ದಾಸ ಸಾಹಿತ್ಯದಲ್ಲಿ ಸ್ತ್ರೀಯರಿಗೆ ಮಾನ್ಯತೆ ನೀಡಿದ ಕನಕದಾಸರು - ಜ್ಯೋತಿಲತಾ ತಡಬಿಡಿಮಠ

ದಾಸ ಸಾಹಿತ್ಯದಲ್ಲಿ  ಸ್ತ್ರೀಯರಿಗೆ ಮಾನ್ಯತೆ ನೀಡಿದ ಕನಕದಾಸರು - ಜ್ಯೋತಿಲತಾ ತಡಬಿಡಿಮಠ

ದಾಸ ಸಾಹಿತ್ಯದಲ್ಲಿ ಸ್ತ್ರೀಯರಿಗೆ ಮಾನ್ಯತೆ ನೀಡಿದ ಕನಕದಾಸರು - ಜ್ಯೋತಿಲತಾ ತಡಬಿಡಿಮಠ

ಗುರುಮಠಕಲ್ : ಸ್ತ್ರೀಯರನ್ನು ಲೌಕಿಕ ಚೌಕಟ್ಟಿನಲ್ಲಿಡದೆ ಸಮಾಜದಲ್ಲಿ ಸ್ತ್ರೀಯರು, ಪುರುಷನಷ್ಟೇ ಸಮಾನರು ಎಂದು ಮಾನ್ಯತೆ ನೀಡಿರುವ ಸಾಂರಶ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಾರಿದ್ದಾರೆ ಎಂದು ಗುರುಮಠಕಲ್ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಉಪನ್ಯಾಸಕಿ ಜ್ಯೋತಿಲತಾ ತಡಬಿಡಿಮಠ ಹೇಳಿದರು.

ನಗರದ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನ್ನಡದ ಸಂತ ಕವಿ ಕನಕದಾಸರ ಕುರಿತು "ಕನಕ ದರ್ಶನ"ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಕನಕದಾಸರು ರಚಿಸಿದ ಮೋಹನ ತರಂಗಿಣಿ ಎಂಬ ಕೃತಿಯಲ್ಲಿ ಹೆಣ್ಣಿನ ಸೌಂದರ್ಯ,ಸ್ವಭಾವ ಮತ್ತು ಸಮಾಜದಲ್ಲಿ ಅವರ ಸ್ಥಾನಮಾನಗಳು ಅತ್ಯಂತ ವೈವಿಧ್ಯಮಯವಾಗಿ ಹಾಗೂ ಆಕರ್ಷಕವಾಗಿ ವರ್ಣಿಸಿದ್ದಾರೆ, ಅಲ್ಲದೆ ದಾಸ ಸಾಹಿತ್ಯದಲ್ಲಿ ಸ್ತ್ರೀಯರ ಬಗ್ಗೆ ಅಪಾರ ಗೌರವ,ಕಾಳಜಿ,ಪ್ರೀತಿ, ವಾತ್ಸಲ್ಯ,ಹಾಗೂ ಗೌರವಿಸುವುದನ್ನು ಕೀರ್ತನೆಗಳ ಮೂಲಕ ಮತ್ತೊಮ್ಮೆ ಸ್ತ್ರೀಪರ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ. 

ಕಾಲೇಜಿನ ಆಡಳಿತಾಧಿಕಾರಿಗಳಾದ ಜ್ಞಾನೇಶ್ವರರೆಡ್ಡಿ ಮಾತನಾಡಿ ಇಂತಹ ಮಹಾನ್ ಮೇಧಾವಿ ಹಾಗೂ ಕನ್ನಡದ ಸಂತ ಕವಿ ತತ್ವಪದಕಾರ ಕನಕದಾಸರ ಜೀವನ ದರ್ಶನ ಹಾಗೂ ಮೌಲ್ಯಯುತ ಅವರ ಬದುಕಿನ ಬಗ್ಗೆ ಈ ನಾಡಿಗೆ ಹಾಗೂ ಯುವ ಸಮೂಹಕ್ಕೆ ಪರಿಚಯಿಸುವುದರ ಜೊತೆಗೆ ದಾಸ ಸಾಹಿತ್ಯವನ್ನು ಪರಿಚಯಿಸುತ್ತಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.

ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಬಿ.ನಾಯ್ಕಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಕುರುಬರ ಸಂಘದ ಜಿಲ್ಲಾ ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ, ಯುವ ಮುಖಂಡರಾದ ರಾಮು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್ ಹಂದರಕಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳು ಆಡಿದರು ಈ ಕಾರ್ಯಕ್ರಮವನ್ನು ಸಾಬರೆಡ್ಡಿ ನಿರೂಪಿಸಿ ವಂದಿಸಿದರು.