ಬಿ ಕೆ ಹರಿಪ್ರಸಾದ್ ಜೊತೆ ಈಡಿಗ ಮುಖಂಡರ ಚರ್ಚೆ ಈಡಿಗ ನಿಗಮಕ್ಕೆ 500 ಕೋಟಿ ಬಜೆಟ್ ಘೋಷಣೆಗೆ ಮನವಿ

ಬಿ ಕೆ ಹರಿಪ್ರಸಾದ್ ಜೊತೆ ಈಡಿಗ ಮುಖಂಡರ ಚರ್ಚೆ   ಈಡಿಗ ನಿಗಮಕ್ಕೆ 500 ಕೋಟಿ ಬಜೆಟ್ ಘೋಷಣೆಗೆ ಮನವಿ

ಬಿ ಕೆ ಹರಿಪ್ರಸಾದ್ ಜೊತೆ ಈಡಿಗ ಮುಖಂಡರ ಚರ್ಚೆ

 ಈಡಿಗ ನಿಗಮಕ್ಕೆ 500 ಕೋಟಿ ಬಜೆಟ್ ಘೋಷಣೆಗೆ ಮನವಿ

 ಕಲಬುರಗಿ : 

ಈಡಿಗ - ಬಿಲ್ಲವ ಸೇರಿದಂತೆ 26 ಪಂಗಡಗಳಿಗೆ ರಾಜ್ಯ ಸರ್ಕಾರವು 500 ಕೋಟಿ ರೂಪಾಯಿಗಳನ್ನು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಒತ್ತಾಯಿಸಬೇಕು ಎಂದು ಈಡಿಗ ಮುಖಂಡರ ನಿಯೋಗವು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಅವರನ್ನು ಒತ್ತಾಯಿಸಿತು.

    ಕಲಬುರಗಿ ಪ್ರವಾಸಕ್ಕೆ ಆಗಮಿಸಿದ ಬಿ.ಕೆ ಹರಿಪ್ರಸಾದ್ ಅವರನ್ನು ಖಾಸಗಿ ಹೋಟೆಲ್ ನಲ್ಲಿ ಭೇಟಿಯಾದ ನಿಯೋಗವು ಚರ್ಚಿಸಿ ಈ ಸರಕಾರ ಇದುವರೆಗೆ ನಾಲ್ಕು ಬಜೆಟ್ ಗಳನ್ನು ಮಂಡಿಸಿದರೂ ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಲಿಲ್ಲ. ಆದರೆ ನಿಗಮವು ಕಾರ್ಯ ಚಟುವಟಿಕೆ ಆರಂಭಿಸಲು ಈ ಸರಕಾರ ಅನುವು ಮಾಡಿಕೊಟ್ಟಿದೆ. ಈಗ ನಮ್ಮ ಸಮುದಾಯದವರೇರಾಜ್ಯದಲ್ಲಿ ಪಕ್ಷದ ಉನ್ನತ ಸ್ಥಾನದಲ್ಲಿರುವುದರಿಂದ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿ ನಿಗಮಕ್ಕೆ 500 ಕೋಟಿ ರೂ.ಬಿಡುಗಡೆ ಮಾಡಬೇಕೆಂದು ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ವಿವರಿಸಿದರು. ನಿಗಮವು ಸದ್ಯ ದೇವರಾಜ ಅರಸು ನಿಗಮದಿಂದ ನೀಡಲಾದ 10 ಕೋಟಿ ರೂಪಾಯಿಗಳಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದು ಮುಂದಿನ ಬಜೆಟ್ ನಲ್ಲಿ 500 ಕೋಟಿ ಅನುದಾನ ದೊರೆತರೆ ರಾಜ್ಯದ ಈಡಿಗ - ಬಿಲ್ಲವ ಸೇರಿದಂತೆ 26 ಪಂಗಡಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲು ಅನುಕೂಲವಾಗುತ್ತದೆ. ತಮ್ಮ ನಾಯಕತ್ವದಲ್ಲಿ ಬೇಡಿಕೆ ಈಡೇರಿಸುವಂತಾಗಲಿ ಎಂದು ನಿಯೋಗವು ಹರಿಪ್ರಸಾದ್ ಅವರನ್ನು ಒತ್ತಾಯಿಸಿತು.

ಪ್ರಾಮಾಣಿಕ ಪ್ರಯತ್ನ - ಅನುದಾನ ಖಚಿತ

   ನಿಯೋಗದ ಜೊತೆ ಚರ್ಚಿಸಿದ ಬಿ ಕೆ ಹರಿಪ್ರಸಾದ್ ಮಾತನಾಡಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತರಲಾಗುವುದು ಹಾಗೂ ಮುಂದಿನ ಬಜೆಟ್ ನಲ್ಲಿ ಅನುದಾನ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ ಈ ಬಾರಿ ಹಣ ಘೋಷಣೆಯಾಗುವುದು ಖಚಿತ ಎಂದು ಭರವಸೆ ನೀಡಿದರು.

  ನಿಯೋಗದಲ್ಲಿ ಈಡಿಗ ಸಮಾಜದ ಬೀದರ್ ಜಿಲ್ಲಾ ಮುಖಂಡರಾದ ಡಾ. ರಾಜಶೇಖರ ಸೇಡಂಕರ್, ಬೀದರ್ ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷರಾದ ಸುಭಾಷ್ ಚೌದರಿ ಹಾಗೂ ರಿತ್ವಿಕ್ ಜೊತೆಗಿದ್ದರು.