ಸ್ತ್ರೀಶಕ್ತಿ ಸಮಾಜದ ಪ್ರಗತಿಗೆ ಪೂರಕ: ಡಾ. ಕೆ. ಗಿರಿಮಲ್ಲ

ಸ್ತ್ರೀಶಕ್ತಿ ಸಮಾಜದ ಪ್ರಗತಿಗೆ ಪೂರಕ: ಡಾ. ಕೆ. ಗಿರಿಮಲ್ಲ

ಸ್ತ್ರೀಶಕ್ತಿ ಸಮಾಜದ ಪ್ರಗತಿಗೆ ಪೂರಕ: ಡಾ. ಕೆ. ಗಿರಿಮಲ್ಲ

ಕಲಬುರಗಿ : ಜೀವಕ್ಕೆ ಜೀವ ನೀಡುವ ಮಹಿಳೆ ಸಮಾಜದ ಕಣ್ಣಾಗಿದ್ದಾಳೆ ಎಂದು‌ ಸಾಹಿತಿ ಡಾ ಕೆ ಗಿರಿಮಲ್ಲ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ಅ. 18ರಂದು ಶಿವಬಸವ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ‘ದಸರಾ ಸಿರಿ ಸಂಭ್ರಮ ಹಾಗೂ ಆದಿಶಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ,

 ಸ್ತ್ರೀಶಕ್ತಿ ಸಮಾಜದ ಪ್ರಗತಿಗೆ ಪೂರಕವಾಗಿದೆ. ಜೀವಕ್ಕೆ ಜೀವ ನೀಡುವ ಮಹಿಳೆ ಸಮಾಜದ ಕಣ್ಣಾಗಿದ್ದಾಳೆ. ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆಯ ಪ್ರತೀಕವಾದ ದಸರಾ ಉತ್ಸವದಲ್ಲಿ ಮಹಿಳೆಯರು ತೋರುವ ಉತ್ಸಾಹ ಕಣ್ಮನ ಸೆಳೆಯುತ್ತದೆ. ಮಕ್ಕಳಿಗೆ ಜನ್ಮ ನೀಡುವುದರ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ತಂದೆ-ತಾಯಂದಿರ ಮೇಲಿದೆ ಎಂದು ಹೇಳಿದರು.

ಗುರುಜೀ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಹಬ್ಬ ದಸರಾ ಕರ್ನಾಟಕದ ಗತವೈಭವವನ್ನು ಸಾರುವ ಹಬ್ಬವಾಗಿದ್ದು, ಎಲ್ಲರೂ ಹೆಮ್ಮೆಯಿಂದ ಆಚರಿಸುವ ಸಂಭ್ರಮದ ಹಬ್ಬವಾಗಿದೆ. ಬನ್ನಿ ಬಂಗಾರ ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಸಂತೋಷ ಹಂಚಿಕೊಳ್ಳುವ ಈ ಹಬ್ಬದಿಂದ ಮಕ್ಕಳು ಉತ್ತಮ ಸಂಸ್ಕಾರಗಳನ್ನು ಕಲಿತು, ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮಾತೋಶ್ರೀ ಸುಶಿಲಾಬಾಯಿ, ರೇಷ್ಮಾ ಹಾಗರಗುಂಡಗಿ, ಜ್ಯೋತಿ ಅಕ್ಷಯ್, ವಿಶಾಲಾಕ್ಷಿ ಮಾಯಣ್ಣನವರ, ರೇಣುಕಾ ಶ್ರೀಕಾಂತ, ಗುರುಬಾಯಿ ಸಂತೋಷ ಹಾಗೂ ರುಕ್ಮಿಣಿ ಪೂಜಾರಿ ಅವರಿಗೆ ‘ಆದಿಶಕ್ತಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

 ಕುಪೇಂದ್ರ ಬರಗಾಲಿ, ವಿಜಯಕುಮಾರ ಕೆಂಗಲ್, ಪುಷ್ಪಾ ಡೆಂಗಿ, ಶರಣಕುಮಾರ ಹಾಗರಗುಂಡಗಿ, ವಂದನಾ ದಂಡೋತಿ, ಶರಣು ಗಾಣಗಾಪುರ ಹಾಗೂ ಅಶೋಕ ಬಬಲಾದ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ತೋಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಿರಾದಾರ ಹಾಗೂ ಜಯಶ್ರೀ ತೋಟ್ನಳ್ಳಿ ಸ್ವಾಗತಿಸಿದರು. ಜಯಶ್ರೀ ತೋಟ್ನಳ್ಳಿ ವಂದಿಸಿದರು.