ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ರಾಷ್ಟ್ರ ಸೇವೆಯ ಸಂಕಲ್ಪಕ್ಕೆ ಬಲ : ಡಾ. ಉಮೇಶ್ ಜಾಧವ್ ಸ್ವಾತಂತ್ರ್ಯಹೋರಾಟಗಾರ ರಾಮಾಚಾರ್ಯ ನವಲಿ ಜೊತೆ ಆತ್ಮೀಯ ಸಂವಾದ

ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ರಾಷ್ಟ್ರ ಸೇವೆಯ ಸಂಕಲ್ಪಕ್ಕೆ ಬಲ : ಡಾ. ಉಮೇಶ್ ಜಾಧವ್  ಸ್ವಾತಂತ್ರ್ಯಹೋರಾಟಗಾರ ರಾಮಾಚಾರ್ಯ ನವಲಿ ಜೊತೆ ಆತ್ಮೀಯ ಸಂವಾದ

ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ರಾಷ್ಟ್ರ ಸೇವೆಯ ಸಂಕಲ್ಪಕ್ಕೆ ಬಲ : ಡಾ. ಉಮೇಶ್ ಜಾಧವ್

ಸ್ವಾತಂತ್ರ್ಯಹೋರಾಟಗಾರ ರಾಮಾಚಾರ್ಯ ನವಲಿ ಜೊತೆ ಆತ್ಮೀಯ ಸಂವಾದ

 ಕಲಬುರಗಿ : ಸ್ವಾತಂತ್ರ್ಯ ಯೋಧರ ಆದರ್ಶ ಅವರ ಸಮಾಜ ಸೇವೆ ಜನಸೇವೆಯು ರಾಷ್ಟ್ರ ಸೇವಾ ಸಂಕಲ್ಪಕ್ಕೆ ಶಕ್ತಿ ತುಂಬುತ್ತದೆ ಯುವ ಜನತೆ ಅಂತಹ ಮಹಾನ್ ವ್ಯಕ್ತಿಗಳ ಹೆಜ್ಜೆಯಲ್ಲಿ ನಡೆದು ರಾಷ್ಟ್ರ ಸೇವೆಗೆ ಮುಂದಾಗಬೇಕು ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಹೇಳಿದರು.

   ಕಲಬುರ್ಗಿಯಲ್ಲಿ ಗುರುವಾರ ಅಕ್ಟೋಬರ್ ಒಂದರಂದು ಸಂತ ಸೇವಾಲಾಲ್ ಪ್ರಭಾತ ಸಪ್ತಾಹ ಶಾಖೆಯ ಶಾಖೆಯು ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮನೆ ಮನೆ ಸಂಪರ್ಕ ಅಭಿಯಾನದ ಅಂಗವಾಗಿ 99ರ ಹರೆಯದ, ವಯೋವೃದ್ಧರು ಜ್ಞಾನ ವೃದ್ಧರು ಆಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ರಾಮಾಚಾರ್ಯ ನವಲಿ ಅವರ ಮನೆಗೆ ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಮಾತನಾಡಿ ಸ್ವಾತಂತ್ರ್ಯ ಯೋಧರ ಜೊತೆ ಅವರ ಜೀವನ ಅನುಭವ ದೇಶಕ್ಕಾಗಿ ಅವರ ತ್ಯಾಗಮಯ ಜೀವನ ಸವೆಸಿದ ನೆನಪುಗಳನ್ನು ಆತ್ಮೀಯವಾಗಿ ಹಂಚಿಕೆ ಮಾಡಿಕೊಳ್ಳುವ ಸದಾ ಅವಕಾಶ ಲಭಿಸಿದ್ದಕ್ಕೆ ಧನ್ಯನಾಗಿದ್ದೇನೆ. ಸಮಾಜವನ್ನು ರಾಷ್ಟ್ರೀಯ ವಿಚಾರಧಾರೆಗಳೊಂದಿಗೆ ಕಟ್ಟುವ ಹಾಗೂ ವ್ಯಕ್ತಿ ಮತ್ತು ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಸಂಕಲ್ಪವನ್ನು ಬೋಧಿಸಿದ ನವಲಿಯವರ ಅನುಭವದ ಮಾತು ಯುವ ಜನತೆಗೆ ಪ್ರೇರಣೆಯಾಗಲಿ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ತ್ಯಾಗ ಬದ್ಧತೆಯಿಂದ ಯುವಕರು ಜೀವನ ನಡೆಸಿ ಆದರ್ಶ ಬದುಕು ನಡೆಸುವಂತಾಗಲಿ ಎಂದು ಡಾ.ಜಾಧವ್ ಹೇಳಿದರು.

   ಪ್ರಭಾತ ಸಪ್ತಾಹದ ಮನೆ ಮನೆ ಭೇಟಿ ವೇಳೆ ಅರವಿಂದ ನವಲಿ, ರಾಮಚಂದ್ರ ಜಾಧವ್, ವಿಷ್ಣು ತೀರ್ಥನವಲಿ ಪ್ರಕಾಶ್ ಪವಾರ್ ಪ್ರಹ್ಲಾದ ಮಠ ಮಾರಿ,ನಾಗೇಶ್ ಕೃಷ್ಣ ಮಳ್ಳಿ ಮತ್ತು ರಮೇಶ್ ರಾಠೋಡ್ ಉಪಸ್ಥಿತರಿದ್ದರು