೇಡುವೆವು ತಾಯಿ ಜಗದಾಂಬೆ ಪಾದಕ್ಕೆ
ಸಕಲ ರೋಗ-ರುಜಿನಗಳ ದೂರ ಮಾಡುವಳು ನಮ್ಮ ಬಾಳಿಗೆ!!
ಅರಮನೆಯ ವೈಭವದಿ ನಗರೆಲ್ಲ ಆನಂದದಿ ಬೆಳಕು ಬೆಳಗಿದೆ,
ಬೆಳ್ಳಿಯ ರಥದದಲ್ಲಿ ತಾಯಿ ಚಾಮುಂಡಿ ವಿರಾಜಿಸುತಿಹಳು.
ಅದ-ನೋಡಿದ ಲಕ್ಷಾಂತರ ಜನರೆಲ್ಲರೂ ಕಣ್ತುಂಬಿಕೊಂಡರು.
ಜಂಬೂಸವಾರಿಯ ಗಜಪಡೆ ಹೆಜ್ಜೆ-ಯಲಿ ನಲೆದಾಡಿದರ!!
ಬನ್ನಿ ಮುರಿಯೋಣ, ಕೆಡಕುಗಳೆಲ್ಲವನ್ನೂ ಮರೆಯೋಣ,
ಹಗೆಯನೆಲ್ಲ ಕಳೆದು, ಪ್ರೀತಿಯಿಂದ ಬಾಳೋಣ.
ವಿಜಯದ ದಶಮಿಯ ಈ ಪವಿತ್ರ ಸುದಿನದಲಿ,
ಸುಖ-ಶಾಂತಿ ನೆಲೆಸಲಿ ನಮ್ಮೆಲ್ಲರ ಈ ಮನೆ ಮನದಲಿ!!
ದಸರಾ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ತಂದುಕೊಡಲಿ.
ಕಾಶೀನಾಥ ಪಾಟೀಲ ಕಲಬುರಗಿ

