ಹಾರಾ ಕೂಡ ಶ್ರೀಗಳ 64ನೇ ಜನ್ಮದಿನೋತ್ಸವ : ಅನ್ನದಾಸೋಹ ಪ್ರಸಾದ ವಿತರಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕ ಅಧ್ಯಕ್ಷ ಶರಣು ಪಾಟೀಲ್
- ಹಾರಾ ಕೂಡ ಶ್ರೀಗಳ 64ನೇ ಜನ್ಮದಿನೋತ್ಸವ : ಅನ್ನದಾಸೋಹ ಪ್ರಸಾದ ವಿತರಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕ ಅಧ್ಯಕ್ಷ ಶರಣು ಪಾಟೀಲ್
ಚಿಂಚೋಳಿ :
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ವತಿಯಿಂದ ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯರ 64ನೆ ಜನ್ಮದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಅನ್ನದಾಸೋಹ ಪ್ರಸಾದ ವಿತರಣೆಯನ್ನು ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಹಮ್ಮಿಕೊಳ್ಳಲಾಯಿತು.
ನರನಾಳದ ಸಂಸ್ಥಾನ ಹಿರೇಮಠದ ಶಿವಮಕುಮಾರ ಶಿವಚಾರ್ಯ ಮಹಾಸ್ವಾಮಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಅವರು ಶ್ರೀಗಳ 64ನೆ ಜನ್ಮದಿನೋತ್ಸವದ ಬೃಹತ್ ಕೇಕ್ ಕತ್ತರಿಸುವ ಮೂಲಕ ಅನ್ನದಾಸೋಹ ಪ್ರಸಾದ ವಿತರಣೆಗೆ ಚಾಲನೆ ನೀಡಿದರು.
ಮಹಾಸಭಾ ಘಟಕದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರ ನೇತೃತ್ವದಲ್ಲಿ ನಡೆದ ಅನ್ನದಾಸೋಹ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ - ಕಾಂಗ್ರೆಸ್ ಮುಖಂಡರು ಭಾಗವಹಿಸಿ ಶ್ರೀಗಳ ಜನ್ಮದಿನಕ್ಕೆ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಬಾಲಭವನ ಉಪಾಧ್ಯಕ್ಷ ಅನೀಲ ಜಮಾದಾರ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ಶ್ರೀಮಂತ ಕಟ್ಟಿಮನಿ, ಸುಭಾಷ ಸಿಳ್ಳಿನ್, ಕೆ. ಎಂ. ಬಾರಿ, ಶರಣು ಮೆಡಿಕಲ್ ನಿಡಗುಂದಾ, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಆವಂಟಿ, ಅಬ್ದುಲ್ ಬಾಶೀದ್, ಜಗನ್ನಾಥ ಕಟ್ಟಿ, ಆನಂದಕುಮಾರ್ ಟೈಗರ್, ನಾಗೇಶ ಗುಣಾಜಿ, ಬಾಬುಗೌಡ ಯಂಪಳ್ಳಿ, ವಿಜಯಕುಮಾರ ಘಾಟಗೆ ಅವರು ಸೇರಿದಂತೆ ಶ್ರೀಗಳ ಭಕ್ತಾಧಿಗಳು ಇದ್ದರು.

