ಶ್ರೀ ದೇವಲ ಮಹರ್ಷಿ ಜಯಂತಿ ಆಚರಣೆ
ಶ್ರೀ ದೇವಲ ಮಹರ್ಷಿ ಜಯಂತಿ ಆಚರಣೆ
ಕಲಬುರಗಿ: ನಗರದ ಸಪ್ತ ನೇಕಾರರ ಸೇವಾ ಕೇಂದ್ರದ ಕಚೇರಿಯಲ್ಲಿ ನ.21ರಂದು ಶ್ರೀ ದೇವಲ ಮಹರ್ಷಿಯವರ ಜಯಂತಿಯನ್ನು ಆಚರಿಸಲಾಯಿತು.
ಮಲ್ಲಿಕಾರ್ಜುನ ಶ್ಯಾವಿ ಮಾತನಾಡಿ, ಶೈವ ಮತ್ತು ನೇಕಾರ ಸಮಾಜ ಒಂದೇ ಎಂಬ ಭಾವನೆ ಹಾಗೂ ನಂಬಿಕೆ ನಮ್ಮದಾಗಿದೆ. ಸಮಾಜದಲ್ಲಿ ಐಕ್ಯತೆ, ಸಂಘಟನೆ ಮತ್ತು ಸಪ್ತ ಶರಣರ ಆಶಯಗಳನ್ನು ಎತ್ತಿಹಿಡಿಯಬೇಕು. ನೇಕಾರ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಅನ್ನ, ಆಶ್ರಯ ಹಾಗೂ ಉತ್ತಮ ಸಂಸ್ಕಾರ ನೀಡುವ ಕಾರ್ಯಕ್ಕೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ದೇವಲ ಮಹರ್ಷಿ ಹಾಗೂ ಶರಣರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ನ್ಯಾಯವಾದಿ ವಿನೋದಕುಮಾರ ಜೆನವೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ.ಮಾತನಾಡಿ, ಶ್ರೀನಿವಾಸ್ ಬಲಪುರ ಸ್ವಾಗತಿಸಿದರು. ಲಕ್ಷ್ಮೀಕಾಂತ ಜೋಳದ ಪ್ರಾಸ್ತಾವಿಕ ಮಾತನಾಡಿದರು. ಮ್ಯಾಳಗಿ ಚಂದ್ರಶೇಖರ ನಿರೂಪಿಸಿದರು. ರಾಜು ಕಂಬದ ವಂದಿಸಿದರು.
ಈ ಸಂದರ್ಭದಲ್ಲಿ ಬ್ಯಾಗಳ್ಳಿ ಶಿವಚೆಲ್ಲಪ್ಪ, ಶಿವಾನಂದ ಜವಳಿ, ಮಲ್ಲಿನಾಥ ಕುಂಟೋಜಿ, ಸಂತೋಷ ಗುರಮೀಟಕಲ, ರಾಜು ಕೊಷ್ಠಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

