ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಶೇ. 90.44 ಪ್ರತಿಶತ ಮತದಾನ ಒಟ್ಟು 450 ಮತಗಳ ಪೈಕಿ 407 ಜನ ಮತ ಹಕ್ಕು ಚಲಾವಣೆ
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಶೇ. 90.44 ಪ್ರತಿಶತ ಮತದಾನ
ಒಟ್ಟು 450 ಮತಗಳ ಪೈಕಿ 407 ಜನ ಮತ ಹಕ್ಕು ಚಲಾವಣೆ
ಚಿಂಚೋಳಿ :
ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸುಲೇಪೇಟ, ಐನಾಪೂರ್ ಹಾಗೂ ಚಿಂಚೋಳಿ ಪಟ್ಟಣದ ಮತ ಕೇಂದ್ರಗಳಿಗೆ ತೆರಳಿ ಶಿಕ್ಷಕರು ಉತ್ಸಾಹದಿಂದ ಮತ ಚಲಾಯಿಸಿದರು.
ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರ ಕಾರ್ಯಕರ್ತರು ಮತ ಗಟ್ಟೆ ವ್ಯಾಪ್ತಿಯಿಂದ ಹೊರಗಡೆ ಶಮಿನ ಹಾಕಿಕೊಂಡು ಮತದಾರರಿಗೆ ತಮ್ಮ ಅಭ್ಯರ್ಥಿಗೆ ಪ್ರಾಶಸ್ತ್ಯ ಮತ ನೀಡುವಂತೆ ಎರಡು ಪಕ್ಷದ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದು ಕಂಡಿತ್ತು.
ಸ್ಥಳೀಯ ಶಾಸಕ ಡಾ. ಅವಿನಾಶ ಜಾಧವ ಅವರು ಮತಗಟ್ಟೆಗಳಿಗೆ ತೆರೆಳಿ ಅಲ್ಲಿನ ವ್ಯವಸ್ಥೆ ವೀಕ್ಷಣೆ ಮಾಡಿ, ಮಾಹಿತಿ ಪಡೆದರು. ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಕೂಡ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆ ಮತದಾನದ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು.
ಒಟ್ಟು ಮತದಾನ :
96 ಚಿಂಚೋಳಿ : ಒಟ್ಟು 226 ಪೈಕಿ 131 ಗಂಡು 74 ಹೆಣ್ಣು ಸೇರಿ 205 ಜನ ಮತದಾನ ಮಾಡಿದರು.
97-ಐನಾಪೂರ : ಒಟ್ಟು 104 ಪೈಕಿ 73 ಗಂಡು 23 ಹೆಣ್ಣು ಸೇರಿ ಒಟ್ಟು 96 ಜನ ಮತದಾನ ಮಾಡಿದರು.
98-ಸುಲೇಪೇಟ: ಒಟ್ಟು 120 ಪೈಕಿ 77 ಜನ ಗಂಡು 29 ಹೆಣ್ಣು ಸೇರಿ ಒಟ್ಟು 106 ಜನ ಮತದಾನದ ಹಕ್ಕು ಚಲಾಯಿಸಿದರು. ಒಟ್ಟಾರೆ ಒಟ್ಟು 450 ಮತದಾನದ ಪೈಕಿ 407 ಜನ ಮತದ ಹಕ್ಕು ಚಲಾವಣೆ ಮಾಡುವ ಮೂಲಕ ಶೇ. 90.44 ರಷ್ಟು ಮತದಾನ ನಡೆದಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು.

