ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ,ಕಿಚ್ಚು ಹಚ್ಚಿದ್ದೆ ಕಿತ್ತೂರು ರಾಣಿ ಚೆನ್ನಮ್ಮ.
ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ,ಕಿಚ್ಚು ಹಚ್ಚಿದ್ದೆ ಕಿತ್ತೂರು ರಾಣಿ ಚೆನ್ನಮ್ಮ.
ಶಹಾಪುರ : ಮೊಟ್ಟ ಮೊದಲು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಕಿಚ್ಚು ಹಚ್ಚಿದ್ದೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ಹಿರಿಯ ಸಂಶೋಧಕ,ಸಾಹಿತಿ ಮತ್ತು ಖಜಾನೆ ಅಧಿಕಾರಿಗಳಾದ ಡಾ.ಮೋನಪ್ಪ ಶಿರವಾಳ ಹೇಳಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ಮತ್ತು ತತ್ವಗಳು ನಮಗೆಲ್ಲರಿಗೂ ದಾರಿ ದೀಪಗಳಾಗಿವೆ ಎಂದು ಬಣ್ಣಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಬಾಲ್ಯದಲ್ಲೇ ಕುದುರೆ ಸವಾರಿ ಬಿಲ್ಲುಗಾರಿಕೆ,ಕತ್ತಿ ವರಸೆಗಳಲ್ಲಿ ನಿಪುಣರಾಗಿದ್ದು,ದೇಶಪ್ರೇಮ ಮತ್ತು ಧೈರ್ಯ ಸಾಹಸ ನಿಜಕ್ಕೂ ಮೆಚ್ಚುವಂತದ್ದು,ಆದ್ದರಿಂದ ಮಹಿಳಾ ಸಮಾನತೆ,ಸ್ತ್ರೀ ಶಕ್ತಿ ಮತ್ತು ಧೀರ ಹಾಗೂ ದಿಟ್ಟ ನಾಯಕತ್ವಕ್ಕೆ ದೊಡ್ಡ ಪ್ರೇರಣದಾಯಕವಾಗಿದೆ ಎಂದು ಸಾಹಿತಿ ಮತ್ತು ಪತ್ರಕರ್ತ ಬಸವರಾಜ ಸಿನ್ನೂರ ಹೇಳಿದರು.
ಬ್ರಿಟಿಷರು ಭಾರತೀಯ ಸಂಸ್ಥಾನವನ್ನು ವಶಪಡಿಸಿಕೊಳ್ಳುವ ಹಾಗೂ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕ್ರೂರ ನೀತಿಯನ್ನು ಧಿಕ್ಕರಿಸಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ಬಂಡಾಯ ಸಾರಿದ ಪ್ರಪ್ರಥಮ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಳ ಅಪ್ರತಿಮ ದೇಶಭಕ್ತಿ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿಯಾಯಿತು ಎಂದು ನುಡಿದರು.
ಈ ಕಾರ್ಯಕ್ರಮವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರಾಯಿತು,ಈ ಸಮಾರಂಭದ ವೇದಿಕೆಯ ಮೇಲೆ ಸಮಾಜದ ಹಿರಿಯ ಮುಖಂಡರಾದ ದೇವೇಂದ್ರಪ್ಪ ತೋಟಗೇರ,ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗುರು ಅಂಗಡಿ, ಶಿರಸ್ತೆದಾರ ನಾಗೇಂದ್ರಪ್ಪ, ರಾಘವೇಂದ್ರ ಪತ್ತಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ,ಭೀಮರಾಯ ಗೂಡೆಕಾರ,ಸುಭಾಷ್ ಧೂಳಾ, ಶರಣು ಹೊಸೂರ,ಅನಿಲ್ ಬಿರಾದಾರ,ಶಾಂತಗೌಡ ದಿಗ್ಗಿ, ಭೀಮಾಶಂಕರ್ ಹೊಸಕೆರ, ಮಹಾಲಿಂಗ ಬೇವಿನಹಳ್ಳಿ, ಜಗದೀಶ್,ಅಶೋಕ್ ಪ್ಯಾಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

