ಕಲಬುರ್ಗಿಯ ಕೇಂದ್ರೀಯ ವಿವಿಯಲ್ಲಿ ವಿಮರ್ಶೆಯ ತಾತ್ವಿಕರಣ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ ಮೂರು ದಿನಗಳ ಕಮ್ಮಟ
ಕಲಬುರ್ಗಿಯ ಕೇಂದ್ರೀಯ ವಿವಿಯಲ್ಲಿ ವಿಮರ್ಶೆಯ ತಾತ್ವಿಕರಣ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ ಮೂರು ದಿನಗಳ ಕಮ್ಮಟ
ಕನ್ನಡ ವಿಮರ್ಶೆಯ ತಾತ್ವಿಕರಣ ಇಂತಹ ಗಂಭೀರ ಹಾಗೂ ಮಹತ್ವದ ವಿಷಯ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ಕೇಂದ್ರಿಯ ವಿಶ್ವ ವಿದ್ಯಾಲಯ ಕಡಗಂಚಿ ಕಲಬುರ್ಗಿ ಇವರ ಸಹಯೋಗದಲ್ಲಿ ದಿನಾಂಕ ೭,೮,೯ ಮೂರು ದಿನಗಳ ಕಾಲ ಕಲಬುರಗಿಯ ಕೇಂದ್ರಿಯ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಮ್ಮಟ ಏರ್ಪಡಿಸಿದೆ. ನಾಡಿನ ಶ್ರೇಷ್ಠ ಸಾಹಿತ್ಯ ಚಿಂತಕರು ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ. ಕಮ್ಮಟದ ನಿರ್ದೇಶಕರಾಗಿ ಡಾ.ಬಸವರಾಜ ಕೋಡಗುಂಟಿ ಹಾಗೂ ಡಾ.ರಾಮಲಿಂಗಪ್ಪ ಬೇಗೂರು ಈ ಕಮ್ಮಟ ಸಂಘಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ದಿನಾಂಕ ೭-೧೦-೨೬ ರಂದು ಮುಂಜಾನೆ ಹತ್ತು ಗಂಟೆಗೆ ಈ ಕಮ್ಮಟ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ.ಶಿವಗಂಗಾ ರುಮ್ಮಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನಗಳ ಕಾಲ ನಾಡಿನ ಶ್ರೇಷ್ಠ ಅನೇಕ ಹೆಸರಾಂತ ವಿದ್ವಾಂಸರಾದ ಓಎಲ್ ಎನ್,, ಡಾ.ರಾಜೇಂದ್ರ ಚೆನ್ನಿ, ಡಾ.ಸತ್ಯನಾಥ್, ಡಾ.ತಾರಕೇಶ್ವರ್,ಪ್ರೊ. ಎಸ್.ಜಿ. ಸಿದ್ಧರಾಮಯ್ಯ,ಎಂ.ಎಸ್. ಆಶಾದೇವಿ ಒಳಗೊಂಡಂತೆ
ಇತ್ಯಾದಿ ವಿದ್ವಾಂಸರು ವಿಷಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ದಿನಾಂಕ ೯-೧೦-೨೬ ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಕಲ್ಯಾಣ ಕರ್ನಾಟಕದ ಸಾಹಿತ್ಯ ಆಸಕ್ತರು ಇದರ ಸದುಪಯೋಗ ಪಡೆಯಲು ಕೋರಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎಲ್. ಎನ್. ಕರಿಯಪ್ಪನವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

