ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳು ಮುಖ್ಯ - ಅಮೀನರೆಡ್ಡಿ ಪಾಟೀಲ್ ಯಾಳಗಿ

ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳು ಮುಖ್ಯ - ಅಮೀನರೆಡ್ಡಿ ಪಾಟೀಲ್ ಯಾಳಗಿ

ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳು ಮುಖ್ಯ - ಅಮೀನರೆಡ್ಡಿ ಪಾಟೀಲ್ ಯಾಳಗಿ 

ಶಹಪುರ: ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ದೇಹಕ್ಕೆ ಶಕ್ತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡಿ ವ್ಯಕ್ತಿತ್ವದಲ್ಲಿ ಶಿಸ್ತು ಮತ್ತು ಒಗ್ಗಟ್ಟಿನ ಭರವಸೆಯ ಭಾವನೆ ಮೂಡಿಸುತ್ತದೆ ಎಂದು ಬಿಜೆಪಿ ಯುವ ಮುಖಂಡ ಅಮೀನ ರೆಡ್ಡಿ ಪಾಟೀಲ ಯಾಳಗಿ ಹೇಳಿದರು.

ತಾಲೂಕಿನ ವನದುರ್ಗ ಗ್ರಾಮದಲ್ಲಿ ಆಯೋಜಿಸಿದ ವನದುರ್ಗ ಮಾನ್ಸೂನ್ ಕ್ರಿಕೆಟ್ ಟೂರ್ನಮೆಂಟ್ ಸೀಸನ್ -01 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶಕ್ತಿಪ್ರದರ್ಶನ ಮಾಡುವುದೇ ಕ್ರೀಡಾಕೂಟದ ಮುಖ್ಯ ಉದ್ದೇಶ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಮಾತನಾಡಿದ ಅವರು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು ಬಾಳುವ ಸಾಮರಸ್ಯ ಮೂಡಿಸುವುದಲ್ಲದೆ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ ಎಂದು ಹೇಳಿದರು.

ಕೊನೆಯದಾಗಿ ಈ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವನ್ನು ಶಹಾಪುರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಅಮೀನ ರೆಡ್ಡಿ ಪಾಟೀಲ್ ಯಾಳಗಿ ಅವರಿಂದ 51,000/, ರೂ.ದ್ವಿತೀಯ ಬಹುಮಾನವನ್ನ ದೇವು ಸುರಪುರಕರ ಸನ್ನಿ ಬಿಜೆಪಿ ಯುವ ಮುಖಂಡರು ಇವರಿಂದ 25.000/ ರೂ ಜೊತೆಗೆ ತಲಾ ಒಂದು ಕಪ್ ವಿತರಿಸಲಾಗುವುದು ಎಂದು ಹೇಳಿದರು.

ಈ ಸಮಾರಂಭದ ವೇದಿಕೆಯ ಮೇಲೆ ಬಿಜೆಪಿ ಯುವ ಮುಖಂಡರಾದ ತಿರುಪತಿ ಹತ್ತಿಕಟಗಿ,ತಿರುಪತಿ ಸೇರಿ, ಮಾನಯ್ಯ ಪಡದಳ್ಳಿ,ಚನ್ನಪ್ಪ ಕಾಶಿರಾಜ,ತಾಯಪ್ಪ,ಸಾಯಿ, ಶಂಕರ,ರಿಯಾಜ್,ಶಂಕರ,ತಿಮ್ಮಪ್ಪ,ಲಕ್ಷ್ಮಣ,ತಿರುಪತಿ,ಮಂಜುನಾಥ್,ಯಲಗೂರೇಶ,ದೇವು ಗಂಗನಾಳ,ಎಚ್,ಬಿ,ನಾಯಕ,

ಮಹಾಂತೇಶ,ಯಲ್ಲಪ್ಪ, ಹಾಗೂ ಕ್ರಿಕೆಟ್ ಕಮಿಟಿ ಅಧ್ಯಕ್ಷ ಹಣಮಂತರಾಯ ಕಾಶಿರಾಜ ವಿಜಯ್ ಸೀತಾರಾಮ,ಗುರು ಸಾಹುಕಾರ,ರಮೇಶ ಸಜ್ಜನ, ಮೌನೇಶ,ಗೌಡಪ್ಪ,ಅಜಿತ್, ಮುತ್ತು,ಪರಶುರಾಮ್, ಶಿವಕುಮಾರ,ಹನುಮಂತ ನಾಯಕ,ಸೇರಿದಂತೆ ಇತರರು ಉಪಸಿತರಿದ್ದರು.