ಕನಕ ಕವನ ಸ್ಪರ್ಧೆಯ ಬಹುಮಾನಕ್ಕೆ ಬಿ.ಎನ್.ದೊಡ್ಡಮನಿ ಆಯ್ಕೆ.
ಕನಕ ಕವನ ಸ್ಪರ್ಧೆಯ ಬಹುಮಾನಕ್ಕೆ ಬಿ.ಎನ್.ದೊಡ್ಡಮನಿ ಆಯ್ಕೆ.
ಶಹಪುರ : ಕನ್ನಡದ ಸಂತ ಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ ಬೆಂಗಳೂರು ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಕನಕ ಕವನ ಸ್ಪರ್ಧೆಯ ಬಹುಮಾನಕ್ಕೆ ತಾಲೂಕಿನ ಮಂಡಗಳ್ಳಿ ಗ್ರಾಮದ ಭೀಮಪ್ಪ ಎನ್.ದೊಡ್ಡಮನಿ ಆಯ್ಕೆಯಾಗಿದ್ದಾರೆ.
18 ರಿಂದ 40 ವರ್ಷದೊಳಗಿನ ಕವಿಗಳಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.ನುರಿತ ತಜ್ಞರ ಸಮಿತಿ ಪರಿಶೀಲಿಸಿ ಯುವ ಸ್ಪರ್ಧಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ ಎಂದು ಭೀಮಪ್ಪ ಎನ್. ದೊಡ್ಡಮನಿ ಅವರ ಗೆಳೆಯರ ಬಳಗ ಹರ್ಷ ವ್ಯಕ್ತಪಡಿಸಿದೆ.
ಕನಕದಾಸರ ವೈಚಾರಿಕತೆಯ ಚಿಂತನೆಗಳು ಮತ್ತು ಉತ್ತಮ ಸಂದೇಶಗಳನ್ನು ಯುವ ಸಮೂಹಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಜೊತೆಗೆ ಅವರಲ್ಲಿ ಸೃಜನಶೀಲತೆಯನ್ನು ಉದ್ದೀಪನ ಗೊಳಿಸುವ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅರಿತುಕೊಳ್ಳುವ ಸದುದ್ದೇಶದಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

