ಕನ್ನಡವನ್ನು ಶಕ್ತಿಯುತ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರೂಪಿಸಿದ ದಾಸಿಮಯ್ಯ: ಶಿವಲಿಂಗಪ್ಪ ಅಷ್ಟಗಿ
ಕನ್ನಡವನ್ನು ಶಕ್ತಿಯುತ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರೂಪಿಸಿದ ದಾಸಿಮಯ್ಯ: ಶಿವಲಿಂಗಪ್ಪ ಅಷ್ಟಗಿ
ಕಲಬುರಗಿ:ಮಹಾಶರಣ ದಾಸಿಮಯ್ಯನವರು ಕನ್ನಡವನ್ನು ಕೇವಲ ಸಂಭಾಷಣೆಯ ಭಾಷೆಯನ್ನಾಗಿ ಕಾಣದೆ, ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಶಕ್ತಿಯುತ ಮಾಧ್ಯಮವನ್ನಾಗಿ ರೂಪಿಸಿದರು ಎಂದು ಸಪ್ತ ನೇಕಾರರ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಶಿವಲಿಂಗಪ್ಪ ಅಷ್ಟಗಿ ಹೇಳಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ನೇಕಾರರ ಸೇವಾ ಕೇಂದ್ರದಲ್ಲಿ ನ.14ರಂದು ನಡೆದ ಸಪ್ತ ನೇಕಾರರ ಸೇವಾ ಸಂಘದ 4ನೇ ವಿಶೇಷ ವಾರ್ಷಿಕ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾಸಿಮಯ್ಯನವರ ವಚನಗಳಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಕಾಯಕನಿಷ್ಠೆ, ದಯೆ ಮತ್ತು ಪ್ರಾಮಾಣಿಕತೆಯ ಮೌಲ್ಯಗಳು ಅಡಕವಾಗಿವೆ. ಅವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ, ಶಿಕ್ಷಣ ಸಂಸ್ಥೆ ಹಾಗೂ ಹಣಕಾಸು ಸಂಸ್ಥೆ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಜೆನವೇರಿ ವಿನೋದಕುಮಾರ ಮಾತನಾಡಿ, 'ಶರಣರ ಸಂಗವ ಮಾಡಯ್ಯ, ದುರ್ಜನರ ಸಂಗವ ಬಿಡಯ್ಯ.”' ಎಂಬ ತತ್ವದ ಮೂಲಕ ಗೆಳೆತನದ ಮಹತ್ವವನ್ನು ಸಾರಿದ ದಾಸಿಮಯ್ಯನವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಶ್ಯಾವಿ, ಶ್ರೀನಿವಾಸ ಬಲಪುರ, ಲಕ್ಷ್ಮೀಕಾಂತ ಜೋಳದ, ಕುಶಾಲ ಯಡವಳ್ಳಿ, ಡಾ. ಬಸವರಾಜ ಚನ್ನಾ, ಮಲ್ಲಿನಾಥ ಕುಂಟೋಜಿ, ಸತೀಶಕುಮಾರ ಜಮಖಂಡಿ, ಸಂತೋಷ ಲಖಮಣ, ಬಸವರಾಜ ವಡಗಾ, ವಿಜಯಕುಮಾರ ತ್ರಿವೇದಿ, ರಾಜಗೋಪಾಲ ಭಂಡಾರಿ, ಮಲ್ಲಿಕಾರ್ಜುನ ಬಡ್ದುರ, ಸಂತೋಷ ಗುರುಮೀಟ್ಕಲ್, ರಾಜು ಕೊಷ್ಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘದ ಸಂಸ್ಥಾಪಕ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ವಂದಿಸಿದರು.

