ರೋಣದಲ್ಲಿ ನ. 28ರಿಂದ 9 ದಿನಗಳ ಕಾಲ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಅಧ್ಯಾತ್ಮ ಪ್ರವಚನ ಹಾಗೂ ಸದ್ಭಾವನಾ ಪಾದಯಾತ್ರೆ

ರೋಣದಲ್ಲಿ ನ. 28ರಿಂದ 9 ದಿನಗಳ ಕಾಲ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಅಧ್ಯಾತ್ಮ ಪ್ರವಚನ ಹಾಗೂ ಸದ್ಭಾವನಾ ಪಾದಯಾತ್ರೆ

ರೋಣದಲ್ಲಿ ನ. 28ರಿಂದ 9 ದಿನಗಳ ಕಾಲ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಅಧ್ಯಾತ್ಮ ಪ್ರವಚನ ಹಾಗೂ ಸದ್ಭಾವನಾ ಪಾದಯಾತ್ರೆ

ರೋಣ (ಗದಗ ಜಿಲ್ಲೆ): ನಾಡಿನ ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಇದೇ ನವೆಂಬರ್ 28, 2026 (ಶನಿವಾರ) ರಿಂದ ಡಿಸೆಂಬರ್ 06, 2026 (ಭಾನುವಾರ) ರವರೆಗೆ ಒಟ್ಟು 9 ದಿನಗಳ ಕಾಲ ರೋಣ ನಗರದಲ್ಲಿ ಭವ್ಯ ಅಧ್ಯಾತ್ಮ ಪ್ರವಚನ" ಹಾಗೂ ಸದ್ಭಾವನಾ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.  

ಪ್ರತಿದಿನ ಸಂಜೆ 6:00 ರಿಂದ 7:00 ಗಂಟೆಯವರೆಗೆ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪೂಜ್ಯ ಶ್ರೀಗಳ ಅಮೃತವಾಣಿಯ ಅಧ್ಯಾತ್ಮ ಪ್ರವಚನ ನಡೆಯಲಿದೆ. ಸಮಾಜದಲ್ಲಿ ಸಾಮರಸ್ಯ, ಶಾಂತಿ, ಸಂಸ್ಕಾರ ಮತ್ತು ಸದ್ಭಾವನೆ ಮೂಡಿಸುವ ಸದುದ್ದೇಶದಿಂದ ಪ್ರತಿದಿನ ಬೆಳಿಗ್ಗೆ 6:30ಕ್ಕೆ ಪೂಜ್ಯ ಶ್ರೀಗಳು ಹಾಗೂ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿವಿಧ ಬಡಾವಣೆಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಲಿದೆ.  

 ರೋಣ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್ ಗುರುಬಸವಜ್ಜನಮಠ ಯಾದವಾಡ ಬಸವೇಶ್ವರ ಗುಡಿ, ಹೊನ್ನಕೇರಿ ಮಲ್ಲಯ್ಯನ ಗುಡಿ, ಕುಂಬಾರ ಅಗಸಿ, ಹವಳಪ್ಪನವರ ಓಣಿ, ಮಾಳಗೌಡ್ರ ಓಣಿ, ಈಶ್ವರ ಗುಡಿ, ಗುಲಗಂಜಿಮಠದ ಮುಖಾಂತರ ಹಿರೇಮಠದಿಂದ ಸಾಗಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.  

ದಿನಾಂಕ 29-11-2026 (ಭಾನುವಾರ): ರೋಣ ನಗರದ ಬೂದೀಶ್ವರ ಮಠದಿಂದ ಪ್ರಾರಂಭವಾಗಿ, ಕುರುಬಗಲ್ಲಿ, ಮರದಮ್ಮನ ಗುಡಿ, ಸೂಡಿ ಕ್ರಾಸ್, ಶಿವಪೇಟೆ 1ನೇ ಕ್ರಾಸ್‌ದಿಂದ ಮುಗಳಿ ರಸ್ತೆ, ಶಿವಪೇಟೆ 8ನೇ ಕ್ರಾಸ್, ಶಿವಾನಂದ ನಗರ ನೀರಿನ ಟ್ಯಾಂಕ್ ಮಾರ್ಗವಾಗಿ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಕ್ತಾಯಗೊಳ್ಳಲಿದೆ.  

 ರೋಣ ನಗರದ ಗುರುದೇವರ ಜಾಳ ಬಸವೇಶ್ವರ ಗುಡಿಯಿಂದ ಪ್ರಾರಂಭವಾಗಿ, ಕಲ್ಯಾಣ ನಗರ, ವಾರ್ಡ್ ನಂ. 22ರ ನೀರಿನ ಟ್ಯಾಂಕ್, ಶ್ರೀನಗರ, ಮಾರುತೇಶ್ವರ ಗುಡಿ ಮಾರ್ಗವಾಗಿ ಅಂಜುಮನ್ ಶಾಲೆಯ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.  

ದಿನಾಂಕ 01-12-2026 (ಮಂಗಳವಾರ): ಮಲ್ಲಾಪುರ ಗ್ರಾಮದಲ್ಲಿ  

ದಿನಾಂಕ 02-12-2026 (ಬುಧವಾರ): ಹಿರೇಹಾಳ ಗ್ರಾಮದಲ್ಲಿ  

ದಿನಾಂಕ 03-12-2026 (ಗುರುವಾರ): ಅಬ್ಬಿಗೇರಿ ಗ್ರಾಮದಲ್ಲಿ  

ದಿನಾಂಕ 04-12-2026 (ಶುಕ್ರವಾರ): ಅರಹುಣಸಿ ಗ್ರಾಮದಲ್ಲಿ  

ದಿನಾಂಕ 05-12-2026 (ಶನಿವಾರ): ಹುನಗುಂಡಿ ಗ್ರಾಮದಲ್ಲಿ  

ದಿನಾಂಕ 06-12-2026 (ಭಾನುವಾರ): ಸೂಡಿ ಗ್ರಾಮದಲ್ಲಿ  

ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ನೆಮ್ಮದಿ ಮತ್ತು ಜೀವನಕ್ಕೆ ಹೊಸ ದಿಕ್ಕು ತೋರುವ ಈ 9 ದಿನಗಳ ಜ್ಞಾನಯಜ್ಞ ಹಾಗೂ ಸದ್ಭಾವನಾ ಪಾದಯಾತ್ರೆಯಲ್ಲಿ ರೋಣ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್ತರು, ತಾಯಂದಿರು, ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜ್ಯ ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