ಕಸಾಪ ಟೆಂಗಳಿ ವಲಯ ಘಟಕದಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ ಸಂದರ್ಭದಲ್ಲಿ ಶಿಕ್ಷಕರಿಗೆ ಸನ್ಮಾನ
ಕಸಾಪ ಟೆಂಗಳಿ ವಲಯ ಘಟಕದಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ ಸಂದರ್ಭದಲ್ಲಿ ಶಿಕ್ಷಕರಿಗೆ ಸನ್ಮಾನ
ಅಕ್ಟೋಬರ್ ೨ ರಂದು ಕಾಳಗಿ ತಾಲ್ಲೂಕಿನ ಟೆಂಗಳಿ ಗ್ರಾಮದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಟೆಂಗಳಿ ವಲಯ ಘಟಕದ ವತಿಯಿಂದ ಶಿಕ್ಷಕರ, ಇಂಜಿನಿಯರ್ಸ್ ದಿನಾಚರಣೆ, ಮಹಾತ್ಮ ಗಾಂಧೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀಜಿ ಜಯಂತಿ ಆಚರಣೆಯ ನಂತರ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಸತ್ಯ ಮತ್ತು ಅಹಿಂಸೆ ತತ್ವಗಳ ಕೊಡುಗೆ ಸರಳತೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಲಾಲ ಬಹಾದ್ದೂರ ಶಾಸ್ತ್ರೀಜಿ ಎನ್ನುತ್ತ ಅವರ ದೇಶ ಪ್ರೇಮ ದೇಶ ಸೇವೆ ಕುರಿತು ಕಾರ್ಯಕ್ರಮ ಉದ್ಘಾಟಿಸಿದ ಮಲ್ಲಿನಾಥ ದೇಶಮುಖ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯೆ ಕಲಿಸಿದ ಶಿಕ್ಷಕ ಗುರುವಿನ ಪಾತ್ರ ಪ್ರಮುಖವಾಗುತ್ತದೆ. ಹಾಗಾಗಿ ಗುರುವಿನ ಸ್ಥಾನ ಅತ್ಯಂತ ಪ್ರಮುಖವಾದದ್ದು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸೇವಂತಾ ಚವ್ಹಾಣ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶರಣಬಸಪ್ಪ ಧನೋಜಿ, ತಾಲೂಕು ಮಟ್ಟದ ಪ್ರಶಸ್ತಿ ಪಡೆದ ಪ್ರಕಾಶ ಕೊಟ್ರೆ, ಸೈಯದ ಬೇಗಂ ಅವರನ್ನು ಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ೨೫ ಶಿಕ್ಷಕರಿಗೆ ೨೫ ಇಂಜಿನಿಯರ್‌ಗಳಿಗೆ ದಿನಾಚರಣೆ ನಿಮಿತ್ಯ ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಲಾಯಿತು.
ಕ.ಸಾ.ಪ. ಟೆಂಗಳಿ ವಲಯ ಘಟಕದ ಅಧ್ಯಕ್ಷ ಭೀಮಾಶಂಕರ ಅಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಂಡಪ್ಪ ಪಟೇದ ಸ್ವಾಗತಿಸಿದರು. ಪರಮೇಶ್ವರ ಟೆಂಗಳಿಕರ್ ವಂದಿಸಿದರು. ಭಾರತಿ ಜಿ. ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಟೆಂಗಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಜಯಶ್ರೀ ಶಿಕ್ಷಕರಾದ ಗೀತಾ ಪಾಟೀಲ, ಮಲ್ಲಣ್ಣ ಹರಸೂರ, ಶಂಭುಲಿಂಗ ಗೋಗಿ, ಉಮಾ ಚೇಂಗಟೆ, ನಿರ್ಮಲಾ ದೇವಿ ಪೂಜಾರಿ, ಬಸಮ್ಮ ಹಲಚೇರಿ, ಮಲ್ಲಿಕಾರ್ಜುನ ಯಂಕಂಚಿ, ಕಟ್ಟೆಪ್ಪ ಅಂಕಲಗಿ ಗಂಗಾಧರ ಸಾಲಳ್ಳಿ, ಜಯಶ್ರೀ, ಸಬೀನಾ ಸುಲ್ತಾನ, ಶಿಲ್ಪಾ ಧಾನಾಗುಂದಿ, ಪೂಜಾ ಜೌಸಂಗ್, ಗೀತಾ, ಕು. ಅಕ್ಷತಾ, ಕು. ಭಾಗ್ಯಶ್ರೀ, ಕು. ಚನ್ನಮ್ಮ ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ರಾಜು ಪಟೇದ, ಡಾ. ವಿವೇಕಾನಂದ ಬುಳ್ಳಾ, ವಿಶ್ವನಾಥ ಬಾಳದೆ, ಹಣಮಂತರಾಯ ಬಾಳದೆ, ವಿರೇಶ ಬೈರಿ, ಮಹೇಶ ಮಠಪತಿ,

