ಕಾಳಗಿ-ಚಿಂಚೋಳಿ ತಾಲೂಕಿನ ರೈತರಿಗೆ ಎದುರಾಗಿರುವ ಸಂಕಷ್ಟಗಳಿಗೆ ಡಾ. ಉಮೇಶ ಜಾಧವ್ ಮತ್ತು ಶಾಸಕ ಡಾ. ಅವಿನಾಶ ಜಾಧವ ಕಾರಣ : ಕೆಪಿಸಿಸಿ ಉಪಾಧ್ಯಕ್ಷ ರಾಠೋಡ ಆರೋಪ
ಕಾಳಗಿ-ಚಿಂಚೋಳಿ ತಾಲೂಕಿನ ರೈತರಿಗೆ ಎದುರಾಗಿರುವ ಸಂಕಷ್ಟಗಳಿಗೆ ಡಾ. ಉಮೇಶ ಜಾಧವ್ ಮತ್ತು ಶಾಸಕ ಡಾ. ಅವಿನಾಶ ಜಾಧವ ಕಾರಣ : ಕೆಪಿಸಿಸಿ ಉಪಾಧ್ಯಕ್ಷ ರಾಠೋಡ ಆರೋಪ
ಸಕ್ಕರೆ ಬದಲು ಎಥಿನಾಲ್ ಉತ್ಪಾಸಿಸುತ್ತಿದ್ದ ಸಿದ್ಧಸಿರಿ ಕಾರ್ಖಾನೆಗೆ ಕೇಂದ್ರ ಸರಕಾರ ತಡೆ | ಕಾರ್ಖಾನೆಗೆ ನಂಬಿ ಕಬ್ಬು ಬೆಳೆದ ರೈತರಿಗೆ ದೊಡ್ಡ ಮೋಸವಾಗಿದೆ : ಸುಭಾಶ ರಾಠೋಡ
ಚಿಂಚೋಳಿ : ಕಾಳಗಿ-ಚಿಂಚೋಳಿ ತಾಲೂಕಿನ ರೈತರು ಬೆಳೆದ ಕಬ್ಬು ಸಾಗಿಸಲು ಪಡುತ್ತಿರುವ ಸಂಕಷ್ಟಗಳು ಉದ್ಭವಗೊಳಲು ಮಾಜಿ ಸಂಸದ ಡಾ. ಉಮೇಶ ಜಾಧವ್ ಹಾಗೂ ಪತ್ರ ಶಾಸಕ ಡಾ. ಅವಿನಾಶ ಜಾಧವ್ ಅವರೆ ಇದಕ್ಕೆ ಪ್ರಮುಖ ಮೂಲ ಕಾರಣಕರ್ತರು ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಶ ರಾಠೋಡ ಅವರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಚಿಂಚೋಳಿ ಭಾಗದ ರೈತರು ಆರ್ಥಿಕವಾಗಿ ಬಲಿಷ್ಠ ಆಗಬೇಕೆಂಬ ಸದುದೇಶಿದಿಂದ ಮಾಜಿ ಸಚಿವ ದಿ.ವೈಜಿನಾಥ ಪಾಟೀಲ್ ರು ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸರಕಾರದ ಅನುಮತಿ ಪಡೆದು ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ಅದು ಕೆಲವು ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಸಕ್ಕರೆ ಪ್ರಾರಂಭವಾಗದೆ ಉಳಿದುಕೊಂಡಿತ್ತು. ಬಿಜೆಪಿ ನಾಯಕರು ಉಪಚುನಾವಣೆಗಳು ಜರುಗಿದ ಸಂದರ್ಭದಲ್ಲಿ ಚಿಂಚೋಳಿಯಲ್ಲಿ ಸಕ್ಕರೆ ಉತ್ಪಾದಿಸುವ ಕಾರ್ಖಾನೆ ಪ್ರಾರಂಭಿಸಲಾಗುತ್ತದೆ ಎಂದು ಕ್ಷೇತ್ರದ ಜನತೆಗೆ ವಾಗ್ದಾನ ನೀಡದರು. ಇದಕ್ಕೆ ಬಿಜಾಪೂರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಕೂಡ ಸಕ್ಕರೆ ಉತ್ಪಾದನೆ ಕಾರ್ಖಾನೆ ಪಾರಂಭಿಸಲಾಗುವುದು ರೈತರೆಲ್ಲರು ಧೈರ್ಯದಿಂದ ಕಬ್ಬು ಬೆಳೆಯಲು ಪ್ರಾರಂಭಿಸಿ ಎಂದು ಡಾ. ಉಮೇಶ ಜಾಧವ್ ಅವರ ಸಮುಖದಲ್ಲಿಯೇ ಹೇಳಿದರು.