ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ ಹಾಗೂ ಹೊಸ ನಾಮಫಲಕ ಉದ್ಘಾಟನೆ
ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ ಹಾಗೂ ಹೊಸ ನಾಮಫಲಕ ಉದ್ಘಾಟನೆ
ಕಲಬುರಗಿ: ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ದಸರಾ ಪೂಜಾ ಉತ್ಸವ ಹಾಗೂ ಸಂಘದ ನೂತನ(ಹೊಸ)ನಾಮಫಲಕ ಉದ್ಘಾಟನಾ ಸಮಾರಂಭವನ್ನು ಅ. 20ರಂದು (ಮಂಗಳವಾರ) ಮಧ್ಯಾಹ್ನ 1.30ರಿಂದ 3 ಗಂಟೆಯವರೆಗೆ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಕ್ತಿ ದೇವತೆ ಮಹಾಮಾತೆ ಶ್ರೀ ಚೌಡೇಶ್ವರಿ ದೇವಿಯ ಭಾವಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ ಕುಸಾಮಾ ಪೂಜೆ ನೆರವೇರಿಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಕಿರಣ ದೇಶಮುಖ ಅವರು ಸಂಘದ ನೂತನ(ಹೊಸ)ನಾಮಫಲಕವನ್ನು ಉದ್ಘಾಟಿಸಲಿದ್ದಾರೆ.
ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಶ್ರೀನಿವಾಸ ಬಲಪುರ ಅವರು ಸ್ವಾಗತಿಸಲಿದ್ದಾರೆ.
ದಸರಾ ಪೂಜಾ ಉತ್ಸವ ಹಾಗೂ ಹೊಸ ನಾಮಫಲಕ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ಅವರು ಮನವಿ ಮಾಡಿದ್ದಾರೆ.

