ಜೈ ಕರುನಾಡು ಜನಪರ ಸಮಿತಿ ಮೊದಲ ವರ್ಷದ ವಾರ್ಷಿಕೋತ್ಸವ: 28 ಸಾಧಕರಿಗೆ ಪ್ರಶಸ್ತಿ ಪ್ರದಾನ
ಜೈ ಕರುನಾಡು ಜನಪರ ಸಮಿತಿ ಮೊದಲ ವರ್ಷದ ವಾರ್ಷಿಕೋತ್ಸವ: 28 ಸಾಧಕರಿಗೆ ಪ್ರಶಸ್ತಿ ಪ್ರದಾನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜೈ ಕರುನಾಡು ಜನಪರ ಸಮಿತಿಯ ಮೊದಲ ವರ್ಷದ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ಸಮಿತಿಯ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ ಅವರ ನೇತೃತ್ವದಲ್ಲಿ ನ. 20ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟ, ಸಾಮಾಜಿಕ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 28 ಸಾಧಕರಿಗೆ ಕನ್ನಡಿಗರ ರತ್ನ, ಜನಸೇವಾ ರತ್ನ, ಜ್ಞಾನರತ್ನ ಹಾಗೂ ಸರ್ವೋತ್ತಮ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ತೋನಸನಹಳ್ಳಿ ಎಸ್. ಅಲ್ಲಮಪ್ರಭು ಸಂಸ್ಥಾನ ಮಠದ ಧರ್ಮರತ್ನ ಪೂಜ್ಯ ಡಾ. ಮಲ್ಲಣ್ಣಪ್ಪ ಮಹಾಸ್ವಾಮೀಜಿ ಹಾಗೂ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿ ಪೀಠದ ಪರಮಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ ಮೂಲಗೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯಗುರು ಮಡಿವಾಳಪ್ಪ ಚ. ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು.
ಕನ್ನಡಾಂಬೆ, ಭಾರತಾಂಬೆ, ರಾಷ್ಟ್ರಕವಿ ಕುವೆಂಪು ಹಾಗೂ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳಿಗೆ ಡಾ. ರಾಹುಲ್ ಬಿ. ಪೂಜಾರಿ (ಮಾತೋಶ್ರೀ ಕ್ಲಿನಿಕ್), ಬಸಲಿಂಗಪ್ಪ ಖಾನಾಪುರ ಹಾಗೂ ನಾಗೇಶ ಸಿ. ವಡಗೇರಿ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಲಬುರಗಿ ಕಚೇರಿಯ ನಿವೃತ್ತ ಹಿರಿಯ ಕಾನೂನು ಅಧಿಕಾರಿ ಗುರುನಾಥ ಬಿ. ಹೇರೂರ ಜ್ಯೋತಿ ಬೆಳಗಿಸಿದರು.
ಕಲ್ಯಾಣ ಕರ್ನಾಟಕ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಅಭಿಷೇಕ್ ಭಾಲಾಜಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಪವನಕುಮಾರ ವಳಕೇರಿ, ಉಮೇಶ ಕೆ. ಮುದ್ನಾಳ್, ಅಮೃತ ಪಾಟೀಲ್, ವೀರೇಶ ಎಸ್. ಹಿರೇಮಠ, ಶರಣಯ್ಯ ಬಿ. ಮಠ ಗಣಜಲಖೇಡ, ರಾಜಶೇಖರ ತಳಾರಿ, ಸುನೀತಾ ತಳವಾರ, ಜ್ಯೋತಿ ಮಾರ್ಲಾ, ಪೂಜಾ ಕಲಶೆಟ್ಟಿ ಸೇರಿದಂತೆ ಕನ್ನಡಪರ, ಸಾಮಾಜಿಕ ಹಾಗೂ ಜನಪರ ಹೋರಾಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಿತಿಯ ರಾಜ್ಯ ಅಧ್ಯಕ್ಷ ಸಿದ್ದು (ಗೌತಮ) ಎಚ್. ಜಮಾದಾರ ಅವರನ್ನು ಪವನಕುಮಾರ ವಳಕೇರಿ ಹಾಗೂ ಸುನೀತಾ ತಳವಾರ ಅವರು ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ ಸಿಹಿ ತಿನಿಸುವ ಮೂಲಕ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಅಂಬಾಜಿ ಮೇಟಿ, ಶಿವಕುಮಾರ ಮುಡ್ಡಿ, ಶಿವಶರಣಪ್ಪ ವಡಗೇರಿ, ಗೌತಮ ಸಂಗೊಳಗಿ ಸೇರಿದಂತೆ ಕನ್ನಡಪರ ಹಾಗೂ ಸಾಮಾಜಿಕ ಹೋರಾಟಗಾರರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

