ಪೋಲಕಪಳ್ಳಿ ಪವರ್ ಪ್ಲಾಂಟ್ ದಿಂದ ಕಾರ್ಮಿಕರಿಗೆ ವಂಚನೆ, ಸರಕಾರದ ರಕ್ಷಣೆ ಕೋರಿದ ಕಾರ್ಮಿಕರು ಧರಣಿ ಸ್ಥಳಕ್ಕೆ ಸಮಸ್ಯೆ ಆಲಿಸಲು ಧರಣಿ ಸ್ಥಳಕ್ಕೆ ಅಧಿಕಾರಿಗಳು : ಧರಣಿ ಸತ್ಯಾಗ್ರಹ ಮುಂದುವರಿಕೆ
ಪೋಲಕಪಳ್ಳಿ ಪವರ್ ಪ್ಲಾಂಟ್ ದಿಂದ ಕಾರ್ಮಿಕರಿಗೆ ವಂಚನೆ, ಸರಕಾರದ ರಕ್ಷಣೆ ಕೋರಿದ ಕಾರ್ಮಿಕರು
ಧರಣಿ ಸ್ಥಳಕ್ಕೆ ಸಮಸ್ಯೆ ಆಲಿಸಲು ಧರಣಿ ಸ್ಥಳಕ್ಕೆ ಅಧಿಕಾರಿಗಳು : ಧರಣಿ ಸತ್ಯಾಗ್ರಹ ಮುಂದುವರಿಕೆ
ಚಿಂಚೋಳಿ :ಪೋಲಕಪಳ್ಳಿ ಮ್ಯಾಟ್ರೀಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ (ಪವರ್ ಪ್ಲಾಂಟ್) ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರ ತಿಂಗಳ ಸಂಬಳ ಪಾವತಿಸದೆ ಕಾರ್ಮಿಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆಗ್ರಹಿಸಿ, ಕಾರ್ಮಿಕರು ಪವರ್ ಪ್ಲಾಂಟ್ ಕಂಪನಿ ಮುಂದೆ ಎರಡು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡು ಮುಂದುವರೆಸಿದ್ದಾರೆ.
ಪವರ್ ಪ್ಲಾಂಟ್ ನಲ್ಲಿ ಒಟ್ಟು 120 ಜನ ಕಾರ್ಮಿಕರು 3 ಸಿಫ್ಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ 3 ತಿಂಗಳುಗಳಿಂದ ಕಾರ್ಮಿಕರಿಗೆ ತಿಂಗಳ ಸಂಬಳ ನೀಡದೆ ಕಂಪನಿ ಮಾಲೀಕ, ಮುಖ್ಯಸ್ಥರು ಸಂಬಳ ಪಾವತಿಸದೆ ವಂಚನೆ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. 120 ಕಾರ್ಮಿಕರ ಕುಟುಂಬಗಳು ಕಂಪನಿಯ ಸಂಬಳ ಪಾವತಿಯ ಆಧಾರದ ಮೇಲೆ ನಿರ್ವಹಣೆ ನಡೆಸುತ್ತಿವೆ. ಏಕಾಏಕಿ ಸಂಬಳ ಪಾವತಿ ನಿಲ್ಲಿಸಿರುವುದು ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಈಗ ಕಂಪನಿ ಮೂರು ತಿಂಗಳ ಸಂಬಳ ಪಾವತಿಸದೇ ಬಾಕಿ ಉಳಿಸಿಕೊಂಡು ಏಕಾಏಕಿ ಕಂಪನಿ ವಿದ್ಯುತ್ ಉತ್ಪಾದನೆಯ ಕಾರ್ಯ ಚಟುವಟಿಕೆಗಳು ನಿಲ್ಲಿಸಲಾಗಿದೆ. ಕಂಪನಿ ಮುಖ್ಯಸ್ಥ ಕಂಪನಿ ಮಾರಾಟ ಮಾಡುವ ವಿಚಾರದಲ್ಲಿ ತೊಡಗಿಕೊಂಡಿದ್ದರಿಂದ ಕಂಪನಿ ಚಟುವಟಿಕೆಗಳು ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ 120 ಕಾರ್ಮಿಕರ ಬದುಕುಗಳ ದಿಕ್ಕು ತೋಚದಂತೆ ಆಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಎರಡು ದಿನದಿಂದ ರಾತ್ರಿ ಹಗಲು ಇಲ್ಲಿಯೇ ಮಲಗಿಕೊಂಡು ಧರಣಿ ನಡೆಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಯ ಗೋಳು ಕೆಳಲು ಮಾಹಿತಿ ಪಡೆದ ಯಾವೊಬ್ಬರು ಅಧಿಕಾರಿಗಳು ಧರಣಿ ಕಡೆಗೆ ಕಣ್ಣು ಹಾಸಿಲ್ಲ ಎಂದು ಧರಣಿನಿರತ ಕಾರ್ಮಿಕರು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಡ ಕಾರ್ಮಿಕರ ನೆರವಿಗೆ ಬರಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಂಪನಿ ಕಾರ್ಮಿಕರಾದ ಶ್ರೀನಿವಾಸ್, ವೀರಶೆಟ್ಟಿ, ಪ್ರಹ್ಲಾದ್ ಸಂತೋಷ ಗಡ್ಡಿಮನಿ, ರೇವಣಸಿದ್ದಪ್ಪ, ಕಣೆಯಪ್ಪ, ಸೈಯದ್ ನಬೀ ಸಾಬ್, ಪ್ರಭಾವತಿ, ಅನುಷಮ್ಮ, ಸೈಯದ್ ಶಕೀಲ ಪಟೇಲ್ ಅಖೀಲ, ಜಮೀಲ್ ಸಾಬ್, ಅಶ್ರಫ್ ಖಾನ, ಜಗಪ್ಪ ಪೋಲಕಪಳ್ಳಿ ಅವರು ಉಪಸ್ಥಿತರಿದರು.
