ಎಸ್ಎಂ ಪಂಡಿತ್ ಕಲಾಪರಂಪರೆ ಉಳಿಸಲು ಬಸವರಾಜ ಪಾಟೀಲ್ ಸೇಡಂ ಕರೆ
ಎಸ್ಎಂ ಪಂಡಿತ್ ಕಲಾಪರಂಪರೆ ಉಳಿಸಲು ಬಸವರಾಜ ಪಾಟೀಲ್ ಸೇಡಂ ಕರೆ
- ಶಿಲ್ಪಿ ಮಲ್ಲಿಕಾರ್ಜುನ ಚಿಕನಹಳ್ಳಿ ಏಕವ್ಯಕ್ತಿ ಶಿಲ್ಪಾ ಕಲಾ ಪ್ರದರ್ಶನಕ್ಕೆ ಚಾಲನೆ
ಕಲಬುರಗಿ : ಭಾರತದಲ್ಲಿ ಅತ್ಯಂತ ಶ್ರೇಷ್ಠ ಕಲಾವಿದರಾದ ಎಸ್ ಎಮ್ ಪಂಡಿತ್ ಕಲಬುರಗಿಗೆ ಕೀರ್ತಿ ತಂದು ಕೊಟ್ಟಿದ್ದು ಅವರ ಕಲಾ ಪರಂಪರೆಯನ್ನು ಉಳಿಸಲು ಎಲ್ಲ ಕಲಾವಿದರು ಶ್ರಮಿಸಬೇಕು ಎಂದು ಮಾಜಿ ಸಂಸದರು ಹಾಗೂ ವಿಕಾಸ ಅಕಾಡೆಮಿಯ ಸಂರಕ್ಷಕರಾದ ಬಸವರಾಜ ಪಾಟೀಲ್ ಸೇಡಂ ಕರೆ ನೀಡಿದರು.
ಕಲಬುರಗಿಯ ಡಾ. ಮಾನಯ್ಯ ಎನ್ ಬಡಿಗೇರ ಶಿಲ್ಪ ಆರ್ಟ್ ಗ್ಯಾಲರಿಯಲ್ಲಿ ನವೆಂಬರ್ 21ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯದೊಂದಿಗೆ ನಡೆದ ಶಿಲ್ಪ ಕಲಾವಿದ ಮಲ್ಲಿಕಾರ್ಜುನ ಬ.ಚಿಕನಹಳ್ಳಿ ಇವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟನೆ ಮಾಡಿ ಮಾತನಾಡಿ ಎಸ್. ಎಂ. ಪಂಡಿತ್ ಅವರಿಂದಾಗಿ ಕಲಬುರಗಿಯು ಕಲಾ ಪ್ರಪಂಚದಲ್ಲಿ ಎತ್ತರದ ಸ್ಥಾನದಲ್ಲಿ ನಿಂತಿತು ಅಂತ ಕಲಾ ಪರಂಪರೆಯ ಹಾದಿಯಲ್ಲಿ ಅನೇಕ ಹಿರಿಯ ಕಲಾವಿದರು ಮುನ್ನಡೆಯುತ್ತಿದ್ದಾರೆ. ಜೆ.ಎಸ್ ಖಂಡೇ ರಾವ್, ಮಾನಯ್ಯ ಬಡಿಗೇರ್ ಮುಂತಾದವರ ಮಾರ್ಗದರ್ಶನದಲ್ಲಿ ಇನ್ನಷ್ಟು ಬೆಳೆಯಬೇಕಾಗಿದೆ ಮಲ್ಲಿಕಾರ್ಜುನ ಚಿಕನಹಳ್ಳಿ ಅವರ ದಿಟ್ಟ ಹೆಜ್ಜೆ ಪರಂಪರಾಗತ ಕಲೆಗೆ ದೊಡ್ಡ ಪ್ರೇರಣೆ. ಕಲಾವಿದರು ಶರೀರ, ಮನಸ್ಸು,ಬುದ್ಧಿ, ಮತ್ತು ಆತ್ಮವನ್ನು ಧಾರೆಯೆರೆದು ಮಾಡುವ ಕಲೆ ಅತ್ಯಂತ ಶ್ರೇಷ್ಠವಾದದ್ದು ಭಾವನೆಗಳ ಏರಿಳಿತ ಕಂಡಾಗ ಇಂತಹ ಕಲಾ ಪ್ರದರ್ಶನ ನೆಮ್ಮದಿ ನೀಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ
