ಜಯನಗರ ಶಿವಮಂದಿರದಲ್ಲಿ ಆ.13 ರಿಂದ ಶಿವ ಪುರಾಣ ಹಾಗೂ 12 ಜ್ಯೋತೀರ್ಲಿಂಗಗಳ ಮಹಿಮೆ ಪುರಾಣ ಪ್ರಾರಂಭ.
ಜಯನಗರ ಶಿವಮಂದಿರದಲ್ಲಿ ಆ.13 ರಿಂದ ಶಿವ ಪುರಾಣ ಹಾಗೂ 12 ಜ್ಯೋತೀರ್ಲಿಂಗಗಳ ಮಹಿಮೆ ಪುರಾಣ ಪ್ರಾರಂಭ.
ಕಲಬುರಗಿ:ಪ್ರತಿ ವರ್ಷದಂತೆ ಜಯನಗರ ಶಿವಮಂದಿರದಲ್ಲಿ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಆ.13 ರಿಂದ ಸೆ.13 ರವರೆಗೆ ಒಂದು ತಿಂಗಳವರೆಗೆ ಶಿವ ಪುರಾಣ ಹಾಗೂ 12 ಜ್ಯೋತೀರ್ಲಿಂಗಗಳ ಮಹಿಮೆ ಕುರಿತು ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಿತ್ಯ ಸಂಜೆ 7 ರಿಂದ 8 ಗಂಟೆವರೆಗೆ ಕಲಬುರಗಿಯ ಖ್ಯಾತ ಕಥಾ ವಾಚಕರು, ಸಾಹಿತಿಗಳಾದ ಡಾ.ಇಂದುಮತಿ ಪಂಡಿತ್ ಜವಳಗಿ ಅವರು ಪುರಾಣ ನಡೆಸಿಕೊಡಲಿದ್ದಾರೆ.ಈ ಬಾರಿ ಶಿವ ಪುರಾಣ ಅಲ್ಲದೇ 12 ಜ್ಯೋತೀರ್ಲಿಂಗಗಳ ಮಹಿಮೆ ಹಾಗೂ ಅವುಗಳ ವಿಶೇಷತೆ ಕುರಿತು ಪುರಾಣದ ಮೂಲಕ ಭಕ್ತರಿಗೆ ತಿಳಿಸುವರು.ನಂತರ ರಾತ್ರಿ 8 ರಿಂದ 8.30 ಗಂಟೆವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ.ಇದರಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು,ಚಿಂತಕರು ಮತ್ತು ಸಾಹಿತಿಗಳು, ಪತ್ರಕರ್ತರು ಭಾಗವಹಿಸುವರು.ಕಳೆದ ವರ್ಷ ಶ್ರಾವಣ ಮಾಸದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.ಅನೇಕರಿಂದ ವಿವಿಧ ರೀತಿಯ ಉಪನ್ಯಾಸಗಳು ನಡೆದು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.ಅದೇ ರೀತಿ ಅದರ ಜೊತೆಗೆ ಮಕ್ಕಳಿಗಾಗಿ ರಂಗೋಲಿ, ಚಿತ್ರ ಬಿಡಿಸುವುದು ಸೇರಿದಂತೆ ಅನೇಕ ಸ್ಪರ್ಧೆಗಳು ಎರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು ಎಂದರು.
ಆ.13 ರಂದು ಸಂಜೆ 7 ಗಂಟೆಗೆ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದ ಪೂಜ್ಯ ಡಾ.ಅಪ್ಪಾರಾವ ದೇವಿ ಮುತ್ಯಾ ಅವರು ವಹಿಸಲಿದ್ದಾರೆ.ಕಾರ್ಯಕ್ರಮವನ್ನು ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಎಚ್ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ,ಕಥಾ ವಾಚಕರು ಸಾಹಿತಿಗಳಾದ ಡಾ.ಇಂದುಮತಿ ಪಂಡಿತ್ ಜವಳಗಿ ಆಗಮಿಸುವರು.ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸುವರು.ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು.ತಿಂಗಳ ಪರ್ಯಂತ ನಡೆಯುವ ಪುರಾಣ ಕಾರ್ಯಕ್ರಮದ ಪ್ರವಚನದ ನಂತರ ನಿತ್ಯ ಪ್ರಸಾದ ವ್ಯವಸ್ಥೆ ಇರುತ್ತದೆ.ಭಕ್ತರು, ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಬೇಕು ಎಂದು ಅವರು ಕೋರಿದ್ದಾರೆ.

