ಅಸಮಾಧಾನ ಬದಿಗಿಟ್ಟು ಕಾಂಗ್ರೆಸ್ ಸಂಘಟಿತರಾಗಲಿ: ಕದಂ

ಅಸಮಾಧಾನ ಬದಿಗಿಟ್ಟು ಕಾಂಗ್ರೆಸ್ ಸಂಘಟಿತರಾಗಲಿ: ಕದಂ

ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಉತ್ತಮ ಬೆಳವಣಿಗೆ ಹೊಂದಿದೆ

ಕುಟುಂಬಂದಲ್ಲಿ ಸಣ್ಣ-ಪುಟ್ಟ ಅಸಮಧಾನಗಳು ನಡೆಯುತ್ತವೆ. ಕಾರ್ಯಕರ್ತರು ಅವುಗಳಿಗೆ ಕಿವಿ ಕೊಡದೇ ಸಂಘಟಿತರಾಗಬೇಕು : ಸಾಂಗ್ಲಿ ಶಾಸಕ ಕದಂ 

ಚಿಂಚೋಳಿ : ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಉತ್ತಮ ಬೆಳವಣಿಗೆ ಹೊಂದಿದೆ. ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಿ ಪಕ್ಷವನ್ನು ಬಲಪಡಿಸಬೇಕೆಂದು ಎಐಸಿಸಿ ವಿಕ್ಷಕ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಾಸಕ ವಿಶ್ವಜಿತ್ ಕದಂ ಅವರು ಹೇಳಿದರು.   

ಪಟ್ಟಣದ ಶ್ರೀಚೆನ್ನ ಕಲ್ಯಾಣ ಮಂಟಪದಲ್ಲಿ ಕಾಳಗಿ, ಕೋಡ್ಲಿ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ನ ಸಂಘಟಿತಾ ಸೃಜನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಟುಂಬ ಅಂದಲ್ಲಿ ಸಣ್ಣ ಪುಟ್ಟ ಗಲಾಟೆಗಳು, ಮನಸ್ಥಾಪಗಳು ನಡೆಯುವುದು ಸಹಜ. ಕಾರ್ಯಕರ್ತರು ಅವುಗಳಿಗೆ ಕಿವಿಕೊಡದೆ ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸನದರಾಗಬೇಕು. ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಅದರ ಭಾಗವಾಗಿ ಅಧ್ಯಕ್ಷರ ಆಯ್ಕೆಗೆ ಸಂಘಟಿತಾ ಸೃಜನ ಅಭಿಯಾನದ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಳಲಾಗುತ್ತಿದೆ . ಸಂಗ್ರಹಿಸಿದ ಅಭಿಪ್ರಾಯಗಳೆಲ್ಲವೂ ವರಷ್ಠರಿಗೆ ತಲುಪಿಸಲಾಗುತ್ತದೆ ಎಂದರು. 

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮಾತನಾಡಿ, ವರಿಷ್ಠರ ಸೂಚನೆಯಂತೆ ಜಿಲ್ಲೆಯ ಪಕ್ಷದ ಅಧ್ಯಕ್ಷರ ಆಯ್ಕೆಗೆ ಎಲ್ಲಾ ತಾಲೂಕ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದರ ಪಕ್ಷದ ವರಿಷ್ಠರ ತೀರ್ಮಾನದಂತೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಪಕ್ಷದ ಶಿಸ್ತಿಗೆ ಧಕ್ಕೆ ತರುವಂತವರು ಯಾರೆಯಾಗಿದ್ದರು ಸರಿ ಅಂತವರನ್ನು ಮೂಲಾಜಿಲ್ಲದೆ ಪಕ್ಷದಿಂದ ಉಚ್ಚಾಟಿಸುವುದು ಅನಿವಾರ್ಯವಾಗಲಿದೆ. ಹೀಗಾಗಿ ಪಕ್ಷದ ನಿಯಮಗಳಿಗೆ ಬದ್ಧರಾಗಿ ಶಿಸ್ತು ಕಾಪಾಡಿಕೊಳ್ಳಬೇಕು ಎಂದರು. 

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿ ಹೊರಟಿದೆ. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷಕ್ಕಿಂತ ಹತ್ತುಪಟ್ಟು ಸಂಘಟನೆಯಲ್ಲಿ ಬಲಿಷ್ಥವಾಗಿದ್ದು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಅವರಿಂದ ಸಾಧ್ಯವಾಗದ ಕೆಲಸವೆಂದರು. 

ಈ ಸಂದರ್ಭದಲ್ಲಿ ಬಾಲಭವನ ಉಪಾಧ್ಯಕ್ಷ ಅನೀಲ ದೇವಿಂದ್ರಪ್ಪ ಜಮಾದಾರ, ಭೀಮರಾವ ಟಿಟಿ, ಬಸವರಾಜ ಮಲಿ, ದೇವೀಂದ್ರಪ್ಪ ಸಾಲಹಳ್ಳಿ, ಅಕ್ಕಮಹಾದೇವಿ, ಲಕ್ಷ್ಮೀದೇವಿ ಕೊರವಿ, ಆನಂದ ಟೈಗರ್, ಲಕ್ಷ್ಮಣ ಆವಂಟಿ, ಅಬ್ದುಲ್ ಬಾಸಿದ್, ಪ್ರವೀಣ ಟಿಟಿ, ನಾಗೇಶ ಗುಣಾಜಿ, ಸಂತೋಷ ಗುತ್ತೇದಾರ ಸೇರಿದಂತೆ ವೀಕ್ಷಕರ ತಂಡದ ಸದಸ್ಯರು ಉಪಸ್ಥಿತರಿದ್ದರು.