ಚಿಂಚೋಳಿ ತಾಲೂಕು ನಮ್ಮ ಕರ್ನಾಟಕ ಸೇನೆ ಅಧ್ಯಕ್ಷರಾಗಿ ಜರ್ನಪ್ಪ ತಳವಾರ್ ನೇಮಕ
ಚಿಂಚೋಳಿ ತಾಲೂಕು ನಮ್ಮ ಕರ್ನಾಟಕ ಸೇನೆ ಅಧ್ಯಕ್ಷರಾಗಿ ಜರ್ನಪ್ಪ ತಳವಾರ್ ನೇಮಕ
ಕಲಬುರಗಿ: ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಪಡಕೋಟೆ ಅವರ ನೇತೃತ್ವದಲ್ಲಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ರುಕ್ಮಯ್ಯ ಎಸ್. ಗುತ್ತೇದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಮಯೂರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ನಿರ್ಮಲಾ ತಳವಾರ್, ರಾಜ್ಯ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಶರಣು ಮುನ್ನಹಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಗುರುನಾಥ್ ಹಿರೇಗೌಡರ್ ಅವರ ಸಮ್ಮುಖದಲ್ಲಿ ಚಿಂಚೋಳಿ ತಾಲೂಕಿನ ನೂತನ ತಾಲೂಕು ಅಧ್ಯಕ್ಷರಾಗಿ ಜರ್ನಪ್ಪ ತಳವಾರ್ ಅವರನ್ನು ನೇಮಕ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನಲ್ಲಿ ಆಟೋ ಘಟಕ, ವಲಯ ಘಟಕ, ತಾಲೂಕು ಉಪಾಧ್ಯಕ್ಷರು, ಗ್ರಾಮ ಘಟಕ ಅಧ್ಯಕ್ಷರು, ನಗರ ಘಟಕ ಅಧ್ಯಕ್ಷರು ಹಾಗೂ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಮಯೂರ್ ತಿಳಿಸಿದ್ದಾರೆ.