ಶ್ರೀಮಂತ (ರಾಜು) ಯಶವಂತಪ್ಪಾ ನವಲದಿ
ಮಾತನಾಡಿದರು, ಕಾರ್ಯಕ್ರಮದಲ್ಲಿ
ಕರ್ನಾಟಕ ಶಿಲ್ಪಕಲಾ ಆಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಕಲ್ಲಣ್ಣ ಸಾಯಬಣ್ಣ ಕಂಬಾರ, ಸಾತಖೇಡ,ನಾಡೋಜ ಡಾ. ಜೆ ಎಸ್ ಖಂಡೆರಾವ
ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಡಾ.ಸದಾನಂದ ಪೆರ್ಲ, ಮಂಜುನಾಥ ಅಣಕಲ್,
ಹಿರಿಯ ಶಿಲ್ಪಿ ಬಸಣ್ಣ ಬಡಿಗೇರ,
ಡಾ. ಶಿವಾನಂದ ಬಂಟನೂರ,
ಹಿರಿಯ ಕಲಾವಿದ ವಿ ಬಿ ಬಿರಾದಾರ,
ಡಾ. ಪರಶುರಾಮ ಪಿ,
ಡಾ. ಶ್ರೀನಿವಾಸ ಸಿರನೂರಕರ,
ಸಂಗಮನಾಥ ರೇವತಗಾಂವ್,
ಕಲಾವಿದರಾದ ಮಹೇಶ ಕಡೇಚೂರ್,
ಖ್ಯಾತ ಶಿಲ್ಪಿ ಸುರೇಂದ್ರ ವಿಶ್ವಕರ್ಮ ಬೆಂಗಳೂರು,
ವಾಸ್ತಶಿಲ್ಪಿಗಳಾದ ಶ್ರೀಮತಿ ಮಾಧುರಿ ರಾಕೇಶ ಸೀತನೂರ,
ವಾಸ್ತುಶಿಲ್ಪಿ ಕು. ಸೃಷ್ಠಿ ಬಸವರಾಜ ಖಂಡೆರಾವ,
ಶ್ರೀ ಬಸನಗೌಡ ದ್ಯಾಮಾ ,
ಶ್ರೀ ನಂದನಗೌಡ ಪಿ ಮಾಲಿಪಾಟೀಲ ಚಿಕನಳ್ಳಿ ಭಾಗವಹಿಸಿದ್ದರು ,
ಶಿಲ್ಪಿ ಮಲ್ಲಿಕಾರ್ಜುನ ಬ. ಚಿಕನಳ್ಳಿ ಸ್ವಾಗತಿಸಿದರು ,
ವರದರಾಜ ಎಂ.ಬಿ ಅವರು ವಂದಿಸಿದರು,
ಸೂರ್ಯಕಾಂತ ಬಡಿಗೇರ ನಿರೂಪಣೆ ಮಾಡಿದರು ,
ಶಿಲ್ಪಕಲಾ ಕಲಾ ಪ್ರದರ್ಶನ.೨೧ ರಿಂದ)೨೩ ರವರೆಗೆ ಬೆಳಿಗ್ಗೆ 11:00 ರಿಂದ ಸಾಯಂಕಾಲ 6:00ರವರೆಗೆ ಕಲಾ ಪ್ರದರ್ಶನ ವೀಕ್ಷಿಸಲು ಕಲಾಸಕ್ತರು
ಕಲಾವಿದರಿಗೆ,ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.

