ಉಡುಪಿ ಫಲಿಮಾರು ಮಠದ ಯತಿದ್ವಯರು ಅ. 9ರಂದು ಕಲಬುರಗಿ ನಗರಕ್ಕೆ
ಉಡುಪಿ ಫಲಿಮಾರು ಮಠದ ಯತಿದ್ವಯರು ಅ. 9ರಂದು ಕಲಬುರಗಿ ನಗರಕ್ಕೆ
ಕಲಬುರಗಿ : ಉಡುಪಿ ಫಲಿಮಾರು ಮಠದ ಯತಿದ್ವಯರಾದ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹಾಗೂ ಕಿರಿಯ ಸ್ವಾಮೀಜಿಗಳಾದ ಪೂಜ್ಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರು ಅಕ್ಟೋಬರ್ 9ರಂದು ಕಲಬುರಗಿ ನಗರಕ್ಕೆ ಆಗಮಿಸಲಿದ್ದಾರೆ.
ಉಡುಪಿ ಉಭಯ ಪೀಠಾಧಿಪತಿಗಳು ಶರನ್ನವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ಮುಂಬೈ ಮಹಾನಗರಕ್ಕೆ ತೆರಳುತ್ತಿದ್ದು ಅ 9 ರಂದು ಶುಕ್ರವಾರ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದಾರೆ.ಹೊಸ ಜೇವರ್ಗಿ ರಸ್ತೆಯ ಶ್ರೀರಾಮಮಂದಿರದಲ್ಲಿ ಬೆಳಿಗ್ಗೆ ಸಾಮೂಹಿಕ ಸಂಸ್ಥಾನ ಪೂಜೆ ಪ್ರಾತಃಕಾಲ 8 ಗಂಟೆಗೆ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರುವರ್ಯರ ಆಶೀರ್ವಾದ ಹಾಗೂ ಮಂತ್ರಾಕ್ಷತೆ ಪಡೆಯಬೇಕೆಂದು ಶ್ರೀರಾಮ ಮಂದಿರದ ವಕ್ತಾರರಾದ ಕಿಶೋರ ದೇಶಪಾಂಡೆ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

