ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲುಗಳು, ಬನ್ನು ಹಾಗೂ ಸಿಹಿಯನ್ನು ವಿತರಿಸಲಾಯಿತು.

ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲುಗಳು, ಬನ್ನು ಹಾಗೂ ಸಿಹಿಯನ್ನು ವಿತರಿಸಲಾಯಿತು.

ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆಯೊಂದಿಗೆ ಹಂಸಜ್ಯೋತಿ ಟ್ರಸ್ಟ್‌ನಿಂದ 71ನೇ ಕನ್ನಡ ನಾಡ ಹಬ್ಬದ ಅರ್ಥಪೂರ್ಣ ಆಚರಣೆ

 ಬೆಂಗಳೂರಿನ ಹಂಸಜ್ಯೋತಿ ಟ್ರಸ್ಟ್ (ರಿ.) ತನ್ನ ಸುವರ್ಣ ಸಂಭ್ರಮಾಚರಣೆಯ ಸಂದರ್ಭದಲ್ಲಿ 71ನೇ ಕನ್ನಡ ನಾಡ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಹಂಸ ಸಾಂಸ್ಕೃತಿಕ-ಸಾಮಾಜಿಕ ಸಿಂಚನ’ ಕಾರ್ಯಕ್ರಮವು ನಗರದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ವೆಂಕಟೇಶ್ವರ ಧರ್ಮಶಾಲದ (ಕಪೂರ್ ವಾರ್ಡ್ ಮುಂಭಾಗ) ಆವರಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದ ಭಾಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲುಗಳು, ಬನ್ನು ಹಾಗೂ ಸಿಹಿಯನ್ನು ವಿತರಿಸಲಾಯಿತು.

ಕರ್ನಾಟಕ ರಾಜ್ಯದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿ.ಎಸ್. ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ನಾಡ ಹಬ್ಬವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ರೋಗಿಗಳಿಗೆ ಸೇವೆ ಸಲ್ಲಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಹಂಸಜ್ಯೋತಿ ಟ್ರಸ್ಟ್‌ನ ಕಾರ್ಯವನ್ನು ಶ್ಲಾಘಿಸಿದರು. 

ಮುಖ್ಯ ಅತಿಥಿಗಳು ಹಾಗೂ ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರು (ಪ್ರಭಾರ) ಡಾ. ಆರ್. ಕೃಷ್ಣಪ್ಪ, ಕರ್ನಾಟಕ ಲೋಕಾಯುಕ್ತದ ಉಪನಿಬಂಧಕರಾದ (ಆಡಳಿತ-1) ಶ್ರೀ ಎಸ್. ಸರವಣನ್, ಖ್ಯಾತ ಚಲನಚಿತ್ರ ನಟರು ಹಾಗೂ ಶಾಸ್ತ್ರೀಯ ನೃತ್ಯ ಗುರುಗಳಾದ ಡಾ. ಶ್ರೀಧರ್, ಮಾಜಿ ಶಾಸಕರು ಹಾಗೂ ಹಂಸಜ್ಯೋತಿ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಬಾಲರಾಜ್, ಹಿರಿಯ ರಂಗ ಸಂಘಟಕ ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶ್ರೀ ಶಿವಕುಮಾರ್ ಬೆಳ್ಳಿತಟ್ಟೆ, ಪೊಲೀಸ್ ಉಪಾಧೀಕ್ಷಕ ಶ್ರೀ ಬಿ.ಎಸ್. ಮೋಹನ್ ಕುಮಾರ್, ಮೊಳಕಾಲ್ಮೂರು ನಮ್ಮ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಶ್ರೀ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ವಿಶ್ವ ವೆಂಕಟೇಶ್ವರ ಇಂಟರ್‌ನ್ಯಾಷನಲ್ ಸ್ಕೂಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ. ಬಾಲಾಜಿ ಬಾಬು, ಸಮಾಜ ಸೇವಕ ಶ್ರೀ ಎಸ್.ಟಿ. ಉದಯಕುಮಾರ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಸೇವಾ ಕಾರ್ಯಕ್ರಮದ ಜೊತೆಗೆ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವು ನೆರೆದಿದ್ದವರ ಮನಸೂರೆಗೊಂಡಿತು. ಗಾಯಕ-ಗಾಯಕಿಯರಾದ ಶ್ರೀಮತಿ ಸ್ವಪ್ನ, ಮಂಜುನಾಥ್, ನಾಗಶ್ರೀ, ಸವಿಗಾನ ಮಂಜುನಾಥ್, ಸದಾನಂದ ಜಿ. ಕುರುಡಿಕೇರೆ ಹಾಗೂ ಎಂ. ಶ್ರೀನಿವಾಸಮೂರ್ತಿ ಅವರು ಸುಮಧುರ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿಶೇಷ ಗಾಯಕರಾಗಿ ಶ್ರೀ ಎಸ್. ಸರವಣನ್ ಹಾಗೂ ಶ್ರೀ ಎಸ್. ಬಾಲರಾಜ್ ಅವರು ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಹಂಸಜ್ಯೋತಿ ಟ್ರಸ್ಟ್‌ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಎಂ. ಮುರಳೀಧರ ಅವರು ಕಾರ್ಯಕ್ರಮದ ಪರಿಕಲ್ಪನೆ ಮತ್ತು ಪ್ರಧಾನ ನಿರ್ವಹಣೆಯೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಕಾರ್ಯನಿರ್ವಾಹಕ ಟ್ರಸ್ಟಿ ಶ್ರೀಮತಿ ವಿಜಯ ಮುರಳೀಧರ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಕರ್ನಾಟಕ ಪದ್ಮಶಾಲಿ ಮಹಿಳಾ ಸಮಾಜ, ಕಿಂಬರ್ಲಿ ಪ್ರಾಪರ್ಟೀಸ್, ಮಾರುತಿ ಸಿಲ್ಕ್ಸ್ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತ ಮತ್ತು ಸಿಬ್ಬಂದಿ ವರ್ಗದವರು ಸಹಕಾರ ನೀಡಿದ್ದರು.