ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಪದಾಧಿಕಾರಿಗಳ ವಿಸರ್ಜನೆ: ನಾಗೇಶ್ ಗದ್ದಿಗಿ ಪ್ರಕಟ

ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಪದಾಧಿಕಾರಿಗಳ ವಿಸರ್ಜನೆ: ನಾಗೇಶ್ ಗದ್ದಿಗಿ ಪ್ರಕಟ

ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಪದಾಧಿಕಾರಿಗಳ ವಿಸರ್ಜನೆ: ನಾಗೇಶ್ ಗದ್ದಿಗಿ ಪ್ರಕಟ

ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕಿನ ಎಲ್ಲಾ ಪದಾಧಿಕಾರಿಗಳಿಗೆ ಸಂಘಟನೆಯ ಧ್ಯೇಯೋದ್ದೇಶಗಳನ್ನು ಮತ್ತಷ್ಟು ಬಲಪಡಿಸಲು, ಸಂಘಟನಾತ್ಮಕ ಸುಧಾರಣೆಗಳನ್ನು ತರಲು ಮತ್ತು ಮುಂದಿನ ದಿನಗಳಲ್ಲಿ ಹೊಸ ಚೈತನ್ಯದೊಂದಿಗೆ ಕಾರ್ಯನಿರ್ವಹಿಸಲು ತಾಲೂಕಿನ ಎಲ್ಲಾ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ತಕ್ಷಣವೇ ವಿಸರ್ಜಿಸಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಗುರುಮಠಕಲ್ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ ಅವರು ಆದೇಶ ಹೊರಡಿಸಿದ್ದಾರೆ ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಯ ಕರ್ನಾಟಕ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷರಾದ ಬಿ ಎನ್ ವಿಶ್ವನಾಥ ನಾಯಕ ಅವರ ಆದೇಶದ ಮೇರೆಗೆ ಹಾಗೂ ಸಂಘಟನೆಯ, ತತ್ವ-ಸಿದ್ಧಾಂತ ಮತ್ತು ನಿಯಮಾವಳಿಗಳ ಅನ್ವಯ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಾಲಿ ಇರುವ ಸಂಘಟನೆಯ ಎಲ್ಲಾ ಕರ್ತವ್ಯ ನಿರ್ವಹಿಸುವ ಪದಾಧಿಕಾರಿಗಳು ಮತ್ತು ತಾಲೂಕು ಸದಸ್ಯರ ಎಲ್ಲಾ ಸ್ಥಾನಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶದೊಂದಿಗೆ ವಿಸರ್ಜಿಸಲಾಗಿದೆ, ಗುರುಮಠಕಲ್ ತಾಲೂಕು ಸಮಿತಿಯ ಪ್ರಸ್ತುತ ಜವಾಬ್ದಾರಿಯಲ್ಲಿದ್ದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಶೀಘ್ರದಲ್ಲೇ ಸಂಘಟನೆಯ ಹಿರಿಯ ನಾಯಕರ ಮತ್ತು ಸಕ್ರಿಯ ಕಾರ್ಯಕರ್ತರ ಸಮ್ಮುಖದಲ್ಲಿ ಗುರುಮಠಕಲ್ ತಾಲೂಕಿಗೆ ಹೊಸ ಪದಾಧಿಕಾರಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಿ ನೂತನ ತಾಲೂಕು ಪದಾಧಿಕಾರಿಗಳನ್ನು ನೇಮಿಸಲಾಗುವುದು ಅಲ್ಲಿಯವರೆಗೂ ಗುರುಮಠಕಲ್ ತಾಲೂಕಿನ ಸಂಘಟನಾತ್ಮಕ ನಿರ್ಧಾರಗಳು ಮತ್ತು ದೈನಂದಿನ ಚಟುವಟಿಕೆಗಳನ್ನು ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲೇ ನಡೆಯಲಿದೆ ಅಲ್ಲಿಯವರೆಗೂ ಯಾವ ಹಾಲಿ ಪದಾಧಿಕಾರಿಗಳು ಸಂಘಟನೆ ಹೆಸರನ್ನು ಬಳಕೆ ಮಾಡಬಾರದು ಎಂದು ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ ಅವರು ತಿಳಿಸಿದ್ದಾರೆ, ಕಳೆದ ಅವಧಿಯಲ್ಲಿ ಜಯ ಕರ್ನಾಟಕ ಸಂಘಟನೆಯ ಬೆಳವಣಿಗೆಗೆ ಮತ್ತು ಕನ್ನಡ ನಾಡು-ನುಡಿಯ ಸೇವೆಗೆ ಶ್ರಮಿಸಿದ ಗುರುಮಠಕಲ್ ತಾಲೂಕಿನ ಎಲ್ಲಾ ನಿರ್ಗಮಿತ ಪದಾಧಿಕಾರಿಗಳಿಗೆ ಸಂಘಟನೆಯ ಪರವಾಗಿ ಧನ್ಯವಾದಗಳು ತಿಳಿಸಿದ್ದಾರೆ.