ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ಪ್ರಯುಕ್ತ ಚಂದ್ರಶೇಖರ್ ಹಡಪದ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪೆನ್ನು ವಿತರಣೆ

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ಪ್ರಯುಕ್ತ ಚಂದ್ರಶೇಖರ್ ಹಡಪದ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪೆನ್ನು ವಿತರಣೆ

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ಪ್ರಯುಕ್ತ ಚಂದ್ರಶೇಖರ್ ಹಡಪದ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪೆನ್ನು ವಿತರಣೆ

ಕಲಬುರಗಿ: ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ಜನ್ಮದಿನದ ಅಂಗವಾಗಿ ನಗರದ ಕಿವುಡ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಚಂದ್ರಶೇಖರ ಹಡಪದ ತೋನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ವಿಶೇಷ ಮಕ್ಕಳಿಗೆ ಪಠ್ಯಪುಸ್ತಕ, ಪೆನ್ ಹಾಗೂ ಸಿಹಿ ವಿತರಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಅವರೊಂದಿಗೆ ಸಂತಸ ಹಂಚಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಹಡಪದ ಅವರು, ಜನ್ಮದಿನದ ಆಚರಣೆ ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಅಗತ್ಯವಿರುವವರೊಂದಿಗೆ ಸಂತೋಷ ಹಂಚಿಕೊಳ್ಳುವ ಮೂಲಕ ಅರ್ಥಪೂರ್ಣವಾಗಬೇಕು. ವಿಶೇಷವಾಗಿ ಕಿವುಡ, ಮೂಕ ಹಾಗೂ ಅಂಧ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದು ಸಂತಸ ತಂದಿದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಇಂತಹ ಸೇವಾ ಕಾರ್ಯಗಳ ಮೂಲಕ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಡಾ. ಲೋಕೇಶ್, ಅಂಧ ಬಾಲಕರ ಸರ್ಕಾರಿ ಶಾಲೆಯ ಅಧೀಕ್ಷಕ ಪ್ರಕಾಶ್ ಭಜಂತ್ರಿ, ಶಿಕ್ಷಕರಾದ ಸಂಗಮ, ವೈಶಾಲಿ, ಘಾಳಪ್ಪ, ಉಮೇಶ್ ಸೇರಿದಂತೆ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಸದಸ್ಯರಾದ ರಮೇಶ್ ನಿಲೂರ, ರುದ್ರಮಣಿ ಬೆಟಗೇರಾ, ಭಗವಂತ ಕಿರಣಗಿ, ರಮೇಶ್ ಕೌವಲಗಾ, ರಮೇಶ್ ಕರಹರಿ, ಮಲ್ಲಿಕಾರ್ಜುನ ಸುಗುರ್, ಭಾಗೇಶ ಹಾವನೂರ, ಶಿವಕುಮಾರ ಅವರಾದ, ಶ್ರೀಶೈಲ ಬಗ್ದುರ್ಗಿ, ಪ್ರಸನ್ನ ಮೇಲ್ಮನಿ, ಕೆದಾರ ಡೆಫ್ಟಿ, ಅನಿಲ್ ಹಾವನೂರ, ರಾಕೇಶ್ ಧನ್ನಿ, ನಿಹಾಲ್ ಶಿವಕೇರಿ, ಅವಿನಾಶ್ ಗಾಯಕ್ವಾಡ್, ರಾಜರತ್ನ ಜೋಶಿ, ಗೌತಮ ಕೋವಿ, ಆದಿತ್ಯ ಮಹಾಗೌಂವಕರ್, ಅಜಯ್ ಗಾಯಕ್ವಾಡ್, ವೇಣುಗೋಪಾಲ್ ಕಂಟೆ, ಪೃಥ್ವಿ ಗಾಯಕ್ವಾಡ್, ಸತೀಶ್ ಕಬಾಡೆ, ಹನುಮಂತ ಸಾಲೆಗಾಂವ, ನೀರಜ್ ಕಟ್ಟಿಮನಿ ಹಾಗೂ ರೋನಿತ್ ಕಾಂಬ್ಳೆ ಉಪಸ್ಥಿತರಿದ್ದರು.