ಜೇವರ್ಗಿ ತಾಲೂಕಿನಲ್ಲಿರುವ ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಕರವೇ ಮನವಿ

ಜೇವರ್ಗಿ ತಾಲೂಕಿನಲ್ಲಿರುವ ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಕರವೇ ಮನವಿ

ಜೇವರ್ಗಿ ತಾಲೂಕಿನಲ್ಲಿರುವ ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಕರವೇ ಮನವಿ

ಕಲಬುರಗಿ: ಜೇವರ್ಗಿ ತಾಲೂಕು ಮತ್ತು ಯಡ್ರಾಮಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ನಿಲಯಗಳು ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸರಕಾರದಿಂದ ಇರುವ ಸೌಲಭ್ಯಗಳು ಸಿಗುತ್ತಿಲ್ಲ. ತಾಲೂಕು ಕಲ್ಯಾಣಾಧಿಕಾರಿಯಾಗಿರುವ ಶ್ರೀಮತಿ ಬಸ್ಸಮ್ಮಾ ಪಾಟೀಲ್ ಇವರು ಕೇಂದ್ರ ಕಛೇರಿಯಲ್ಲಿ ನಿರಂತರವಾಗಿ ಇರದೇ ವಸತಿ ನಿಲಯಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿಲ್ಲ

ಎಂದು ಆರೋಪಿಸಿ ಕರವೇ(ಪ್ರವೀಣ ಶೆಟ್ಟಿ)ಬಣದ ಜಿಲ್ಲಾಧ್ಯಕ್ಷ ವಿಶ್ವನಾಥ ಜಿ ಪಾಟೀಲ ಹಾಗೂ ಜೇವರ್ಗಿ ತಾಲೂಕು ಅಧ್ಯಕ್ಷ ರಾಜಶೇಖರ ಭಂಟನೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

  ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಅವರು, ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಕುಂಠಿತವಾಗುತ್ತಿದೆ. ಮತ್ತು ಗುಣಮಟ್ಟದ ಆಹಾರ ನೀಡದೇ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಿಚಾರಿಸಿದಾಗ,ಮೆನುಚಾರ್ಟ್ ಪ್ರಕಾರ ನಮಗೆ ಊಟ ನೀಡುತ್ತಿಲ್ಲ ಹಾಗೂ ಸೂಕ್ತವಾಗಿ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ ಎಂದು ಹೇಳಿಕೆ ನೀಡಿರುತ್ತಾರೆ. ಟೆಂಡರ್‌ದಾರರೊಂದಿಗೆ ಶಾಮೀಲಾಗಿ ವಸತಿ ನಿಲಯಗಳಿಗೆ ಆಹಾರ ಧಾನ್ಯಗಳನ್ನು ವಸತಿ ನಿಲಯಗಳಿಗೆ ಪೂರೈಸದೇ ಅಕ್ರಮ ಎಸಗಿದ್ದು, ನೇರವಾಗಿ ಟೆಂಡರ್‌ ಹರಾಜು ಪಡೆದು ಅಕ್ರಮ ಎಸಗಿದ್ದಾರೆ. ಗುತ್ತಿಗೆದಾರರಿಂದ ಸರಕಾರದ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಕೊಡಿಸುವಲ್ಲಿ ವಿಫಲರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಹಾಸಿಗೆ-ಹೊದಿಕೆ ಇರುವುದಿಲ್ಲ. ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ ಮತ್ತು ಬಳಕೆಯಾಗುತ್ತಿಲ್ಲ ಆದರೂ ಸಹ ಶೌಚಾಲಯಗಳ ಬಿಲ್ ಎತ್ತಿ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಎಲ್ಲಾ ವಸತಿ ನಿಲಯಗಳು ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಸರಕಾರದಿಂದ ಬಿಡುಗಡೆಯಾಗುವ ಸಾಮಗ್ರಿಗಳು ಮತ್ತು ಮೂಲ ಸೌಕರ್ಯಗಳು ವಸತಿ ನಿಲಯಗಳಿಗೆ ತಲುಪುತ್ತಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವಾರದೊಳಗಾಗಿ ಕ್ರಮ ಜರುಗಿಸದಿದ್ದರೆ ತಾಲೂಕು ತಹಸೀಲ್ದಾರರ ಕಾರ್ಯಾಲಯ ಜೇವರ್ಗಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.