ಪಿಯು ಶಿಕ್ಷಣ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವಾಗಿದೆ :..ಪರಮೇಶ್ವರ.

ಪಿಯು ಶಿಕ್ಷಣ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವಾಗಿದೆ :..ಪರಮೇಶ್ವರ.

| ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ |

ಪಿಯು ಶಿಕ್ಷಣ ಪ್ರತಿ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವಾಗಿದೆ :..ಪರಮೇಶ್ವರ

ಶಹಾಬಾದ : - ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಸ್ವಾಗತಿಸುವುದು ಹಾಗೂ ಬೀಳ್ಕೊಡುವ ಪದ್ಧತಿಯಿದೆ, ಅದರಂತೆ ಪ್ರಥಮ ವರ್ಷಕ್ಕೆ ಬಂದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸ್ವಾಗತಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಾಚಾರ್ಯ ಪರಮೇಶ್ವರ ಪೆಂಚನಕರ ರವರು ಹೇಳಿದರು. 

ಅವರು ಸರಕಾರಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪದವಿಪೂರ್ವ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಪ್ರಮುಖ ತಿರುವು, ಈ ಹಂತದಲ್ಲಿ ಸಮಯದ ಸದ್ಬಳಕೆ ಮತ್ತು ಕಠಿಣ ಶ್ರಮ ಅತ್ಯಗತ್ಯ, ವಿಧ್ಯಾರ್ಥಿಗಳು ತಮ್ಮ ಪ್ರತಿಭೆ, ಸಾಮಥ್ರ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ, ಅವುಗಳನ್ನು ಬೆಳೆಸಿ ಪೋಷಿಸಲು ಕಾಲೇಜಿನಲ್ಲಿ ಹಲವಾರು ಅವಕಾಶಗಳಿವೆ ಎಂದರು.

ಪತ್ರಕರ್ತ ಲೋಹಿತ ಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ತಮಗೆ ಶಿಕ್ಷಣ ನೀಡಿದ ಕಾಲೇಜಿಗೂ ಹಾಗೂ ಹೆತ್ತ ತಂದೆ-ತಾಯಿಗಳಿಗೂ ಕೀರ್ತಿ ತರಬೇಕು ಎಂದರು.

ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಬನ್ನಿಲಾಲ ಚಹ್ವಾಣ, ಕರಿಬಸಪ್ಪ, ಅಂಬಿಕಾ ಹಂಗರಗಿ ಉಪಸ್ಥಿತರಿದರು. 

ಸ್ವಾಗತ ಸಮಾರಂಭದ ಅಧ್ಯಕ್ಷತೆ ಯನ್ನು ಪ್ರಾಚಾರ್ಯರಾದ ಪರಮೇಶ್ವರ ಪೆಂಚನಕರ ರವರು ವಹಿಸಿ ಮಾತನಾಡಿದರು.

2025-26ರ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟ್ರಿಕ್ಷನ್ ನಲ್ಲಿ ಪಾಸಾದ 21 ವಿಧ್ಯಾರ್ಥಿಗಳನ್ನು ಕಾಲೇಜ ವತಿಯಿಂದ ಸ್ಮರಣ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ನಂದಿನಿ, ಸೃಷ್ಠಿ ರಾಘವೇಂದ್ರ, ಅಂಕಿತ ವಿರೂಪಾಕ್ಷಿ, ನಾಗವೇಣಿ, ಚಂದ್ರಕಲಾ, ರಾಜೇಶ, ರಾಧಿಕಾ ಮತ್ತು ಮಲ್ಲಿಕಾರ್ಜುನ ಅವರು ಕಾಲೇಜು ಮತ್ತು ಉಪನ್ಯಾಸಕರ ಹಾಗೂ ಸಿನೀಯರ್ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪನ್ಯಾಸಕರಾದ ಮಹಾದೇವ ಪಾಟೀಲ, ರವಿ ಚಹ್ವಾಣ, ಬಸವರಾಜ ಪರಸಗೊಂಡ, ಜಗದೇವಪ್ಪ, ಸುರೇಶ ಪವಾರ, ವೆಂಕಟೇಶ, ಮರಲಿಂಗ ಯಾದಗಿರ, ಸ್ಟೇಲಿನಾ ಸೇರಿದಂತೆ ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕು.ಸಾವಿತ್ರಿ ಪ್ರಾರ್ಥನಾ ಗೀತೆ ಹಾಡಿದರು, ಕು.ನಾಗಮ್ಮ ಸ್ವಾಗತಿಸಿದರು, ಕು. ದೇವಿಕಾ ಮತ್ತು ಸಂಗೀತ ನಿರೂಪಿದರು, ಕು. ಭವಾನಿ ವಂದಿಸಿದರು.