ಅದರಂತೆ ಸಕ್ಕರೆ ಕಾರ್ಖಾನೆ ಪ್ರಾರಂಭ ಆಗುತ್ತಿದೆಂಬ ಈ ಭಾಗದ ಎಲ್ಲರಲ್ಲಿ ಸಂತಸ ಮೂಡಿತ್ತು. ಆದರೆ ಮಾತು ನೀಡಿದಂತೆ ಸಕ್ಕರೆ ಉತ್ಪಾದನೆ ಮಾಡದೇ ಎಥಿನಾಲ್ ಉತ್ಪಾದನೆ ಮಾಡಲು ಸಿದ್ಧಸಿರಿ ಎಥಿನಾಲ್ ಕಾರ್ಖಾನೆ ಪ್ರಾರಂಭಿಸಿ ಮುನ್ನಡೆಸಿತ್ತು. ಸಿದ್ಧಸಿರಿ ಕಾರ್ಖಾನೆ ಉದ್ದೇಶಿತ ಸಕ್ಕರೆ ಉತ್ಪಾದನೆಯನ್ನೆ ಮಾಡಲು ಪ್ರಾರಂಭಿಸಿದರೆ ಇವತ್ತು ಸಿದ್ಧಸಿರಿ ಕಾರ್ಖಾನೆಗೆ ನಂಬಿಕೊಂಡು ಬೆಳೆದ ಕಾಳಗಿ-ಚಿಂಚೋಳಿ ತಾಲೂಖಿನ ಕಬ್ಬು ಬೆಳಗಾರರು ಕಬ್ಬು ಸಾಗಿಸಲು ಸಂಕಷ್ಟಗಳು ಎದುರಾಗುತ್ತಿರಲಿಲ್ಲ. ರೈತರಿಗೆ ಎದುರಾಗುತ್ತಿರವ ಸಂಕಷ್ಟಗಳಿಗೆ ಡಾ. ಉಮೇಶ ಜಾಧವ್ ಮತ್ತು ಮಗ ಶಾಸಕ ಡಾ. ಅವಿನಾಶ ಜಾಧವ್ ಅವರೆ ಹೊಣೆಗಾರರು. ಉಪಚುನಾವಣೆಯಲ್ಲಿ ರೈತರಿಗೆ ತಿಳಿಸಿದಂತೆ ಸಕ್ಕರೆ ಉತ್ಪಾದಿಸುವ ಕಾರ್ಖಾನೆ ಪ್ರಾರಂಭಾಗಿದ್ದರೆ ಇವತ್ತು ರೈತರು ಕಷ್ಟದ ಪರಿಸ್ಥಿತಿಗಳು ಎದುರಾರಗುತ್ತಿರಲಿಲ್ಲ. ಸಿದ್ಧಸಿರಿ ಕಾರ್ಖಾನೆ ಎಥಿನಾಲ್ ಉತ್ಪಾದಿಸುವ ಉದ್ದೇಶದ ಬಗ್ಗೆ ಡಾ. ಉಮೇಶ ಜಾಧವ ಮತ್ತು ಮಗ ಶಾಸಕ ಡಾ. ಅವಿನಾಶ ಜಾಧವ ಅವರಿಗೆ ಅರಿವಿದ್ದರೂ ಕೂಡ ಮೌನವಾಗಿ ಇದ್ದು ಎಥಿನಾಲ್ ಉತ್ಪಾದನೆಗೆ ಬೆಂಬಲವಾಗಿ ನಿಂತಿದ್ದರಿಂದ ಇವತ್ತು ರೈತರು ಬಿದಿಗೆ ಬಿಳುವಂತೆ ಮಾಡಿ, ರೈತರಿಗೆ ದೊಡ್ಡ ಮೊಸ ಮಾಡಿದ್ದಾರೆ ಎಂದು ಆರೋಪಿಸಿದರು. ಉದ್ದೇಶಿತ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಸಕ್ಕರೆ ಉತ್ಪಾದನೆಗೆ ಕ್ರಮವಹಿಸಿದರೆ ಕೇಂದ್ರ ಸರಕಾರ ಕಾರ್ಖಾನೆಗೆ ತಡೆ ನಿಡುತ್ತಿರಲಿಲ್ಲ. ಸಿದ್ಧಸಿರಿ ಎಥಿನಾಲ್ ಕಾರ್ಖಾನೆಗೆ ಒಂದು ಕೆಜಿ ಸಕ್ಕರೆ ಉತ್ಪಾದಿಸುವ ಸಾಮರ್ಥ್ಯ ಇಲ್ಲ. ಈ ಕಾರಣಕ್ಕಾಗಿ ಕೇಂದ್ರ ಸರಕಾರ ಎಥಿನಾಲ್ ಕಾರ್ಖಾನೆಗೆ ಉತ್ಪಾದನೆಗೆ ತಡೆ ನೀಡಿದೆ. ರಾಜ್ಯಸರಕಾರ ಮತ್ತು ಜಿಲ್ಲಾಡಳಿತ ರೈತರ ಪರ ಇದೆ. ಸಚಿವ ಶರಣಪ್ರಕಾಶ ಪಾಟೀಲರು ಹಾಗೂ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರು ರೈತರೊಂದಿಗೆ ಸಭೆ ನಡೆಸಲಾಗಿದೆ. ರೈತರ ಕಬ್ಬು ಸಾಗಿಸಲು ಎಲ್ಲಾ ಕ್ರಮಗಳು ಕೈಗೊಳಲಾಗುತ್ತಿದ್ದು, ಕಬ್ಬು ಉಳಿಯುವ ಪ್ರಶ್ನೆ ಉದ್ಭವಿಸಲು ಬಿಡುವುದಿಲ್ಲ ಎಂದು ಸುಭಾಶ ರಾಠೋಡ ತಿಳಿಸಿದರು.
ಈ ಸಂದರ್ಭದಲ್ಲಿ ಬಾಲಭವನ ಉಪಾಧ್ಯಕ್ಷ ಅನೀಲ ಜಮಾದಾರ, ಬ್ಲಾಕ್ ಅಧ್ಯಕ್ಷ ಬಸವರಾಜ ಮಾಲಿ, ಲಕ್ಷ್ಮಣ ಆವಂಟಿ, ಶರಣು ಪಾಟೀಲ್, ನಾಗೇಶ ಗುಣಾಜಿ, ಜಗನ್ನಾಥ ಕಟ್ಟಿ, ಆನಂದ ಟೈಗರ್, ಸಂತೋಷ ಗುತ್ತೇದಾರ ಅವರು ಇದ್ದರು.

