ಗುರು ದರ್ಶನದಿಂದ ಬದುಕು ಪಾವನವಾಗಲಿ: ಶಿವಲಿಂಗ ಶಿವಾಚಾರ್ಯ
ಗುರು ದರ್ಶನದಿಂದ ಬದುಕು ಪಾವನವಾಗಲಿ: ಶಿವಲಿಂಗ ಶಿವಾಚಾರ್ಯ
ಕಮಲನಗರ : ಮನುಷ್ಯನ ಬದುಕು ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಗುರುವಿನ ಮಾರ್ಗದರ್ಶನ ಬಹಳ ಮುಖ್ಯ ಎಂದು ಹೇಡಗಾಪುರದ ಶ್ರೀಗಳಾದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಧೋಳ (ಬಿ) ಗ್ರಾಮದ ಚರಮೂರ್ತಿ ಶ್ರೀ ಸದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಗಳ 102ನೆಯ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಪ್ರವಚನ ಕಾರರಾಗಿ ಅನ್ನದಾಸೋಹ, ಪವಾಡ ಪುರುಷರಂದೆ ಖ್ಯಾತಿಯಾಗಿರುವ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಬದುಕು ಅಪರೂಪವಾಗಿದ್ದು ಪ್ರತಿ ವರ್ಷ ಈ ಮಠದ ಸಂಪ್ರದಾಯಸ್ಥರಂತೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜನಮಾನಸದಲ್ಲಿ ಉಳಿದು ಬಿಡುತ್ತದೆ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಪೀಠಾಧಿಪತಿ ಡಾ. ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದರು.
ಹೇಡಗಾಪುರದ ಅಪ್ಪಾಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ನೀಲಕಂಠ ಹಲಬುರ್ಗಿ, ಮಾಜಿ ಅಧ್ಯಕ್ಷ ಧನರಾಜ ಗುಡ್ಡ, ಗಜಾನಂದ ವಟಿಗೆ, ಪಿಕೆಪಿಎಸ್ ಅಧ್ಯಕ್ಷ ಗುರುನಾಥ ವಟಿಗೆ, ಉದಯಕುಮಾರ ಗ್ರಾಮಸ್ಥರು ಉಪಸ್ಥಿದ್ದರು.
ನಾಗನಾಥ ಶಂಕು ಕಾರ್ಯಕ್ರಮ ನಿರೂಪಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಮಲನಗರ್ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರಿಗೆ ಮಠದಿಂದ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಗುರುನಾಥ್ ವಟಗೆ ದಂಪತಿಗಳಿಂದ ಅನ್ನದಾಸೋಹ ನೇರವೇರಿಸಿದರು.

