21ರಂದು ಹೊನ್ಕಲ್,ಮಡ್ನಾಳ,ಬೆಳ್ಳಿಗೆ ಅಭಿನಂದನಾ ಸಮಾರಂಭ.

21ರಂದು ಹೊನ್ಕಲ್,ಮಡ್ನಾಳ,ಬೆಳ್ಳಿಗೆ ಅಭಿನಂದನಾ ಸಮಾರಂಭ.

21ರಂದು ಹೊನ್ಕಲ್,ಮಡ್ನಾಳ,ಬೆಳ್ಳಿಗೆ ಅಭಿನಂದನಾ ಸಮಾರಂಭ.

ಶಹಪುರ : ಇತ್ತೀಚಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಾ.ಸಿದ್ದರಾಮ ಹೊನ್ಕಲ್, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಶರಣಪ್ಪ ಪೂಜಾರಿ ಮಡ್ನಾಳ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಚಿತ್ರ ಕಲಾವಿದ ಮೇಘನಾಥ್ ಬೆಳ್ಳಿಯವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಕಟಣೆಗೆ ತಿಳಿಸಿದ್ದಾರೆ.

ಪಟ್ಟಣದ ಕೆಇಬಿ ಎದುರುಗಡೆಯ ಬಾಪುಗೌಡ ನಗರದಲ್ಲಿರುವ ಹೋಟೆಲ್ ಮಾತೋಶ್ರೀ ಸಭಾಂಗಣದಲ್ಲಿ ಇದೇ ತಿಂಗಳು 21ರಂದು ಶನಿವಾರ ಇಳಿಹೊತ್ತು 3:30ಕ್ಕೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು,ಹಿತೈಷಿಗಳು, ಪ್ರಗತಿಪರಚಿಂತಕರು,ಬರಹಗಾರರು,ಕವಿಗಳು,ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವು.